Eoin Morgan Retires: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್..!

Eoin Morgan Retires: 2019 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ಗೆ ODI ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮಾರ್ಗನ್, ಕಡಿಮೆ ಸ್ವರೂಪದಲ್ಲಿ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ನಾಯಕ ಮಾತ್ರವಲ್ಲ, ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಕೂಡ ಆಗಿದ್ದರು.

Eoin Morgan Retires: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್..!
ಇಯಾನ್ ಮಾರ್ಗನ್
TV9kannada Web Team

| Edited By: pruthvi Shankar

Jun 28, 2022 | 7:14 PM

ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team)ದ ODI ಮತ್ತು T20 ನಾಯಕ ಇಯಾನ್ ಮಾರ್ಗನ್ (Eoin Morgan) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2019 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ಗೆ ODI ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮಾರ್ಗನ್, ಕಡಿಮೆ ಸ್ವರೂಪದಲ್ಲಿ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ನಾಯಕ ಮಾತ್ರವಲ್ಲ, ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ಮೋರ್ಗನ್ ಅವರ ನಿವೃತ್ತಿಯ ಕುರಿತಾದ ವದಂತಿಗಳು ಒಂದು ದಿನಕ್ಕೂ ಮೊದಲೇ ಬ್ರಿಟಿಷ್ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭಿಸಿದ್ದವು. ಆದರೆ ಈಗ ಜೂನ್ 28 ಮಂಗಳವಾರದಂದು, ಇಂಗ್ಲೆಂಡ್ ದಂತಕಥೆ ಅಧಿಕೃತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದೆ.

ಕೆಲ ವರ್ಷಗಳಿಂದ ಫಿಟ್ನೆಸ್ ಸಮಸ್ಯೆ ಹಾಗೂ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಈ ಎಡಗೈ ಆಟಗಾರ ಸದ್ಯದಲ್ಲೇ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿತ್ತು. ಭಾರತದೊಂದಿಗೆ ಏಕದಿನ ಸರಣಿ ಆರಂಭಕ್ಕೂ ಮುನ್ನ ನಾಯಕನಾಗಿ ಹಾಗೂ ಆಟಗಾರನಾಗಿ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈಗ ಭಾರತ ವಿರುದ್ಧದ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಬಹಳ ಹಿಂದೆಯೇ ಅವರು ಎಲ್ಲಾ ಸ್ವರೂಪಗಳಿಂದ ನಿರ್ಗಮಿಸುವುದಾಗಿ ಘೋಷಿಸಿದರು. ಈಗಾಗಲೇ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಾರ್ಗನ್, ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಕ್ರಿಕೆಟ್​ಗೆ ವಿದಾಯ ಹೇಳಿದಂತಿದೆ. 36ರ ಹರೆಯದ ಕ್ರಿಕೆಟಿಗನ ನಿರ್ಧಾರ ಊಹಿಸಬಹುದಾದಂತಿತ್ತು. ಆದರೆ, ಇಂಗ್ಲೆಂಡ್ ಏಕದಿನ ಹಾಗೂ ಟಿ20 ತಂಡದ ನಾಯಕ ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ.

ಕುಕ್​ನಿಂದ ನಾಯಕತ್ವ ಪಡೆದಿದ್ದ ಮಾರ್ಗನ್

ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಜನಿಸಿದ ಇಯಾನ್ ಮಾರ್ಗನ್ 2015 ರ ವಿಶ್ವಕಪ್‌ಗೆ ಮೊದಲು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಅಲಿಸ್ಟರ್ ಕುಕ್ ಅವರಿಂದ ಈ ಜವಾಬ್ದಾರಿಯನ್ನು ಪಡೆದಿದ್ದರು. 2015 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಪ್ರದರ್ಶನ ಕಳಪೆಯಾಗಿತ್ತು, ಆದರೆ ಅದರ ನಂತರ ಮಾರ್ಗನ್ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನುಂಟುಮಾಡಲು ಶ್ರಮಿಸಿದರು. ತಂಡದೊಳಗೆ ನಿರ್ಭೀತಿಯಿಂದ ಆಡುವ ಉತ್ಸಾಹ ತುಂಬಿದರು. ODI ಮತ್ತು T20 ಮಾದರಿಯಲ್ಲಿ ತಂಡವನ್ನು ಅಗ್ರ ಶ್ರೇಯಾಂಕಕ್ಕೆ ಮುನ್ನಡೆಸಿದರು. ತದನಂತರ 2019 ರಲ್ಲಿ, ಮಾರ್ಗನ್ ಅವರ ನಾಯಕತ್ವದಲ್ಲಿ, ಇಂಗ್ಲೆಂಡ್ ಯಾವಾಗಲೂ ಕಾಯುತ್ತಿದ್ದ ಕ್ಷಣ ಬಂದಿತು. ಮಾರ್ಗನ್ ನಾಯಕತ್ವದಲ್ಲಿ ಆಂಗ್ಲ ತಂಡ 2019 ರ ODI ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಇಯಾನ್ ಮಾರ್ಗನ್ ವೃತ್ತಿಜೀವನ

ಇದನ್ನೂ ಓದಿ

ಮಾರ್ಗ 2006 ರಲ್ಲಿ ಐರ್ಲೆಂಡ್‌ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2009 ರಲ್ಲಿ ಅವರು ಇಂಗ್ಲೆಂಡ್ ತಂಡದ ಕಡ್ಡಾಯ ಸದಸ್ಯರಾದರು. ಅವರು ತಮ್ಮ ವೃತ್ತಿಜೀವನದಲ್ಲಿ 248 ODIಗಳನ್ನು ಆಡಿದ್ದಾರೆ, ಇದರಲ್ಲಿ ಅವರು 14 ಶತಕಗಳೊಂದಿಗೆ 7701 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 115 T20I ಪಂದ್ಯಗಳಲ್ಲಿ, ಅವರು 14 ಅರ್ಧಶತಕಗಳೊಂದಿಗೆ 2458 ರನ್ ಗಳಿಸಿದ್ದಾರೆ. ಮಾರ್ಗನ್ ಮೇ 2010 ಮತ್ತು 2012 ರ ನಡುವೆ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 2 ಶತಕಗಳನ್ನು ಬಾರಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada