IND vs PAK: ಕೆಲವೇ ತಿಂಗಳಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆಯಲ್ಲಿವೆ 3 ಪಂದ್ಯಗಳು

IND vs PAK: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮತ್ತೊಂದು ಮುಖಾಮುಖಿಯನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ, ಮುಂಬರುವ ಏಷ್ಯಾ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಎರಡೂ ತಂಡಗಳು ಗುಂಪು ಹಂತದಲ್ಲಿ ಮತ್ತು ಸೂಪರ್-4 ಹಂತದಲ್ಲಿ ಪಂದ್ಯಗಳನ್ನಾಡುವ ಸಾಧ್ಯತೆಯಿದೆ. ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆ ಇದೆ.

IND vs PAK: ಕೆಲವೇ ತಿಂಗಳಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆಯಲ್ಲಿವೆ 3 ಪಂದ್ಯಗಳು
ಭಾರತ- ಪಾಕಿಸ್ತಾನ

Updated on: Feb 27, 2025 | 6:17 PM

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿಯಲ್ಲಿ ನಿರೀಕ್ಷೆಯಂತೆ, ಟೀಂ ಇಂಡಿಯಾ ಗೆದ್ದಿದೆ. ಆದರೆ ಪಾಕಿಸ್ತಾನ ಮಾತ್ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದೆ. ಹೀಗಾಗಿ ಇದೇ ಟೂರ್ನಿಯಲ್ಲಿ ಭಾರತ- ಪಾಕ್ ನಡುವಿನ ಮತ್ತೊಂದು ಮುಖಾಮುಖಿಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಆದರೆ ಅಭಿಮಾನಿಗಳು ಸಂತಸ ಪಡುವ ಮತ್ತೊಂದು ಸುದ್ದಿಯಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಚಾಂಪಿಯನ್ಸ್ ಟ್ರೋಫಿಯ ನಂತರ, ಈ ವರ್ಷ ಏಷ್ಯಾಕಪ್ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕನಿಷ್ಠ 3 ಪಂದ್ಯಗಳು ನಡೆಯುವ ನಿರೀಕ್ಷೆಯಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಪಂದ್ಯಾವಳಿಯನ್ನು ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 8 ತಂಡಗಳ ಈ ಪಂದ್ಯಾವಳಿಯು ಸೆಪ್ಟೆಂಬರ್ ಎರಡನೇ ವಾರದಿಂದ ನಾಲ್ಕನೇ ವಾರದವರೆಗೆ ನಡೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಪ್ರಕಾರ ಈ ಹೈವೋಲ್ಟೇಜ್ ಕದನದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಭಾರತ-ಪಾಕ್ ನಡುವೆ 3 ಪಂದ್ಯಗಳು

2026 ರಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಏಷ್ಯಾಕಪ್ ಅನ್ನು ಸಹ ಅದೇ ಸ್ವರೂಪದಲ್ಲಿ ಆಡಲಾಗುವುದು. ಹಾಗೆಯೇ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ನಿರೀಕ್ಷೆಯಂತೆ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆಯಲ್ಲಿದೆ.

ಇದನ್ನೂ ಓದಿ
ಬಾಂಗ್ಲಾ ವಿರುದ್ಧವೂ ಸೋತರೆ ಪಾಕ್ ತಂಡವನ್ನು ದೇವರೇ ಕಾಪಾಡಬೇಕು
ಕೋಚಿಂಗ್ ಸಿಬ್ಬಂದಿ ಜೊತೆ ಕೆಲವು ಸ್ಟಾರ್ ಆಟಗಾರರ ತಲೆದಂಡ
ಪಾಕ್ ತಂಡಕ್ಕೆ ಕೋಚ್ ಆಗಲು ಯೋಗರಾಜ್ ಸಿಂಗ್ ಉತ್ಸುಕ

ಎರಡೂ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದರೆ, ಸೂಪರ್-4 ಹಂತದಲ್ಲೂ ಪರಸ್ಪರ ಎದುರಾಗಬಹುದು. ಇಲ್ಲಿಂದ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಆ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೂಪರ್-4 ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ.

ಇದನ್ನೂ ಓದಿ: Champions Trophy 2025: ಒಂದು ಪಂದ್ಯವನ್ನು ಗೆಲ್ಲದೆ ಹೊರಬಿದ್ದ ಪಾಕಿಸ್ತಾನಕ್ಕೆ ಸಿಕ್ಕ ಹಣವೆಷ್ಟು?

ಪಂದ್ಯಾವಳಿ ಎಲ್ಲಿ ನಡೆಯಲ್ಲಿದೆ?

ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುವುದು. ವಾಸ್ತವವಾಗಿ ಈ ಬಾರಿ ಏಷ್ಯಾಕಪ್ ಆತಿಥ್ಯ ಬಿಸಿಸಿಐ ಬಳಿ ಇದೆ. ಹೀಗಾಗಿ ಈ ಪಂದ್ಯಾವಳಿ ಭಾರತದಲ್ಲಿ ನಡೆಯಬೇಕು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ವಿವಾದದಿಂದಾಗಿ, ತಟಸ್ಥ ಸ್ಥಳದಲ್ಲಿ ಆಡುವ ಬಗ್ಗೆ ಒಮ್ಮತ ಮೂಡಿದೆ. ಆದಾಗ್ಯೂ, ಆತಿಥೇಯ ಹಕ್ಕುಗಳು ಬಿಸಿಸಿಐ ಬಳಿಯೇ ಇರುತ್ತವೆ. ಅದೇ ರೀತಿ, ಮುಂದಿನ ಬಾರಿ ಭಾರತ ಅಥವಾ ಪಾಕಿಸ್ತಾನ ಪಂದ್ಯಾವಳಿಯನ್ನು ಆಯೋಜಿಸುವ ಸರದಿ ಬಂದಾಗ, ಅದನ್ನು ಯಾವುದಾದರೂ ಮೂರನೇ ದೇಶದಲ್ಲಿ ಆಯೋಜಿಸಲಾಗುತ್ತದೆ. ಮತ್ತೊಮ್ಮೆ, ಇದಕ್ಕಾಗಿ ಯುಎಇ ಅಥವಾ ಶ್ರೀಲಂಕಾವನ್ನು ಆಯ್ಕೆ ಮಾಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ