ಕೆಂಪು ಕ್ಯಾಪ್ ಧರಿಸಿ ಮೈದಾನಕ್ಕೆ ಇಳಿಯಲಿದೆ ಇಂಡಿಯಾ-ಇಂಗ್ಲೆಂಡ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಟಗಾರರು ಕೆಂಪು ಕ್ಯಾಪ್‌ಗಳನ್ನು ಧರಿಸಲಿದ್ದಾರೆ. ಇದು ಮಾಜಿ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಸ್ಟ್ರಾಸ್ ಅವರ ಪತ್ನಿ ರುತ್ ಸ್ಟ್ರಾಸ್ ಅವರ ಸ್ಮರಣಾರ್ಥವಾಗಿ ಇದನ್ನು ಮಾಡಲಾಗುತ್ತಿದೆ. ಅವರ ಸ್ಮರಣಾರ್ಥ ಸ್ಥಾಪಿಸಲಾದ ರುತ್ ಸ್ಟ್ರಾಸ್ ಫೌಂಡೇಶನ್ ಶ್ವಾಸಕೋಶದ ಕ್ಯಾನ್ಸರ್ ಸಂಶೋಧನೆಗೆ ಬೆಂಬಲ ನೀಡುತ್ತದೆ.

ಟೆಸ್ಟ್ ಪಂದ್ಯ ಎಂದಾಕ್ಷಣ ಎಲ್ಲರೂ ವೈಟ್ ಆ್ಯಂಡ್ ವೈಟ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಶ್ಯೂ, ಶರ್ಟ್, ಪ್ಯಾಂಟ್ ಹಾಗೂ ಸಾಕ್ಸ್ ಕೂಡ ಬಿಳಿ ಬಣ್ಣದ್ದೇ ಆಗಿರಬೇಕು. ಆದರೆ, ಇಂದು ಲಾರ್ಡ್ಸ್ನಲ್ಲಿ (Lord‘s Test) ಇಂಡಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಕೆಂಪು ಕ್ಯಾಪ್ ಧರಿಸಿ ಪಂದ್ಯವನ್ನು ಆಡಲಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಲಾರ್ಡ್ಸ್ ಟೆಸ್ಟ್ ಪಂದ್ಯ ಯಾವಾಗಲೂ ಭಿನ್ನ. ಇಲ್ಲಿ ನಡೆಯುವ ಪಂದ್ಯದ ಎರಡನೇ ದಿನ ಆಟಗಾರರು ಕೆಂಪು ಬಣ್ಣದ ಕ್ಯಾಪ್ ಧರಿಸುತ್ತಾರೆ. ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಆಂಡ್ರ್ಯೂ ಸ್ಟ್ರಾಸ್ ಅವರ ಪತ್ನಿ ರುತ್ ಸ್ಟ್ರಾಸ್‌ಗೆ ಗೌರವ ಸಲ್ಲಿಸಲು ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು. ರುತ್ ಸ್ಟ್ರಾಸ್ 2018ರಲ್ಲಿ ಅಪರೂಪದ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು. ರುತ್ ಆಸ್ಟ್ರೇಲಿಯಾದ ನಟಿಯಾಗಿದ್ದರು.
ರೆಡ್ಗೆ ಸಂಬಂಧಿಸಿದ ಪೋಸ್ಟ್
IND vs ENG 3rd Test: Why Lord’s Will Witness a Sea of Red on Day 2 for ‘Red For Ruth Day’ – Explained#INDvsENG #INDvsENGTest #LordsTest
Read more at: https://t.co/gV3IzfHEQG pic.twitter.com/EHUefc2eiL
— myKhel.com (@mykhelcom) July 11, 2025
There’s always something special about a Test match at Lord’s 🏟️🤩 pic.twitter.com/6OId5roKG9
— Sport360° (@Sport360) July 9, 2025
ಪತ್ನಿಯ ಸ್ಮರಣಾರ್ಥವಾಗಿ ಆಂಡ್ರ್ಯೂ ಸ್ಟ್ರಾಸ್ ಅವರು ರುತ್ ಸ್ಟ್ರಾಸ್ ಫೌಂಡೇಶನ್ ಸ್ಥಾಪಿಸಿದರು. ಇದು ಶ್ವಾಸಕೋಶದ ಕ್ಯಾನ್ಸರ್ ಕುರಿತು ಸಂಶೋಧನೆ ಮತ್ತು ಆ ರೋಗ ಪೀಡಿತರಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಪ್ರತಿಷ್ಠಾನವನ್ನು ಬೆಂಬಲಿಸಲು ಇಂಗ್ಲೆಂಡ್ ತಂಡ ಮಾತ್ರವಲ್ಲ, ಭಾರತ ತಂಡ ಕೂಡ ಕೆಂಪು ಕ್ಯಾಪ್ ಧರಿಸಲಿದೆ. ಇದನ್ನು ‘ರುತ್ ಡೇ’ ಎಂದು ಕೂಡ ಕರೆಯಲಾಗುತ್ತದೆ. ಆ ದಿನ ಎಲ್ಲಾ ಆಟಗಾರರು ಕೆಂಪು ಕ್ಯಾಪ್ ಧರಿಸುತ್ತಾರೆ, ಪ್ರೇಕ್ಷಕರು ಕೆಂಪು ಕ್ಯಾಪ್ ಧರಿಸಲು ಪ್ರೋತ್ಸಾಹಿಸಲಾಗುತ್ತದೆ. ಇದು ರುತ್ ಸ್ಟ್ರಾಸ್‌ಗೆ ಗೌರವ ಸಲ್ಲಿಸಲು ಮಾತ್ರವಲ್ಲ, ಕ್ಯಾನ್ಸರ್‌ನಂತಹ ಗಂಭೀರ ರೋಗವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಕೂಡ ಈ ಉಪಕ್ರಮ ಸಹಕಾರಿ ಆಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ಬ್ಯಾಟರ್ಗೆ ಓಪನ್ ಚಾಲೆಂಜ್ ಮಾಡಿದ ಜಡೇಜಾ: ಹೆದರಿದ ಜೋ ರೂಟ್: ವಿಡಿಯೋ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾತ್ ಅವರ ಸಹಾಯ ಮತ್ತು ಸಲಹೆಯೊಂದಿಗೆ ಆಂಡ್ರ್ಯೂ ಸ್ಟ್ರಾಸ್ ಅವರು ರುತ್ ಸ್ಟ್ರಾಸ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಗ್ಲೆನ್ ಮೆಕ್‌ಗ್ರಾತ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಕೂಡ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಅವರು ಮೆಕ್‌ಗ್ರಾತ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಅದರಿಂದ ಪ್ರೇರಿತರಾಗಿ, ಆಂಡ್ರ್ಯೂ ಸ್ಟ್ರಾಸ್ ಸಹ ಈ ಉಪಕ್ರಮವನ್ನು ಕೈಗೊಂಡರು.
ಮ್ಯಾಚ್ ಸ್ಕೋರ್.. ‘
ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 251 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ರೂಟ್ (99) ಹಾಗೂ ಸ್ಟೋಕ್ಸ್ (39) ಕ್ರೀಸ್ನಲ್ಲಿದ್ದಾರೆ. ಟೀಂ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಹಾಗೂ ಬೂಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ತೆಗೆದಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:01 pm, Fri, 11 July 25
