India vs England: 2ನೇ ಟೆಸ್ಟ್​ಗೂ ಮುನ್ನ ಭಾರತ-ಇಂಗ್ಲೆಂಡ್​ ತಂಡಗಳಿಗೆ ದಂಡ..!

| Updated By: ಝಾಹಿರ್ ಯೂಸುಫ್

Updated on: Aug 11, 2021 | 2:35 PM

India vs England 2nd Test: ಭಾರತ-ಇಂಗ್ಲೆಂಡ್​ ನಡುವಣ 2ನೇ ಪಂದ್ಯವು ಆಗಸ್ಟ್ 12 ರಂದು ಲಾರ್ಡ್ಸ್​ನಲ್ಲಿ ಶುರುವಾಗಲಿದ್ದು, ಈ ಪಂದ್ಯದಲ್ಲಿ ಜಯಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದೆ ವಿರಾಟ್ ಕೊಹ್ಲಿ ಪಡೆ.

India vs England: 2ನೇ ಟೆಸ್ಟ್​ಗೂ ಮುನ್ನ ಭಾರತ-ಇಂಗ್ಲೆಂಡ್​ ತಂಡಗಳಿಗೆ ದಂಡ..!
India vs England
Follow us on

IND vs ENG: ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ಭಾರತ-ಇಂಗ್ಲೆಂಡ್ (India vs England)​ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ಗಾಗಿ ನಡೆಸಿದಕ್ಕಾಗಿ ಇದೀಗ ಭಾರತ-ಇಂಗ್ಲೆಂಡ್ ತಂಡಗಳಿಗೆ ಪಂದ್ಯದ ಶುಲ್ಕದ ಶೇ.40 ರಷ್ಟು ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕದಿಂದ 2 ಪಾಯಿಂಟ್​ಗಳನ್ನು ಕಳೆಯಲಾಗಿದೆ. ​

ಐಸಿಸಿ (ICC) ನೀತಿ ಸಂಹಿತೆಯ ಕಾಯ್ದೆ 2.22 ರ ಪ್ರಕಾರ , ಕನಿಷ್ಠ ಓವರ್-ರೇಟ್ ಬೌಲಿಂಗ್ ಶಿಕ್ಷೆ ಅನುಸಾರ ಆಟಗಾರರು ತಮ್ಮ ಪಂದ್ಯದ ಶೇ. 20 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮ 16.11.2 ರ ಪ್ರಕಾರ, ನಿಧಾನಗತಿಯ ಬೌಲಿಂಗ್​ ಶಿಕ್ಷೆಯನುಸಾರ ಒಂದು ತಂಡಕ್ಕೆ ಒಂದು ಪಾಯಿಂಟ್ ಕಡಿತಗೊಳಿಸಲಾಗುತ್ತದೆ. ಅದರಂತೆ ಉಭಯ ತಂಡಗಳು ತಲಾ ಶೇ.20 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕದಿಂದ ತಲಾ ಒಂದೊಂದು ಪಾಯಿಂಟ್ ಕಳೆದುಕೊಳ್ಳಲಿದೆ.

ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹೊಸ ನಿಯಮದ ಪ್ರಕಾರ ಪ್ರತಿ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದೆ. ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಪಂದ್ಯ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ. ಇದೀಗ ಮೊದಲ ಪಂದ್ಯದಲ್ಲಿ 4 ಅಂಕ ಪಡೆದಿದ್ದ ಭಾರತ-ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಅಂಕಗಳನ್ನು ಕಳೆದುಕೊಂಡಿದೆ. ಇನ್ನು ನಿಧಾನಗತಿಯ ಬೌಲಿಂಗ್​ ಬಗ್ಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಪ್ಪೊಪ್ಪಿಕೊಂಡಿದ್ದು, ಹೀಗಾಗಿ ಔಪಚಾರಿಕ ವಿಚಾರಣೆಗಳ ಅಗತ್ಯವಿಲ್ಲ ಎಂದು ಮ್ಯಾಚ್ ರೆಫರಿ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ (England) 183 ರನ್​ಗಳಿಸಿದರೆ, 2ನೇ ಇನಿಂಗ್ಸ್​ನಲ್ಲಿ 303 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್​ನ್ನು 278 ರನ್​ಗಳೊಂದಿಗೆ ಅಂತ್ಯಗೊಳಿಸಿತ್ತು. ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾ (Team India) 2ನೇ ಇನಿಂಗ್ಸ್​ನಲ್ಲಿ 209 ರನ್​ಗಳಿಸಬೇಕಿತ್ತು. ಇದಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟದೊಂದಿಗೆ 52 ರನ್​ಗಳಿಸಿತ್ತು. ಅದರಂತೆ ಗೆಲ್ಲಲು ಅಂತಿಮ ದಿನದಾಟದಲ್ಲಿ 157 ರನ್​ಗಳನ್ನು ಕಲೆಹಾಕಬೇಕಿತ್ತು. ಆದರೆ 5ನೇ ದಿನದಾಟ ಮಳೆಗೆ ಅಹುತಿಯಾದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಭಾರತ-ಇಂಗ್ಲೆಂಡ್​ ನಡುವಣ 2ನೇ ಪಂದ್ಯವು ಆಗಸ್ಟ್ 12 ರಂದು ಲಾರ್ಡ್ಸ್​ನಲ್ಲಿ ಶುರುವಾಗಲಿದ್ದು, ಈ ಪಂದ್ಯದಲ್ಲಿ ಜಯಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದೆ ವಿರಾಟ್ ಕೊಹ್ಲಿ ಪಡೆ.

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

ಇದನ್ನೂ ಓದಿ: IPL 2021: ಐಪಿಎಲ್​ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ

ಇದನ್ನೂ ಓದಿ: IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್

(India vs England: Virat Kohli, Joe Root both fined for slow over rates)