T20 Cricket Records: ಟಿ20ಕ್ರಿಕೆಟ್​ನಲ್ಲಿ ಕಾಂಗರೂಗಳ ದಾಖಲೆ ಮುರಿದ ಭಾರತದ ಹುಲಿಗಳು..!

T20 Cricket Records: ಐರ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಗುರಿ ಬೆನ್ನಟ್ಟಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿದೆ.

T20 Cricket Records: ಟಿ20ಕ್ರಿಕೆಟ್​ನಲ್ಲಿ ಕಾಂಗರೂಗಳ ದಾಖಲೆ ಮುರಿದ ಭಾರತದ ಹುಲಿಗಳು..!
Team India
Edited By:

Updated on: Jun 28, 2022 | 7:00 AM

ಐರ್ಲೆಂಡ್ ವಿರುದ್ಧದ (IND vs IRE) ಮೊದಲ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದೆ. ಈ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಭಾರತ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಜೊತೆಗೆ ಪಾಂಡ್ಯ ತಮ್ಮ ನಾಯಕತ್ವದ ವೃತ್ತಿಜೀವನವನ್ನು ಯಶಸ್ಸಿನೊಂದಿಗೆ ಪ್ರಾರಂಭಿಸಿದ್ದಾರೆ. ಈ ಪಂದ್ಯದಲ್ಲಿ ತಂಡದ ಉತ್ತಮ ಪ್ರದರ್ಶನದ ಜೊತೆಗೆ ಹಾರ್ದಿಕ್ ಅವರದೇ ಪ್ರದರ್ಶನವೂ ಉತ್ತಮವಾಗಿತ್ತು. ಇದೇ ವೇಳೆ ಈ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಬೃಹತ್ ದಾಖಲೆ ಕೂಡ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಗುರಿ ಬೆನ್ನಟ್ಟಿ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿದೆ. ಜೊತೆಗೆ ಈ ವಿಷಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ. ಟೀಂ ಇಂಡಿಯಾ ಇದುವರೆಗೆ 55 ಬಾರಿ ಗುರಿ ಮುಟ್ಟಿದ್ದರೆ, ಆಸ್ಟ್ರೇಲಿಯಾ 54 ಬಾರಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದೆ.

T20 ಕ್ರಿಕೆಟ್​ನಲ್ಲಿ ಗುರಿ ಬೆನ್ನಟ್ಟಿ ಹೆಚ್ಚು ಬಾರಿ ಗೆದ್ದ ತಂಡಗಳು

  1. ಭಾರತ – ಒಟ್ಟು ಪಂದ್ಯ 75, ಗೆಲುವು – 55, ಸೋಲು – 19
  2. ಆಸ್ಟ್ರೇಲಿಯಾ – ಒಟ್ಟು ಪಂದ್ಯಗಳು 94, ಗೆಲುವು – 54, ಸೋಲು – 37
  3. ಇದನ್ನೂ ಓದಿ
    Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
    ENG vs IND: ಮಂಡಳಿಯ ಸಲಹೆ ತಿರಸ್ಕರಿಸಿದ ರೋಹಿತ್ ಶರ್ಮಾ ಮೇಲೆ ಕೆಂಡಕಾರಿದ ಬಿಸಿಸಿಐ..!
    IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!
  4. ಪಾಕಿಸ್ತಾನ – ಒಟ್ಟು ಪಂದ್ಯಗಳು 86, ಗೆಲುವು – 53, ಸೋಲು – 31
  5. ಇಂಗ್ಲೆಂಡ್ – ಒಟ್ಟು ಪಂದ್ಯಗಳು 82, ಗೆಲುವು – 42, ಸೋಲು – 37
  6. ದಕ್ಷಿಣ ಆಫ್ರಿಕಾ – ಒಟ್ಟು ಪಂದ್ಯ 64, ಗೆಲುವು – 37, ಸೋಲು – 26

ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ ಕೂಡ ವೈಯಕ್ತಿಕ ದಾಖಲೆ ನಿರ್ಮಿಸಿದ್ದರು. ಭುವನೇಶ್ವರ್ ಕುಮಾರ್ ಟಿ20 ಕ್ರಿಕೆಟ್‌ನಲ್ಲಿ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಪವರ್‌ಪ್ಲೇಯಲ್ಲಿ ಭುವನೇಶ್ವರ್ ಕುಮಾರ್ 34 ವಿಕೆಟ್‌ಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ 33 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ವಿಕೆಟ್  ಪಡೆದ ಬೌಲರ್‌ಗಳು

  1. ಭುವನೇಶ್ವರ್ ಕುಮಾರ್ – 35
  2. ಸ್ಯಾಮ್ಯುಯೆಲ್ ಬದ್ರಿ – 33
  3. ಟಿಮ್ ಸೌಥಿ – 33
  4. ಶಕಿಬ್ ಅಲ್ ಹಸನ್ – 27
  5. ಜೋಶ್ ಹ್ಯಾಜಲ್‌ವುಡ್ – 26