India vs England: ಕೆಎಲ್ ರಾಹುಲ್‌ಗೆ ಟೆಸ್ಟ್ ನಾಯಕತ್ವ ಏಕೆ ನೀಡಿಲ್ಲ?: ಇಲ್ಲಿದೆ ನೋಡಿ ಅಸಲಿ ಕಾರಣ

Team India New Captain: ಮೇ 24 ರಂದು ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಯಿತು. ಇದಾದ ನಂತರ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಇಂಗ್ಲೆಂಡ್ ಸರಣಿಗೆ ನಾಯಕತ್ವದ ಪಾತ್ರಕ್ಕಾಗಿ ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

India vs England: ಕೆಎಲ್ ರಾಹುಲ್‌ಗೆ ಟೆಸ್ಟ್ ನಾಯಕತ್ವ ಏಕೆ ನೀಡಿಲ್ಲ?: ಇಲ್ಲಿದೆ ನೋಡಿ ಅಸಲಿ ಕಾರಣ
Kl Rahul Ajit Agarkar

Updated on: May 25, 2025 | 10:54 AM

ಬೆಂಗಳೂರು (ಮೇ. 25): ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್​ನ ಟೆಸ್ಟ್ ನಾಯಕತ್ವವನ್ನು (Team India Test Captain) ತೊರೆದ ನಂತರ, ಮುಂದಿನ ನಾಯಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಶುಭ್​​ಮನ್ ಗಿಲ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಈ ಎಲ್ಲಾ ಹೆಸರುಗಳು ನೂತನ ನಾಯಕತ್ವಕ್ಕೆ ಕೇಳಿಬಂದಿದ್ದವು. ಆದರೆ ಕೊನೆಯಲ್ಲಿ ಆಯ್ಕೆದಾರರು ಗಿಲ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದರೆ, ಉಪನಾಯಕನ ಜವಾಬ್ದಾರಿಯನ್ನು ರಿಷಭ್ ಪಂತ್ ಅವರಿಗೆ ನೀಡಲಾಯಿತು. ಮೇ 24 ರಂದು ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಯಿತು. ಇದಾದ ನಂತರ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಇಂಗ್ಲೆಂಡ್ ಸರಣಿಗೆ ನಾಯಕತ್ವದ ಪಾತ್ರಕ್ಕಾಗಿ ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಕೆಎಲ್ ರಾಹುಲ್ ಬಗ್ಗೆ ಅಜಿತ್ ಅಗರ್ಕರ್ ಹೇಳಿದ್ದೇನು?

ಕೆ. ಎಲ್. ರಾಹುಲ್ ಅವರು ನಾಯಕ ಅಥವಾ ಉಪನಾಯಕನಾಗಲು ಸ್ಪರ್ಧಿಯಲ್ಲ. ಅವರು ಸ್ವಲ್ಪ ಸಮಯದ ಹಿಂದೆ ನಾಯಕತ್ವ ವಹಿಸಿದ್ದರು. ಅವರು ಅದ್ಭುತ ಆಟಗಾರ ಮತ್ತು ಇದು ಅವರಿಗೆ ದೊಡ್ಡ ಸರಣಿಯಾಗಲಿದೆ ಎಂದು ಆಶಿಸುತ್ತೇನೆ. ಅವರ ಮೇಲೆ ನಾಯಕತ್ವದ ಜವಾಬ್ದಾರಿ ವಹಿಸಿ ಯಾವುದೇ ರೀತಿಯ ಒತ್ತಡವನ್ನು ಹೇರಲು ನಾವು ಬಯಸುವುದಿಲ್ಲ ಎಂದು ಅಗರ್ಕರ್ ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ಅವರಿಗೆ ಯಾವುದೇ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿಲ್ಲ. ರಾಹುಲ್ ತನ್ನ ಬ್ಯಾಟಿಂಗ್ ಮೇಲೆ ಮಾತ್ರ ಗಮನಹರಿಸಬೇಕು ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಬೇಕು ಎಂದು ಆಯ್ಕೆ ಸಮಿತಿ ಬಯಸಿದೆ.

ಇದನ್ನೂ ಓದಿ
ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ತಕ್ಷಣ ಫಾರ್ಮ್‌ಗೆ ಮರಳಿದ ಕರುಣ್ ನಾಯರ್
PBKS vs DC ನಡುವಿನ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನೋಡಿ
ಪ್ಲೇಆಫ್‌ಗೂ ಮುನ್ನ ಆರ್‌ಸಿಬಿಗೆ ಶುರುವಾಯಿತು ಹೊಸ ಟೆನ್ಶನ್
ಸೋಲಿನ ನಡುವೆ ಆರ್​ಸಿಬಿಗೆ ಸಿಕ್ತು ಬಂಪರ್ ಸುದ್ದಿ: ರಜತ್ ಪಡೆಯಲ್ಲಿ ಸಂಭ್ರಮ

ಬುಮ್ರಾ ಬಗ್ಗೆ ಅಗರ್ಕರ್ ಮಾತನಾಡಿ, ಒಬ್ಬ ಆಟಗಾರನಾಗಿ ಅವರು ನಮಗೆ ಹೆಚ್ಚು ಮುಖ್ಯ ಎಂದು ಹೇಳಿದರು. ನಾಯಕನ ಜವಾಬ್ದಾರಿ ವಹಿಸಿದ ನಂತರ, ಆತ ತುಂಬಾ ಶ್ರಮಿಸಬೇಕು. ಆಡಳಿತ ಮಂಡಳಿಯು ಅವರೊಂದಿಗೆ ಈ ಬಗ್ಗೆ ಮಾತನಾಡಿದೆ. ಬುಮ್ರಾ ದೇಹವು ಎಷ್ಟು ಫಿಟ್ ಆಗಿದೆ ಎಂದು ಅವರಿಗೇ ತಿಳಿದಿದೆ. ಅವರಿಗೆ ಕೆಲಸದ ಹೊರೆ ನಿರ್ವಹಣೆ ಸಮಸ್ಯೆಗಳಿವೆ ಎಂದಿದ್ದಾರೆ. ಆಯ್ಕೆದಾರರ ಈ ಹೇಳಿಕೆಯಿಂದ, ಮುಂಬರುವ ಇಂಗ್ಲೆಂಡ್ ಪ್ರವಾಸದ ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಆಡುವುದಿಲ್ಲ ಎಂಬುದು ಖಚಿತವಾಗಿದೆ.

Karun Nair: ಶುಭ ಸುದ್ದಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ತಕ್ಷಣ ಫಾರ್ಮ್‌ಗೆ ಮರಳಿದ ಕರುಣ್ ನಾಯರ್

ರಾಹುಲ್ ಮತ್ತು ಬುಮ್ರಾ ನಾಯಕರಾಗಿ ಅಂಕಿಅಂಶಗಳು

ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದ ದಾಖಲೆಗಳ ಬಗ್ಗೆ ಹೇಳುವುದಾದರೆ, ಇಬ್ಬರಿಗೂ ಇಂಗ್ಲೆಂಡ್​ನಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದಾಗ, ಬುಮ್ರಾ ಉಪನಾಯಕರಾಗಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡದಿದ್ದಾಗ, ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದಕ್ಕೂ ಮೊದಲು, ಬುಮ್ರಾ 2022 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ತಂಡವನ್ನು ಟೆಸ್ಟ್‌ನಲ್ಲಿ ಮುನ್ನಡೆಸಿದ್ದರು. ಬುಮ್ರಾ ನಾಯಕತ್ವದಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದರಲ್ಲಿ ಗೆದ್ದಿತ್ತು. ರಾಹುಲ್ 3 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದು, ಅದರಲ್ಲಿ ಭಾರತ ಎರಡರಲ್ಲಿ ಗೆಲುವು ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ