IND vs ENG 5th T20 Highlights: 98 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್
India vs England 5th T20I Highlights in Kannada: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 150 ರನ್‌ಗಳ ಜಯ ಸಾಧಿಸಿ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ನಡೆಯಿತು. ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ನಿಂದಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 247 ರನ್ ಗಳಿಸಿತು. ಉತ್ತರವಾಗಿ ಇಂಗ್ಲೆಂಡ್ ತಂಡ ಕೇವಲ 97 ರನ್ ಗಳಿಸಲಷ್ಟೇ ಶಕ್ತವಾಗಿ 11ನೇ ಓವರ್‌ನಲ್ಲಿ ಆಲೌಟ್ ಆಯಿತು. ಟೀಂ ಇಂಡಿಯಾ ಐದನೇ ಟಿ20ಯನ್ನು 150 ರನ್‌ಗಳಿಂದ ಗೆದ್ದು ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿದೆ.
LIVE NEWS & UPDATES
-
IND vs ENG 5th T20I: ಇಂಗ್ಲೆಂಡ್ 97 ರನ್‌ಗಳಿಗೆ ಆಲೌಟ್
ಇಂಗ್ಲೆಂಡ್ ತಂಡ 97 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಈ ಪಂದ್ಯವನ್ನು ಟೀಂ ಇಂಡಿಯಾ 150 ರನ್‌ಗಳಿಂದ ಗೆದ್ದುಕೊಂಡಿದೆ. ಮೊಹಮ್ಮದ್ ಶಮಿ ಭಾರತದ ಪರ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಿವಂ ದುಬೆ ಮತ್ತು ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದರು. ರವಿ ಬಿಷ್ಣೋಯ್ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.
-
IND vs ENG 5th T20I: ಶಮಿಗೆ ಎರಡನೇ ವಿಕೆಟ್
ಇಂಗ್ಲೆಂಡ್ 97 ರನ್ ಗಳಿಗೆ 9ನೇ ವಿಕೆಟ್ ಕಳೆದುಕೊಂಡಿದೆ. ಆದಿಲ್ ರಶೀದ್ ಅವರನ್ನು ಔಟ್ ಮಾಡುವ ಮೂಲಕ ಮೊಹಮ್ಮದ್ ಶಮಿ ಎರಡನೇ ವಿಕೆಟ್ ಪಡೆದರು.
-
IND vs ENG 5th T20I: ಅಭಿಷೇಕ್ಗೆ ಎರಡನೇ ವಿಕೆಟ್
ಅಭಿಷೇಕ್ ಶರ್ಮಾ ಮತ್ತೊಂದು ವಿಕೆಟ್ ಪಡೆದರು. ಈ ಬಾರಿ ಅವರು ಜೇಮಿ ಓವರ್ಟನ್ ಅವರನ್ನು ಬಲಿಪಶು ಮಾಡಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ 90 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದೆ.
IND vs ENG 5th T20I: ಆರನೇ ಹೊಡೆತ
ಇಂಗ್ಲೆಂಡ್ ತಂಡ 88 ರನ್ ಗಳಿಸುವಷ್ಟರಲ್ಲಿ ಆರನೇ ವಿಕೆಟ್ ಕಳೆದುಕೊಂಡಿತು. ಬ್ಯಾಟ್ಸ್ ಮನ್ ಆಗಿ ಸಂಚಲನ ಮೂಡಿಸಿದ್ದ ಅಭಿಷೇಕ್ ಶರ್ಮಾ ಇದೀಗ ವಿಕೆಟ್ ಕೂಡ ಕಬಳಿಸಿದ್ದಾರೆ. ಅವರು ಬ್ರೇಡನ್ ಕಾರ್ಸ್ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.
IND vs ENG 5th T20I: ಸಾಲ್ಟ್ ಔಟ್
ಫಿಲ್ ಸಾಲ್ಟ್ 23 ಎಸೆತಗಳಲ್ಲಿ 55 ರನ್ ಗಳಿಸಿ ಔಟಾದರು. ಶಿವಂ ದುಬೆ ಈ ವಿಕೆಟ್ ಪಡೆದರು.
IND vs ENG 5th T20I: ಸಾಲ್ಟ್ ಅರ್ಧಶತಕ
ಫಿಲ್ ಸಾಲ್ಟ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
IND vs ENG 5th T20I: ನಾಲ್ಕನೇ ಹೊಡೆತ
ಇಂಗ್ಲೆಂಡ್ 68 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಲಿಯಾಮ್ ಲಿವಿಂಗ್‌ಸ್ಟನ್ 9 ರನ್ ಗಳಿಸಿದ ಬಳಿಕ ವರುಣ್ ಚಕ್ರವರ್ತಿಗೆ ಬಲಿಯಾದರು.
IND vs ENG 5th T20I: 3ನೇ ವಿಕೆಟ್
ಇಂಗ್ಲೆಂಡ್ 59 ರನ್ ಗಳಿಸುವಷ್ಟರಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ಹ್ಯಾರಿ ಬ್ರೂಕ್ 4 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು.
IND vs ENG 5th T20I: ಬಟ್ಲರ್ ಔಟ್
ವರುಣ್ ಚಕ್ರವರ್ತಿ ತಮ್ಮ ಮೊದಲ ಎಸೆತದಲ್ಲೇ ಇಂಗ್ಲೆಂಡ್‌ಗೆ ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಜೋಸ್ ಬಟ್ಲರ್ 7 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ಇಂಗ್ಲೆಂಡ್ 48 ರನ್ ಗಳಿಸುವಷ್ಟರಲ್ಲಿ ಈ ವಿಕೆಟ್ ಕಳೆದುಕೊಂಡಿತು.
IND vs ENG 5th T20I: ಡಕೆಟ್ ಔಟ್
ಇಂಗ್ಲೆಂಡ್ 23 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಖಾತೆ ತೆರೆಯದೆ ಬೆನ್ ಡಕೆಟ್ ಔಟ್ ಆಗಿದ್ದಾರೆ. ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದ್ದಾರೆ.
IND vs ENG 5th T20I: 2 ಓವರ್ ಅಂತ್ಯ
ಇಂಗ್ಲೆಂಡ್ ತಂಡ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ತಂಡಕ್ಕೆ ಉತ್ತಮ ಆರಂಭ ನೀಡಿದರು.
IND vs ENG 5th T20I: 248 ರನ್ ಗುರಿ
ಟೀಂ ಇಂಡಿಯಾ ಇನ್ನಿಂಗ್ಸ್ ಪೂರ್ಣಗೊಂಡಿದೆ. ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 247 ರನ್ ಗಳಿಸಿದೆ. ಈ ಇನ್ನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ ಗರಿಷ್ಠ 135 ರನ್ ಗಳಿಸಿದರೆ, ಶಿವಂ ದುಬೆ 30 ರನ್ ಮತ್ತು ತಿಲಕ್ ವರ್ಮಾ 24 ರನ್ ಕೊಡುಗೆ ನೀಡಿದರು. ಮತ್ತೊಂದೆಡೆ, ಇಂಗ್ಲೆಂಡ್ ಪರ ಬ್ರೇಡನ್ ಕಾರ್ಸೆ ಗರಿಷ್ಠ 3 ವಿಕೆಟ್ ಪಡೆದರು.
IND vs ENG 5th T20I: ಅಭಿ ಔಟ್
237 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ 7ನೇ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 135 ರನ್ ಗಳಿಸಿ ಔಟಾದರು.
IND vs ENG 5th T20I: 200 ರನ್ ಪೂರ್ಣ
16ನೇ ಓವರ್‌ನಲ್ಲಿ ಟೀಂ ಇಂಡಿಯಾ 200 ರನ್‌ಗಳ ಗಡಿ ದಾಟಿದೆ. ಅಭಿಷೇಕ್ ಶರ್ಮಾ ಇನ್ನೂ ಕ್ರೀಸ್ ನಲ್ಲಿದ್ದು ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ.
IND vs ENG 5th T20I: ನಾಲ್ಕನೇ ವಿಕೆಟ್
182 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಶಿವಂ ದುಬೆ 13 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು.
IND vs ENG 5th T20I: 13 ಓವರ್‌ಗಳ ಆಟ ಪೂರ್ಣ
13 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 106 ರನ್ ಹಾಗೂ ಶಿವಂ ದುಬೆ 26 ರನ್ ಗಳಿಸಿ ಆಡುತ್ತಿದ್ದಾರೆ.
IND vs ENG 5th T20I: ಸೂರ್ಯ ಔಟ್
ನಾಯಕ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಅಗ್ಗವಾಗಿ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಅವರು 3 ಎಸೆತಗಳಲ್ಲಿ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 145 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಈ ವಿಕೆಟ್ ಕಳೆದುಕೊಂಡಿತು.
IND vs ENG 5th T20I: ಅಭಿಷೇಕ್ ಶರ್ಮಾ ಶತಕ
ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದು ಭಾರತದ ಎರಡನೇ ವೇಗದ ಶತಕವಾಗಿದೆ. 5 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 100ರ ಗಡಿ ದಾಟಿದರು.
IND vs ENG 5th T20I: ತಿಲಕ್ ಔಟ್
136 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಎರಡನೇ ವಿಕೆಟ್ ಕಳೆದುಕೊಂಡಿತು. ತಿಲಕ್ ವರ್ಮಾ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.
IND vs ENG 5th T20I: ಪವರ್‌ಪ್ಲೇಯಲ್ಲಿ 95 ರನ್
ಮೊದಲ 6 ಓವರ್‌ಗಳಲ್ಲಿ ಭಾರತ ತಂಡ 1 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದೆ. ಈ ಅವಧಿಯಲ್ಲಿ ಅಭಿಷೇಕ್ ಶರ್ಮಾ ಬ್ಯಾಟ್‌ನಿಂದ 58 ರನ್ ಸಿಡಿದಿವೆ.
IND vs ENG 5th T20I: ಅಭಿಷೇಕ್ ಶರ್ಮಾ ಅರ್ಧಶತಕ
ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸರಣಿಯಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ.
IND vs ENG 5th T20I: 50 ರನ್ ಪೂರ್ಣ
ಟೀಂ ಇಂಡಿಯಾ 3.5 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿದೆ. ಅಭಿಷೇಕ್ ಶರ್ಮಾ ಅವರಿಂದ ಸ್ಫೋಟಕ ಬ್ಯಾಟಿಂಗ್ ಕಂಡು ಬರುತ್ತಿದೆ.
IND vs ENG 5th T20I: ಅಭಿ ಆರ್ಭಟ
ಮೊದಲ 3 ಓವರ್‌ಗಳಲ್ಲಿ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ 23 ರನ್ ಗಳಿಸಿ ಆಡುತ್ತಿದ್ದಾರೆ.
IND vs ENG 5th T20I: ಸಂಜು ಔಟ್
ಎರಡನೇ ಓವರ್‌ನಲ್ಲಿ ಭಾರತದ ಮೊದಲ ವಿಕೆಟ್ ಪತನವಾಗಿದೆ. ಸಂಜು ಸ್ಯಾಮ್ಸನ್ ಸತತ ಐದನೇ ಪಂದ್ಯದಲ್ಲೂ ಶಾರ್ಟ್ ಬಾಲ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
IND vs ENG 5th T20I: ಟೀಂ ಇಂಡಿಯಾ ಇನ್ನಿಂಗ್ಸ್ ಶುರು
ಟೀಂ ಇಂಡಿಯಾ ಇನ್ನಿಂಗ್ಸ್ ಶುರುವಾಗಿದೆ. ಸಂಜು ಸ್ಯಾಮ್ಸನ್ ಅವರೊಂದಿಗೆ ಅಭಿಷೇಕ್ ಶರ್ಮಾ ಕ್ರೀಸ್‌ಗೆ ಬಂದಿದ್ದಾರೆ. ಮೊದಲ ಓವರ್‌ನಲ್ಲಿ ಸಂಜು 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.
IND vs ENG 5th T20I: ಇಂಗ್ಲೆಂಡ್
ಫಿಲ್ ಸಾಲ್ಟ್ , ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೇಮೀ ಓವರ್‌ಟನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
IND vs ENG 5th T20I: ಟೀಮ್ ಇಂಡಿಯಾ
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
IND vs ENG 5th T20I: ಟಾಸ್ ಗೆದ್ದ ಇಂಗ್ಲೆಂಡ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Feb 02,2025 6:34 PM