AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಭಾರತ- ಕಿವೀಸ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

Champions Trophy 2025: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಅಜೇಯವಾಗಿವೆ. ಈ ಪಂದ್ಯದ ಗೆಲುವು ಗುಂಪು ಹಂತದ ಅಗ್ರಸ್ಥಾನವನ್ನು ನಿರ್ಧರಿಸುತ್ತದೆ. ಭಾರತ ಗೆದ್ದರೆ ಸೆಮಿಫೈನಲ್‌ನಲ್ಲಿ ಬಿ ಗುಂಪಿನ ಎರಡನೇ ಸ್ಥಾನದ ತಂಡವನ್ನು ಎದುರಿಸುತ್ತದೆ.

IND vs NZ: ಭಾರತ- ಕಿವೀಸ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?
ಭಾರತ- ನ್ಯೂಜಿಲೆಂಡ್
Follow us
ಪೃಥ್ವಿಶಂಕರ
|

Updated on:Mar 02, 2025 | 2:11 PM

ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಅಜೇಯವಾಗಿದ್ದು, ಭಾರತವು ತನ್ನ ಗೆಲುವಿನ ಓಟವನ್ನು ಮುಂದುವರೆಸುವುದರೊಂದಿಗೆ ಗುಂಪು ಹಂತವನ್ನು ಅಗ್ರಸ್ಥಾನದಲ್ಲಿ ಮುಗಿಸಲು ನೋಡುತ್ತಿದೆ. ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಸೆಮಿಫೈನಲ್‌ನಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ. ಇತ್ತ ನ್ಯೂಜಿಲೆಂಡ್ ಕೂಡ ತನ್ನ ಗೆಲುವಿನ ಲಯವನ್ನು ಮುಂದುವರೆಸುವುದರೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರೆಯಲು ಎದುರು ನೋಡುತ್ತಿದೆ. ನಾಳಿನ ಪಂದ್ಯದ ಮೇಲೆ ಸೆಮಿಫೈನಲ್ ಚಿತ್ರಣ ಸ್ಪಷ್ಟವಾಗುವುದರಿಂದ ಎಲ್ಲರ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯವು ಮಾರ್ಚ್ 2 ರ ಭಾನುವಾರದಂದು ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯವು ಭಾರತೀಯ ಸಮಯ ಮಧ್ಯಾಹ್ನ 2.30 ಕ್ಕೆ ನಡೆಯಲಿದ್ದು, ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬೇಕು?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಪಂದ್ಯದ ನೇರ ಪ್ರಸಾರವನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ

ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ’ರೂರ್ಕ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜಾಕೋಬ್ ಡಫಿ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Sat, 1 March 25

ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ