AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs New zealand: 62 ರನ್​ಗೆ ಆಲೌಟ್ ಆಗಿ 4 ಕಳಪೆ ಹೀನಾಯ ದಾಖಲೆ ತನ್ನದಾಗಿಸಿಕೊಂಡ ನ್ಯೂಜಿಲೆಂಡ್

India vs New zealand 2nd Test: ಟೀಮ್ ಇಂಡಿಯಾ ಪರ ಸಿರಾಜ್ 3 ವಿಕೆಟ್ ಪಡೆದರೆ, ಅಶ್ವಿನ್ 4 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಕಬಳಿಸಿದ್ದಾರೆ. ಕೇವಲ 62 ರನ್​ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ದ ಟೆಸ್ಟ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ತಂಡ ಎನಿಸಿಕೊಂಡಿದೆ.

India vs New zealand: 62 ರನ್​ಗೆ ಆಲೌಟ್ ಆಗಿ 4 ಕಳಪೆ ಹೀನಾಯ ದಾಖಲೆ ತನ್ನದಾಗಿಸಿಕೊಂಡ ನ್ಯೂಜಿಲೆಂಡ್
India vs New zealand 2nd test
TV9 Web
| Edited By: |

Updated on: Dec 04, 2021 | 4:51 PM

Share

ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ (India vs New zealand 2nd Test) ನಡುವಣ 2ನೇ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು (Team India) 325 ರನ್​ಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಇದೀಗ 2ನೇ ದಿನದಾಟವೇ ಆಲೌಟ್​ ಆಗಿರುವುದು ವಿಶೇಷ. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಎಜಾಝ್ ಪಟೇಲ್ 10 ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಶಾಕ್ ನೀಡಿದ್ದರು. ಅದರಂತೆ 325 ರನ್​ಗಳ ಗುರಿ ಪಡೆದು ಮೊದಲ ಇನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​ಗೆ ಮೊಹಮ್ಮದ್ ಸಿರಾಜ್ (Mohammed Siraj) ತ್ರಿಬಲ್ ಶಾಕ್ ನೀಡಿದ್ದಾರೆ. ಬ್ಯಾಟ್ ಟು ಬ್ಯಾಕ್ ಮೂರು ವಿಕೆಟ್ ಉರುಳಿಸಿದ ಸಿರಾಜ್ ನ್ಯೂಜಿಲೆಂಡ್​ಗೆ ಆರಂಭ ಆಘಾತ ನೀಡಿದರು. ಬಳಿಕ ಬೌಲಿಂಗ್ ಆರಂಭಿಸಿದ ಅಕ್ಷರ್ ಪಟೇಲ್ (Axar Patel) ಹಾಗು ಅಶ್ವಿನ್ (R Ashwin) ಸ್ಪಿನ್ ಮೋಡಿ ಆರಂಭಿಸಿದರು. ಅದರಂತೆ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 62 ರನ್​ಗಳಿಗೆ ಆಲೌಟ್ ಆಗಿದೆ.

ಟೀಮ್ ಇಂಡಿಯಾ ಪರ ಸಿರಾಜ್ 3 ವಿಕೆಟ್ ಪಡೆದರೆ, ಅಶ್ವಿನ್ 4 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಕಬಳಿಸಿದ್ದಾರೆ. ಕೇವಲ 62 ರನ್​ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ದ ಟೆಸ್ಟ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ತಂಡ ಎನಿಸಿಕೊಂಡಿದೆ.

– ಈ ಹಿಂದೆ ಈ ಕಳಪೆ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. ದಕ್ಷಿಣ ಆಫ್ರಿಕಾ ತಂಡವು 2015 ರಲ್ಲಿ ಭಾರತದ ವಿರುದ್ದ 79 ರನ್​ಗಳಿಗೆ ಆಲೌಟ್​ ಆಗಿದ್ದು ದಾಖಲೆಯಾಗಿತ್ತು. ಇದೀಗ 62 ರನ್​ಗಳಿಗೆ ಆಲೌಟ್ ಆಗಿ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

– ಇನ್ನು ಭಾರತದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆ ಕೂಡ ನ್ಯೂಜಿಲೆಂಡ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು. 1987 ರಲ್ಲಿ ಭಾರತ ತಂಡವು ವೆಸ್ಟ್​ ಇಂಡೀಸ್ ವಿರುದ್ದ 75 ರನ್​ಗೆ ಆಲೌಟ್ ಆಗಿದ್ದು ಇದುವರೆಗೆ ಅತ್ಯಂತ ಕಳಪೆ ದಾಖಲೆಯಾಗಿತ್ತು. ಇದೀಗ 62 ರನ್​ಗೆ ಆಲೌಟ್ ಆಗಿ ನ್ಯೂಜಿಲೆಂಡ್ ಭಾರತದ ಹೆಸರಿನಲ್ಲಿದ್ದ ಕಳಪೆ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

– ಅದೇ ರೀತಿ ಭಾರತದ ವಿರುದ್ದದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅತೀ ಕಡಿಮೆ ಮೊತ್ತದ​ ಎಂಬ ಹೀನಾಯ ದಾಖಲೆ ಕೂಡ ಈ ಇನಿಂಗ್ಸ್​ ಪಾಲಾಗಿದೆ. ಈ ಹಿಂದೆ 2002 ರಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ದ 94 ರನ್​ಗೆ ಆಲೌಟ್ ಆಗಿದ್ದು ದಾಖಲೆಯಾಗಿತ್ತು. ಇದೀಗ 62 ರನ್​ಗೆ ಆಲೌಟ್​ ತನ್ನದೇ ಹೀನಾಯ ದಾಖಲೆಯನ್ನು ಮತ್ತಷ್ಟು ಕಳಪೆ ಮಟ್ಟಕ್ಕೆ ಕೊಂಡೊಯ್ದಿದೆ ನ್ಯೂಜಿಲೆಂಡ್.

– ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೆಸ್ಟ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಅಪಕೀರ್ತಿ ಕೂಡ ನ್ಯೂಜಿಲೆಂಡ್ ಪಾಲಾಗಿದೆ. 2004 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡವು 93 ರನ್​ಗಳಿಗೆ ಆಲೌಟ್ ಆಗಿದ್ದು ಅತ್ಯಂತ ಕಳಪೆ ದಾಖಲೆಯಾಗಿತ್ತು. ಇದೀಗ 62 ರನ್​ಗೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಸರ್ವಪತನ ಕಾಣುವ ಮೂಲಕ ಹೀನಾಯ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ

(India vs New zealand 2nd Test: Lowest Test totals Records)

Follow Us
TV9 Web
TV9 Web

TV9 Kannada

Read More
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ