AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಗ್ಲೆಂಡ್​ನ ಬಾಝ್ ಬಾಲ್ ಆಟಕ್ಕೆ ಬ್ರೇಕ್ ಹಾಕಿದ ಭಾರತ: ಸ್ಟೋಕ್ಸ್ ಪಡೆಯ ನಿಧಾನಗತಿಯ ಆಟ

England vs India 3rd Test: ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್​ನ ಮೊದಲ ದಿನದಂದು ಬೌಲರ್‌ಗಳಿಗೆ ಸಹಾಯ ಸಿಕ್ಕಿತು, ಆದರೆ ನಿರೀಕ್ಷಿಸಿದಷ್ಟು ಅಲ್ಲ. ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೊದಲ ದಿನದ ಅಂತ್ಯದವರೆಗೂ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, ಇಂಗ್ಲೆಂಡ್ ಮತ್ತು 'ಬಾಝ್ ಬಾಲ್' ಹೆಸರಿನಲ್ಲಿ ಒಂದು ವಿಚಿತ್ರ ದಾಖಲೆಯೂ ದಾಖಲಾಗಿದೆ.

IND vs ENG: ಇಂಗ್ಲೆಂಡ್​ನ ಬಾಝ್ ಬಾಲ್ ಆಟಕ್ಕೆ ಬ್ರೇಕ್ ಹಾಕಿದ ಭಾರತ: ಸ್ಟೋಕ್ಸ್ ಪಡೆಯ ನಿಧಾನಗತಿಯ ಆಟ
Eng Vs Ind 3rd Test
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 16, 2025 | 6:37 PM

Share

ಬೆಂಗಳೂರು (ಜು. 11): ಭಾರತ (Indian Cricket Team) ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ಶುರುವಾಗಿದೆ. ಭಾರತದ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಪಂದ್ಯಕ್ಕೂ ಮುನ್ನ ಲಾರ್ಡ್ಸ್ ಪಿಚ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ಪಿಚ್ ಹೆಚ್ಚಿನ ಬೌನ್ಸ್ ನೀಡುತ್ತದೆ ಮತ್ತು ಬೌಲರ್‌ಗಳಿಗೆ ಇದರಿಂದ ಸಹಾಯ ಆಗಲಿದೆ ಎಂದು ಹೇಳಲಾಗುತ್ತಿತ್ತು. ಲೀಡ್ಸ್ ಮತ್ತು ಎಡ್ಜ್‌ಬಾಸ್ಟನ್​ಗೆ ಹೋಲಿಸಿದರೆ ಲಾರ್ಡ್ಸ್ ಪಿಚ್ ಇದಕ್ಕಿಂತ ಭಿನ್ನವಾಗಿದೆ ಎಂದಿದ್ದರು. ಆದರೆ, ಮೊದಲ ದಿನದ ಆಟದ ನಂತರ, ಅದು ಆ ರೀತಿ ಕಾಣುತ್ತಿಲ್ಲ.

ಮೊದಲ ದಿನದಂದು ಬೌಲರ್‌ಗಳಿಗೆ ಸಹಾಯ ಸಿಕ್ಕಿತು, ಆದರೆ ನಿರೀಕ್ಷಿಸಿದಷ್ಟು ಅಲ್ಲ. ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೊದಲ ದಿನದ ಅಂತ್ಯದವರೆಗೂ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, ಇಂಗ್ಲೆಂಡ್ ಮತ್ತು ‘ಬಾಝ್ ಬಾಲ್’ ಹೆಸರಿನಲ್ಲಿ ಒಂದು ವಿಚಿತ್ರ ದಾಖಲೆಯೂ ದಾಖಲಾಗಿದೆ.

ಬಾಝ್ ಬಾಲ್ ಯುಗದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿತು

ಬ್ರೆಂಡನ್ ಮೆಕಲಮ್ ಆಗಮನದ ನಂತರ 2022 ರಿಂದ ಇಂಗ್ಲೆಂಡ್ ತಂಡದಲ್ಲಿ ಬಾಝ್ ಬಾಲ್ ಯುಗ ಪ್ರಾರಂಭವಾಯಿತು. ಅಂದರೆ ಮೆಕಲಮ್ ಕೋಚ್ ಆದ ನಂತರ, ಇಂಗ್ಲೆಂಡ್ ಆಟದ ವಿಧಾನವು ಸಂಪೂರ್ಣವಾಗಿ ಬದಲಾಯಿತು. ಅವರು ಟೆಸ್ಟ್‌ಗಳಲ್ಲಿ ಆಕ್ರಮಣಕಾರಿ ಕ್ರಿಕೆಟ್ ಅನ್ನು ಮಾತ್ರ ಆಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಈಗ ಅವರು ಭಾರತದ ವಿರುದ್ಧ ವಿಚಿತ್ರ ದಾಖಲೆಯನ್ನು ಮಾಡಿದ್ದಾರೆ. ಬಾಝ್ ಬಾಲ್ ಯುಗದಲ್ಲಿ ಇಂಗ್ಲೆಂಡ್ ತಂಡವು ಆಲೌಟ್ ಆಗದೆ ಕೇವಲ 4 ವಿಕೆಟ್‌ಗಳಿಗೆ 251 ರನ್ ಗಳಿಸಿರುವುದು ಇದೇ ಮೊದಲು. ಇದು ಮೊದಲ ದಿನದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಇದನ್ನೂ ಓದಿ
Image
ಮಳೆ-ಕೆಟ್ಟ ಹವಾಮಾನ ಅಲ್ಲ.. ಆದರೂ ಮೂರನೇ ಟೆಸ್ಟ್ ದಿಢೀರ್ ನಿಂತಿದ್ದೇಕೆ?
Image
ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ 251/4
Image
ಸತತ ಐದು ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ಐರಿಶ್ ವೇಗಿ
Image
ಅರ್ಧಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಜೋ ರೂಟ್

ENG vs IND 3rd Test: ಮಳೆಯೂ ಅಲ್ಲ, ಕೆಟ್ಟ ಹವಾಮಾನವೂ ಅಲ್ಲ.. ಆದರೂ ಮೂರನೇ ಟೆಸ್ಟ್ ದಿಢೀರ್ ನಿಂತಿದ್ದೇಕೆ?

ಜೋ ರೂಟ್ ಅಜೇಯ 99 ರನ್

ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಜೋ ರೂಟ್ ಲಾರ್ಡ್ಸ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮೊದಲ ದಿನದ ಅಂತ್ಯದ ವೇಳೆಗೆ 99 ರನ್‌ಗಳೊಂದಿಗೆ ಅಜೇಯರಾಗಿ ಆಡುತ್ತಿದ್ದಾರೆ. ರೂಟ್ ಇದುವರೆಗೆ ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳನ್ನು ಬಾರಿಸಿದ್ದಾರೆ. ತಮ್ಮ 37 ನೇ ಟೆಸ್ಟ್ ಶತಕಕ್ಕೆ ಕೇವಲ ಒಂದು ರನ್ ದೂರದಲ್ಲಿದ್ದಾರೆ. ಬೆನ್ ಸ್ಟೋಕ್ಸ್ 39 ರನ್ ಗಳಿಸಿ ಔಟಾಗದೆ ಆಡುತ್ತಿದ್ದಾರೆ. ಇದಲ್ಲದೆ, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಓಲಿ ಪೋಪ್ 44 ರನ್ ಗಳ ಕೊಡುಗೆ ನೀಡಿದರು.

ಈ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಮ್ಮ ಮೊದಲ ಓವರ್‌ನಲ್ಲೇ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದರು. ಮೊದಲು ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಅವರನ್ನು 23 ರನ್‌ಗಳಿಗೆ ಔಟ್ ಮಾಡಿದ ರೆಡ್ಡಿ, ನಂತರ 18 ರನ್ ಗಳಿಸಿದ ನಂತರ ಜ್ಯಾಕ್ ಕ್ರೌಲಿಯನ್ನು ರಿಷಭ್ ಪಂತ್‌ಗೆ ಕ್ಯಾಚ್ ನೀಡಿ ಔಟ್ ಮಾಡಿದರು. ಎರಡನೇ ದಿನದಂದು ಭಾರತ ತಂಡ ಇಂಗ್ಲೆಂಡ್ ತಂಡವನ್ನು ಆದಷ್ಟು ಬೇಗ ಆಲೌಟ್ ಮಾಡಲು ಎದುರು ನೋಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Fri, 11 July 25

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?