ಭಾರತ ಇನ್ನೊಂದು ವಾರದಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ. ಕುತೂಹಲದಿಂದ ಕಾಯುತ್ತಿದ್ದ ಟೆಸ್ಟ್‌ಗೆ ಮುಂಚಿತವಾಗಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಭಾರತಕ್ಕೆ ಭಾರೀ ಹಿನ್ನಡೆಯಾಗಿತ್ತು. ಏಕೆಂದರೆ, ಹಿಂದಿನ 4 ಟೆಸ್ಟ್‌ಗಳಲ್ಲಿ ರೋಹಿತ್ ಶರ್ಮಾ ಅಗ್ರ ಸ್ಕೋರರ್ ಆಗಿದ್ದರು. ಆದರೆ, ರೋಹಿತ್ ಟೆಸ್ಟ್‌ಗೆ ಲಭ್ಯರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ರೋಹಿತ್ ಪುತ್ರಿ ಅವರ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್‌ನ ಪತ್ರಕರ್ತರು, ಹೋಟೆಲ್‌ನಿಂದ ಹೊರಬರುತ್ತಿದ್ದ ಸಮೈರಾ (Samaira) ಅವರನ್ನು ರೋಹಿತ್ ಶರ್ಮಾ ಈಗ ಹೇಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮೈರಾ ನೀಡಿದ ಉತ್ತರ ಹಾಗೂ ಆಕೆಯ ಮುಗ್ದತೆಯ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ, ಸಮೈರಾ ತನ್ನ ತಂದೆ ಲಿವಿಂಗ್ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಸಮೈರಾ ರೋಹಿತ್ ಬಗ್ಗೆ ಅಪ್‌ಡೇಟ್ ನೀಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದರೊಂದಿಗೆ, ಸಮೈರಾ ಕ್ಯೂಟ್ ಎಕ್ಸ್‌ಪ್ರೆಶನ್‌ಗಳಿಗೆ ಕಾಮೆಂಟ್‌ಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಈ ವಿಡಿಯೋವನ್ನು ಟ್ರೆಂಡ್ ಮಾಡಿದ್ದಾರೆ.
#RohitSharma Daughter #samaira Today at #Leicester How cute she is ?? MY FATHER IS TAKING REST IN THE ROOM GOT #covidpositive @ritssajdeh @ImRo45 #ENGvIND @ITGDsports pic.twitter.com/Tbpu0HSUIQ
— Krishna sai ✊?? (@Krishna19348905) June 27, 2022
ರೋಹಿತ್ಗೆ ಕೊರೊನಾ
ಇತ್ತೀಚೆಗೆ ಲೀಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ತಂಡವನ್ನು ಸೇರಿಕೊಂಡಿದ್ದರು. ಕೋವಿಡ್ ಇರುವುದು ದೃಢಪಟ್ಟಿದ್ದರಿಂದ ಅವರು ಪಂದ್ಯದ ಅಂತಿಮ ದಿನದಂದು ಆಡಲಿಲ್ಲ. ಅಂದಿನಿಂದ ಅವರು ಐಸೋಲೇಷನ್‌ನಲ್ಲಿದ್ದಾರೆ. ಜೊತೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಯ್ಕೆಗಾರ ಚೇತನ್ ಶರ್ಮಾ ಯುಕೆಗೆ ಆಗಮಿಸುತ್ತಿದ್ದು, ಮುಂಬರುವ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಬಗ್ಗೆ ಇಂದು ನಿರ್ಧಾರವಾಗಲಿದೆಯಂತೆ.
ಇದನ್ನೂ ಓದಿ: T20I World Record: ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ ಭಾರತ; ಹೊಸ ದಾಖಲೆಯತ್ತ ರೋಹಿತ್ ಸೇನೆ!
ರೋಹಿತ್ ಕೇವಲ ನಾಯಕನಾಗಿ ಮಾತ್ರವಲ್ಲದೆ ಅಗ್ರ ಕ್ರಮಾಂಕದಲ್ಲಿಯೂ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರೋಹಿತ್ ಟೆಸ್ಟ್ ಆಡದಿದ್ದರೆ ಭಾರತಕ್ಕೆ ಭಾರಿ ಹಿನ್ನಡೆಯಾಗಲಿದೆ. ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಇದು ಖಚಿತವಾಗಿಲ್ಲ.
ಮಯಾಂಕ್ ಅಗರ್ವಾಲ್‌ಗೆ ಅವಕಾಶ ಸಿಗಬಹುದು
ವೈದ್ಯಕೀಯ ತಂಡ ರೋಹಿತ್ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಅವರು ಫಿಟ್ ಆಗಲು ಮ್ಯಾನೇಜ್ ಮೆಂಟ್ ಕಾಯುತ್ತದೆ. ಹೀಗಾಗಿ ನಾಯಕತ್ವದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಓಪನರ್ ಆಗಿ ಅವರ ಹೆಸರು ಇನ್ನೂ ಯೋಜನೆಯಲ್ಲಿದೆ ಎಂದು ಇದು ಸೂಚಿಸುತ್ತದೆ. ರೋಹಿತ್ ಸಮಯಕ್ಕೆ ಸರಿಯಾಗಿ ಫಿಟ್ ಆಗದಿದ್ದರೆ ಮಯಾಂಕ್ ಅಗರ್ವಾಲ್‌ಗೆ ಅವಕಾಶ ಸಿಗಬಹುದು. ಮಯಾಂಕ್ ಈ ವರ್ಷದ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರು ಇಂಗ್ಲೆಂಡ್ ವಿರುದ್ಧದ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ಆದರೆ ಈಗ ಪರಿಸ್ಥಿತಿಗಳು ಅವರ ಪರವಾಗಿ ತಿರುಗುತ್ತಿವೆ.
Published On - 6:02 pm, Tue, 28 June 22