India vs Pakistan: ಪವರ್​ಪ್ಲೇನಲ್ಲಿ ಈ ಮೂವರ ವಿಕೆಟ್ ಸಿಕ್ಕರೆ ಟೀಮ್ ಇಂಡಿಯಾ ಅರ್ಧ ಗೆದ್ದಂತೆ

T20 World Cup 2021, IND vs PAK: ಇವರಲ್ಲದೆ ಪಾಕ್​ ತಂಡದಲ್ಲಿ ಅನುಭವಿಗಳಾಗಿ ಮೊಹಮ್ಮದ್ ಹಫೀಜ್ ಹಾಗೂ ಶೊಯೇಬ್ ಮಲಿಕ್ ಇದ್ದಾರೆ. ಆದರೆ ಈ ಇಬ್ಬರು ಭಾರತದ ವಿರುದ್ದ ಇದುವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

India vs Pakistan: ಪವರ್​ಪ್ಲೇನಲ್ಲಿ ಈ ಮೂವರ ವಿಕೆಟ್ ಸಿಕ್ಕರೆ ಟೀಮ್ ಇಂಡಿಯಾ ಅರ್ಧ ಗೆದ್ದಂತೆ
India vs Pakistan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 24, 2021 | 3:24 PM

ಟಿ20 ವಿಶ್ವಕಪ್​ನಲ್ಲಿ (T20 World Cup 2021) ಇಂದು ನಡೆಯಲಿರುವ ಭಾರತ-ಪಾಕಿಸ್ತಾನ್ (India vs Pakistan)​ ನಡುವಣ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ 6ನೇ ಬಾರಿ ಟಿ20 ವಿಶ್ವಕಪ್​ನಲ್ಲಿ ಪಾಕ್ ತಂಡಕ್ಕೆ ಸೋಲುಣಿಸುವ ಇರಾದೆಯಲ್ಲಿದೆ. ಆದರೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ಮಣಿಸಬೇಕೆಂದು ಪಾಕ್ ತಂಡವು ಪಣ ತೊಟ್ಟಿದೆ. ಅದರಂತೆ ಮೊದಲ ಪಂದ್ಯಕ್ಕಾಗಿ ಪಾಕಿಸ್ತಾನ್ ಸಕಲ ರೀತಿಯಲ್ಲೂ ತಯಾರಾಗಿದೆ. ಇನ್ನು ಬಲಾಢ್ಯ ಟೀಮ್ ಇಂಡಿಯಾ ಮುಂದೆ ಪಾಕ್​ ದುರ್ಬಲ ತಂಡ ಎಂದೇ ಹೇಳಬಹುದು. ಇದಾಗ್ಯೂ ಪಾಕ್ ತಂಡದಲ್ಲಿರುವ ಮೂವರು ಆಟಗಾರರು ಟೀಮ್ ಇಂಡಿಯಾ ಬೌಲರುಗಳಿಗೆ ಕಂಟಕವಾಗಬಹುದು. ಹೀಗಾಗಿ ಈ ಮೂವರನ್ನು ಪವರ್​ಪ್ಲೇನಲ್ಲೇ ಔಟ್ ಮಾಡಿದ್ರೆ ಟೀಮ್ ಇಂಡಿಯಾ ಗೆಲುವು ಖಚಿತ ಎನ್ನಬಹುದು. ಪಾಕ್ ತಂಡದಲ್ಲಿರುವ ಆ ಮೂವರು ಬ್ಯಾಟರುಗಳ ಕಿರು ಪರಿಚಯ ಇಲ್ಲಿದೆ.

ಬಾಬರ್ ಆಜಂ: ಪಾಕಿಸ್ತಾನ ತಂಡದ ಬ್ಯಾಟಿಂಗ್ ಶಕ್ತಿ ಎಂದರೆ ನಾಯಕ ಬಾಬರ್ ಆಜಂ. 27 ವರ್ಷದ ಆಜಂ ಟಿ20ಯಲ್ಲಿ 6 ಶತಕಗಳ ಜೊತೆಗೆ 59 ಅರ್ಧಶತಕಗಳನ್ನು ಬಾರಿಸಿದ್ದಾರೆ. ಪ್ರಸ್ತುತ ತಂಡದ ಆರಂಭಿಕ ಆಟಗಾರನಾಗಿರುವ ಬಾಬರ್​ ಕವರ್​ ಡ್ರೈವ್ ಬಾರಿಸುವಲ್ಲಿ ನಿಪುಣರು. ಅಷ್ಟೇ ಅಲ್ಲದೆ ಸ್ಥಿರ ಪ್ರದರ್ಶನವನ್ನೂ ನೀಡುತ್ತಾ ಬಂದಿದ್ದಾರೆ. ಅಂದರೆ ಬಾಬರ್ ಆಡಿದ ಪ್ರತಿ 3 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿಯೇ ಬಾಬರ್ ಆಜಂ ಅನ್ನು ಪಾಕಿಸ್ತಾನದ ಕೊಹ್ಲಿ ಎಂದು ಬಣ್ಣಿಸಲಾಗುತ್ತದೆ. ಇದಾಗ್ಯೂ ಔಟ್ ಸ್ವಿಂಗ್ ಮತ್ತು ಫುಲ್ ಲೆಂಗ್ತ್ ಬಾಲ್‌ಗಳನ್ನು ಎದುರಿಸಲು ಬಾಬರ್ ತಿಣುಕಾಡುತ್ತಾರೆ. ಹೀಗಾಗಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಎಸೆತಗಳನ್ನು ಎದುರಿಸಲು ಬಾಬರ್​ ಪರದಾಡಬಹುದು.

ಮೊಹಮ್ಮದ್ ರಿಜ್ವಾನ್: ಪಾಕ್​ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್‌ 2021 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಬರ್​ ಅನ್ನು ಪಾಕ್​ ತಂಡ ಕೊಹ್ಲಿ ಎಂದು ಬಣ್ಣಿಸಲಾದ್ರೆ, ರಿಜ್ವಾನ್​ ರನ್ನು ರೋಹಿತ್ ಶರ್ಮಾಗೆ ವರ್ಣಿಸಲಾಗುತ್ತದೆ. ಏಕೆಂದರೆ ಹಿಟ್​ಮ್ಯಾನ್​ನಂತೆ ರಿಜ್ವಾನ್ ಕೂಡ ಕೂಲ್ ಬ್ಯಾಟ್ಸ್​ಮನ್​. ಅಂದರೆ ಆರಂಭ ನಿಧಾನಗತಿಯಾದರೂ ಒಮ್ಮೆ ಕ್ರೀಸ್ ಕಚ್ಚಿ ನಿಂತರೆ ಯಾರಿಂದಲೂ ತಡೆಯಲಾಗುವುದಿಲ್ಲ. ಪ್ರಸ್ತುತ ರಿಜ್ವಾನ್​ ಅವರ ಸ್ಟ್ರೈಕ್ ರೇಟ್ 140 ಕ್ಕಿಂತ ಹೆಚ್ಚಿದೆ. ಬಿಗ್ ಹಿಟ್​ಗೆ ಹೆಸರುವಾಸಿಯಾಗಿರುವ ರಿಜ್ವಾನ್ ಹಾಗೂ ಬಾಬರ್ ಆಜಂ ಪಾಕ್ ತಂಡದ ಆರಂಭಿಕರು ಎಂಬುದು ವಿಶೇಷ. ಆದಾಗ್ಯೂ, ಬೌನ್ಸ್ ಮತ್ತು ನಿಧಾನಗತಿಯ ಎಸೆತಗಳನ್ನು ಎದುರಿಸುವಲ್ಲಿ ರಿಜ್ವಾನ್ ಎಡವುತ್ತಾರೆ. ಹೀಗಾಗಿ ಬುಮ್ರಾ, ಶಮಿ ನಿಧಾನಗತಿಯ ಎಸೆತಗಳ ಮೂಲಕ ರಿಜ್ವಾನ್​ರನ್ನು ಕಾಡಬಹುದು.

ಫಖರ್ ಝಮಾನ್: ಫಖರ್ ಝಮಾನ್ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹೆಸರು. ಏಕೆಂದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ದ ಫಖರ್ ಭರ್ಜರಿ ಶತಕ ಸಿಡಿಸಿದ್ದರು. ಈ ಭರ್ಜರಿ ಬ್ಯಾಟಿಂಗ್​ನಿಂದಾಗಿ ಪಾಕ್ 338 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಅಷ್ಟೇ ಅಲ್ಲದೆ ಈ ಗುರಿಯನ್ನು ಬೆನ್ನತ್ತಿದ ಭಾರತ 158 ರನ್​ಗೆ ಆಲೌಟ್ ಆಗಿತ್ತು. ಇದೀಗ ಪಾಕ್​ ತಂಡದ ಮೂರನೇ ಕ್ರಮಾಂಕದಲ್ಲಿ ಫಖರ್ ಝಮಾನ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿರುವ ಎಡಗೈ ದಾಂಡಿಗ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಇದಾಗ್ಯೂ ಆಫ್ ಸ್ಪಿನ್ನರ್‌ಗಳ ವಿರುದ್ಧ ಅವರ ದಾಖಲೆ ಕಳಪೆಯಾಗಿದೆ. ಹಾಗಾಗಿ ಆರ್ ಅಶ್ವಿನ್ ಅವರ ಎಸೆತಗಳನ್ನು ಎದುರಿಸಲು ಫಖರ್ ಝಮಾನ್ ತಿಣಕಾಡುವುದು ಖಚಿತ.

ಇವರಲ್ಲದೆ ಪಾಕ್​ ತಂಡದಲ್ಲಿ ಅನುಭವಿಗಳಾಗಿ ಮೊಹಮ್ಮದ್ ಹಫೀಜ್ ಹಾಗೂ ಶೊಯೇಬ್ ಮಲಿಕ್ ಇದ್ದಾರೆ. ಆದರೆ ಈ ಇಬ್ಬರು ಭಾರತದ ವಿರುದ್ದ ಇದುವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಟೀಮ್ ಇಂಡಿಯಾ ಬೌಲರುಗಳಿಗೆ ಈ ಇಬ್ಬರ ಚಿಂತೆಗಿಂತ ಮೊದಲ ಮೂರು ವಿಕೆಟ್ ಪಡೆಯುವುದೇ ಟಾರ್ಗೆಟ್​ ಆಗಿರಲಿದೆ. ಅದರಂತೆ ಪವರ್​ಪ್ಲೇನಲ್ಲಿ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ವಿಕೆಟ್ ಬಿದ್ದರೆ, ಉಳಿದವರು ಭಾರತದ ಪಾಲಿಗೆ ಸುಲಭ ತುತ್ತಾಗುವುದರಲ್ಲಿ ಡೌಟೇ ಇಲ್ಲ. ಹೀಗಾಗಿಯೇ ಈ ಮೂವರನ್ನು ಔಟ್ ಮಾಡಿದ್ರೆ ಭಾರತ ಅರ್ಧ ಪಂದ್ಯವನ್ನು ಗೆದ್ದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(India vs Pakistan: 3 Dangerous batters in Pakistan Team)

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು