IND vs PAK T20 World Cup Highlights: ರಣರೋಚಕ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸಿದ ಭಾರತ

ಪೃಥ್ವಿಶಂಕರ
|

Updated on:Jun 10, 2024 | 1:20 AM

India vs Pakistan T20 World Cup 2024 Highlights and Updates in Kannada: ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ಜಯ ಸಾಧಿಸಿದೆ.

IND vs PAK T20 World Cup Highlights: ರಣರೋಚಕ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸಿದ ಭಾರತ
ಟೀಂ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 19 ಓವರ್​​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಸುಲಭವಾಗಿ ಗೆಲ್ಲುವಂತೆ ತೊರುತ್ತಿತ್ತು. ಅದರಂತೆ ತಂಡಕ್ಕೆ ಉತ್ತಮ ಆರಂಭ ಕೂಡ ಸಿಕ್ಕಿತ್ತು. ಆದರೆ ಆ ನಂತರ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಪಾಕಿಸ್ತಾನವನ್ನು 20 ಓವರ್‌ಗಳಲ್ಲಿ 113 ರನ್‌ಗಳಿಗೆ ಸೀಮಿತಗೊಳಿಸಿದರು.

LIVE NEWS & UPDATES

The liveblog has ended.
  • 10 Jun 2024 01:13 AM (IST)

    IND vs PAK T20 World Cup LIVE Score: ಭಾರತಕ್ಕೆ 6 ರನ್ ಜಯ

    ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 14ನೇ ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 80 ರನ್ ಕಲೆಹಾಕಿತ್ತು. ಆದರೆ ರಿಜ್ವಾನ್-ಶಾದಾಬ್ ಔಟಾದ ಬಳಿಕ ತಂಡ ತತ್ತರಿಸಿ, 6 ರನ್​​ಗಳಿಂದ ಸೋಲೊಪ್ಪಿಕೊಂಡಿತು.

  • 10 Jun 2024 01:10 AM (IST)

    IND vs PAK T20 World Cup LIVE Score: 18 ರನ್ ಅಗತ್ಯ

    ಪಾಕಿಸ್ತಾನಕ್ಕೆ ಆರು ಎಸೆತಗಳಲ್ಲಿ 18 ರನ್‌ಗಳ ಅಗತ್ಯವಿದೆ. 19ನೇ ಓವರ್‌ನ ಕೊನೆಯ ಎಸೆತದಲ್ಲಿ ಇಫ್ತಿಕರ್‌ ಕ್ಯಾಚಿತ್ತು ಔಟಾದರು. ಅರ್ಷದೀಪ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.

  • 10 Jun 2024 01:09 AM (IST)

    IND vs PAK T20 World Cup LIVE Score: ಎರಡು ಓವರ್‌ ಬಾಕಿ

    ಪಾಕಿಸ್ತಾನಕ್ಕೆ ಎರಡು ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿದೆ. ಸದ್ಯ ಇಮಾದ್ ವಾಸಿಂ ಮತ್ತು ಇಫ್ತಿಕರ್ ಅಹ್ಮದ್ ಕ್ರೀಸ್‌ನಲ್ಲಿದ್ದಾರೆ. ಬುಮ್ರಾ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನದ ಸ್ಕೋರ್ 18 ಓವರ್‌ಗಳಲ್ಲಿ ಐದು ವಿಕೆಟ್‌ಗೆ 100 ರನ್ ಆಗಿದೆ.

  • 10 Jun 2024 12:50 AM (IST)

    IND vs PAK T20 World Cup LIVE Score: ಐದನೇ ವಿಕೆಟ್

    ಪಾಕಿಸ್ತಾನ ಐದನೇ ವಿಕೆಟ್ ಕಳೆದುಕೊಂಡಿದೆ. 17ನೇ ಓವರ್​ನಲ್ಲಿ ಶಾದಾಬ್ ಖಾನ್ ಕ್ಯಾಚ್ ನೀಡಿ ಔಟಾದರು. ಸದ್ಯ ಇಫ್ತಿಕರ್ ಅಹ್ಮದ್ ಮತ್ತು ಇಮಾದ್ ವಾಸಿಂ ಕ್ರೀಸ್‌ನಲ್ಲಿದ್ದಾರೆ.

  • 10 Jun 2024 12:40 AM (IST)

    IND vs PAK T20 World Cup LIVE Score: ರಿಜ್ವಾನ್ ಔಟ್

    15ನೇ ಓವರ್‌ನ ಮೊದಲ ಎಸೆತದಲ್ಲಿ ರಿಜ್ವಾನ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. 44 ಎಸೆತಗಳಲ್ಲಿ 31 ರನ್ ಗಳಿಸಿ ರಿಜ್ವಾನ್ ಔಟಾದರು. ಸದ್ಯ ಶಾದಾಬ್ ಖಾನ್ ಮತ್ತು ಇಮಾದ್ ವಾಸಿಂ ಕ್ರೀಸ್‌ನಲ್ಲಿದ್ದಾರೆ.

  • 10 Jun 2024 12:27 AM (IST)

    IND vs PAK T20 World Cup LIVE Score: ಫಖರ್ ಜಮಾನ್ ಔಟ್

    ಪಾಕಿಸ್ತಾನ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದ್ದು, ಫಖರ್ ಜಮಾನ್ ಕ್ಯಾಚ್ ನೀಡಿ ಔಟಾದರು. ಸದ್ಯ ಇಮಾದ್ ವಾಸಿಂ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.

  • 10 Jun 2024 12:25 AM (IST)

    IND vs PAK T20 World Cup LIVE Score: 2ನೇ ವಿಕೆಟ್

    11ನೇ ಓವರ್‌ನಲ್ಲಿ ಪಾಕಿಸ್ತಾನ ಎರಡನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್, ಉಸ್ಮಾನ್ ಖಾನ್ ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರು. ಸದ್ಯ ಫಖರ್ ಜಮಾನ್ ಮತ್ತು ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ. 11 ಓವರ್‌ಗಳ ನಂತರ ಪಾಕಿಸ್ತಾನದ ಸ್ಕೋರ್ ಎರಡು ವಿಕೆಟ್‌ಗೆ 66 ರನ್ ಆಗಿದೆ.

  • 10 Jun 2024 12:24 AM (IST)

    IND vs PAK T20 World Cup LIVE Score: ಪಾಕಿಸ್ತಾನ 57/1

    ಪಾಕಿಸ್ತಾನ 10 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 57 ರನ್ ಗಳಿಸಿದೆ. ಸದ್ಯ ರಿಜ್ವಾನ್ 27 ರನ್ ಹಾಗೂ ಉಸ್ಮಾನ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪಾಕಿಸ್ತಾನಕ್ಕೆ ಈಗ 60 ಎಸೆತಗಳಲ್ಲಿ 63 ರನ್ ಅಗತ್ಯವಿದೆ.

  • 10 Jun 2024 12:02 AM (IST)

    IND vs PAK T20 World Cup LIVE Score: ಪವರ್ ಪ್ಲೇ ಅಂತ್ಯ

    ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳಲ್ಲಿ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿದೆ. ಸದ್ಯ ಉಸ್ಮಾನ್ ಖಾನ್ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.

  • 09 Jun 2024 11:58 PM (IST)

    IND vs PAK T20 World Cup LIVE Score: ನಾಯಕ ಬಾಬರ್ ಔಟ್

    ಐದನೇ ಓವರ್‌ನಲ್ಲಿ ಬುಮ್ರಾ , ಬಾಬರ್ ಅಜಮ್ ವಿಕೆಟ್ ಪಡೆದರು. ಸದ್ಯ ಉಸ್ಮಾನ್ ಖಾನ್ ಮತ್ತು ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ. ರಿಜ್ವಾನ್ ನೀಡಿದ ಸುಲಭ ಕ್ಯಾಚ್ ಅನ್ನು ಶಿವಂ ದುಬೆ ಕೈಬಿಟ್ಟಿದ್ದರು. ಆಗ ರಿಜ್ವಾನ್ ಏಳು ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

  • 09 Jun 2024 11:40 PM (IST)

    IND vs PAK T20 World Cup LIVE Score: ಪಾಕಿಸ್ತಾನದ ಇನ್ನಿಂಗ್ಸ್ ಆರಂಭ

    ಪಾಕಿಸ್ತಾನದ ಇನ್ನಿಂಗ್ಸ್ ಆರಂಭವಾಗಿದೆ. ಮೊದಲ ಓವರ್‌ನಲ್ಲಿ ಒಂಬತ್ತು ರನ್‌ಗಳು ಬಂದವು. ಭಾರತದ ಪರ ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲ್ ಮಾಡಿದರು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

  • 09 Jun 2024 11:26 PM (IST)

    IND vs PAK T20 World Cup LIVE Score: 119 ರನ್‌ಗಳಿಗೆ ಆಲೌಟ್

    ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕ ಎಲ್ಲವೂ ವಿಫಲವಾಯಿತು. ಹೀಗಾಗಿ ತಂಡ 119 ರನ್‌ಗಳಿಗೆ ಆಲೌಟ್ ಆಯಿತು.

  • 09 Jun 2024 11:08 PM (IST)

    IND vs PAK T20 World Cup LIVE Score: ಬ್ಯಾಕ್ ಟು ಬ್ಯಾಕ್ ವಿಕೆಟ್

    18ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಹ್ಯಾರಿಸ್ ರೌಫ್ ಭಾರತದ ಎರಡು ವಿಕೆಟ್ ಉರುಳಿಸಿದರು. ಅವರು ಓವರ್‌ನ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯರನ್ನು ಇದಾದ ನಂತರದ ಎಸೆತದಲ್ಲಿಯೇ ಜಸ್ಪ್ರೀತ್ ಬುಮ್ರಾ ಅವರನ್ನು ಪೆವಿಲಿಯನ್​ಗಟ್ಟಿದರು. 18 ಓವರ್‌ಗಳ ನಂತರ ಭಾರತದ ಸ್ಕೋರ್ ಒಂಬತ್ತು ವಿಕೆಟ್‌ಗೆ 113 ರನ್ ಆಗಿದೆ. ಸದ್ಯ ಸಿರಾಜ್ ಮತ್ತು ಅರ್ಷದೀಪ್ ಕ್ರೀಸ್‌ನಲ್ಲಿದ್ದಾರೆ.

  • 09 Jun 2024 11:01 PM (IST)

    IND vs PAK T20 World Cup LIVE Score: ಶತಕ ಪೂರ್ಣ

    17 ಓವರ್‌ಗಳಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದೆ. ಸದ್ಯ ಅರ್ಷದೀಪ್ ಸಿಂಗ್ ಒಂಬತ್ತು ರನ್ ಹಾಗೂ ಹಾರ್ದಿಕ್ ಪಾಂಡ್ಯ 1 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • 09 Jun 2024 10:51 PM (IST)

    IND vs PAK T20 World Cup LIVE Score: 7 ವಿಕೆಟ್ ಪತನ

    ಭಾರತ 15ನೇ ಓವರ್‌ನಲ್ಲಿ ಏಳನೇ ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ಅಮೀರ್ ಈ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಪಂತ್ 31 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರೆ, ಜಡೇಜಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ.

  • 09 Jun 2024 10:42 PM (IST)

    IND vs PAK T20 World Cup LIVE Score: ದುಬೆ ಔಟ್

    14ನೇ ಓವರ್‌ನಲ್ಲಿ ಭಾರತ ಐದನೇ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ ನಂತರ ಶಿವಂ ದುಬೆ ಕೂಡ ಪೆವಿಲಿಯನ್​ಗೆ ಮರಳಿದರು. ಸೂರ್ಯ ಏಳು ರನ್ ಗಳಿಸಿದರೆ, ಶಿವಂ ದುಬೆ ಒಂಬತ್ತು ಎಸೆತಗಳಲ್ಲಿ ಮೂರು ರನ್ ಗಳಿಸಿ ಔಟಾದರು. 14 ಓವರ್‌ಗಳ ನಂತರ ಭಾರತದ ಸ್ಕೋರ್ ಐದು ವಿಕೆಟ್‌ಗೆ 96 ರನ್

  • 09 Jun 2024 10:37 PM (IST)

    IND vs PAK T20 World Cup LIVE Score: ಸೂರ್ಯ ಮತ್ತೆ ವಿಫಲ

    12ನೇ ಓವರ್‌ನಲ್ಲಿ 89 ರನ್‌ಗಳಿದ್ದಾಗ ಭಾರತ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೇವಲ ಏಳು ರನ್ ಗಳಿಸಿ ಔಟಾದರು. ಸದ್ಯ ಶಿವಂ ದುಬೆ ಮತ್ತು ರಿಷಬ್ ಪಂತ್ ಕ್ರೀಸ್‌ನಲ್ಲಿದ್ದಾರೆ. 12 ಓವರ್‌ಗಳ ನಂತರ ಭಾರತದ ಸ್ಕೋರ್ ನಾಲ್ಕು ವಿಕೆಟ್‌ಗೆ 90 ರನ್ ಆಗಿದೆ.

  • 09 Jun 2024 10:30 PM (IST)

    IND vs PAK T20 World Cup LIVE Score: 10 ಓವರ್‌ ಮುಕ್ತಾಯ

    10 ಓವರ್‌ಗಳಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಸದ್ಯ ಸೂರ್ಯಕುಮಾರ್ ಯಾದವ್ 5 ಹಾಗೂ ರಿಷಬ್ ಪಂತ್ 34 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 20+ ರನ್‌ಗಳ ಜೊತೆಯಾಟ ನಡೆದಿದೆ. ಇದಕ್ಕೂ ಮುನ್ನ ಪಂತ್ ಅಕ್ಷರ್ ಜೊತೆ 39 ರನ್ ಗಳ ಜೊತೆಯಾಟ ನೀಡಿದ್ದರು. ಭಾರತ ದೊಡ್ಡ ಮೊತ್ತ ಗಳಿಸಬೇಕಾದರೆ ಪಂತ್ ದೊಡ್ಡ ಇನ್ನಿಂಗ್ಸ್ ಆಡಬೇಕಾಗುತ್ತದೆ. 

  • 09 Jun 2024 10:17 PM (IST)

    IND vs PAK T20 World Cup LIVE Score: 3ನೇ ವಿಕೆಟ್

    ಎಂಟನೇ ಓವರ್‌ನಲ್ಲಿ 58 ರನ್‌ಗಳಿದ್ದಾಗ ಭಾರತ ಮೂರನೇ ವಿಕೆಟ್ ಕಳೆದುಕೊಂಡಿದೆ. ನಸೀಮ್ ಶಾ ಅಕ್ಷರ್ ಪಟೇಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಕ್ಷರ್ 18 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 20 ರನ್ ಗಳಿಸಿ ಔಟಾದರು.

  • 09 Jun 2024 10:16 PM (IST)

    IND vs PAK T20 World Cup LIVE Score: ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳ ನಂತರ ಭಾರತದ ಸ್ಕೋರ್ ಎರಡು ವಿಕೆಟ್‌ಗೆ 50 ರನ್ ಆಗಿದೆ. ಸದ್ಯ ರಿಷಭ್ ಪಂತ್ 15 ರನ್ ಹಾಗೂ ಅಕ್ಷರ್ ಪಟೇಲ್ 15 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 30+ ರನ್‌ಗಳ ಜೊತೆಯಾಟ ನಡೆದಿದೆ. 

  • 09 Jun 2024 09:56 PM (IST)

    IND vs PAK T20 World Cup LIVE Score: 5 ಓವರ್ ಅಂತ್ಯ

    ಭಾರತದ ಇನ್ನಿಂಗ್ಸ್​ನ 5 ಓವರ್​ಗಳು ಮುಗಿದಿವೆ. ಈ 5 ಓವರ್​ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 38 ರನ್ ಕಲೆಹಾಕಿದೆ.

  • 09 Jun 2024 09:41 PM (IST)

    IND vs PAK T20 World Cup LIVE Score: ರೋಹಿತ್ ಕೂಡ ಔಟ್

    ನಾಯಕ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೂರನೇ ಓವರ್​ನಲ್ಲಿ ಅಫ್ರಿದಿ ಬೌಲಿಂಗ್​ನಲ್ಲಿ ರೋಹಿತ್ ಕ್ಯಾಚಿತ್ತು ಔಟಾದರು.

    ಭಾರತ- 19/2

  • 09 Jun 2024 09:34 PM (IST)

    IND vs PAK T20 World Cup LIVE Score: ಕೊಹ್ಲಿ ಔಟ್

    ಭಾರತದ ಮೊದಲ ವಿಕೆಟ್ ಪತನವಾಗಿದೆ. ಇನ್ನಿಂಗ್ಸ್​ನ 2ನೇ ಓವರ್​ನಲ್ಲಿ ಕೊಹ್ಲಿ ಕ್ಯಾಚಿತ್ತು ಔಟಾದರು. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 4 ರನ್​ ಬಾರಿಸಲಷ್ಟೇ ಶಕ್ತರಾದರು.

    ಭಾರತ- 12/1

  • 09 Jun 2024 09:04 PM (IST)

    IND vs PAK T20 World Cup LIVE Score: ಮಳೆಯಿಂದ ಆಟ ಸ್ಥಗಿತ

    ಮಳೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆಟ ಸ್ಥಗಿತವಾಗಿದೆ. ಮಳೆ ಬೀಳುವ ಹೊತ್ತಿಗೆ ಬ್ಯಾಟಿಂಗ್ ಆಂಭಿಸಿದ್ದ ಭಾರತ ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಬಾರಿಸಿದೆ.

  • 09 Jun 2024 08:50 PM (IST)

    IND vs PAK T20 World Cup LIVE Score: ಭಾರತದ ಬ್ಯಾಟಿಂಗ್ ಆರಂಭ

    ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರೀಸ್​ನಲ್ಲಿದ್ದಾರೆ.

  • 09 Jun 2024 08:18 PM (IST)

    IND vs PAK T20 World Cup LIVE Score: ಪಾಕಿಸ್ತಾನ ತಂಡ

    ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಆಝಂ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

  • 09 Jun 2024 08:18 PM (IST)

    IND vs PAK T20 World Cup LIVE Score: ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

  • 09 Jun 2024 08:02 PM (IST)

    IND vs PAK T20 World Cup LIVE Score: ಟಾಸ್ ಗೆದ್ದ ಪಾಕಿಸ್ತಾನ

    ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಆಝಂ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 09 Jun 2024 07:54 PM (IST)

    IND vs PAK T20 World Cup LIVE Score: 8:30 ಕ್ಕೆ ಪಂದ್ಯ ಆರಂಭ

    ನ್ಯೂಯಾರ್ಕ್​ನಲ್ಲಿ ಮಳೆ ನಿಂತಿದ್ದು, ಟಾಸ್ 8 ಗಂಟೆಗೆ ನಡೆಯಲ್ಲಿದೆ. ಪಂದ್ಯ 8:30 ಕ್ಕೆ ಆರಂಭವಾಗಲಿದೆ.

  • 09 Jun 2024 07:43 PM (IST)

    ಅಂಪೈರ್‌ಗಳು ಪರಿಶೀಲಿಸುತ್ತಿದ್ದಾರೆ

    ಸದ್ಯಕ್ಕೆ ಮಳೆ ನಿಂತಿದ್ದರೂ ಪಂದ್ಯವನ್ನು ತಕ್ಷಣ ಆರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಂಪೈರ್ ಪ್ರಸ್ತುತ ಮೈದಾನವನ್ನು ಪರಿಶೀಲಿಸುತ್ತಿದ್ದಾರೆ.

  • 09 Jun 2024 07:43 PM (IST)

    IND vs PAK T20 World Cup LIVE Score; ಟಾಸ್ ಮುಂದೂಡಲಾಗಿದೆ

    ನಸ್ಸೌ ಕೌಂಟಿಯಲ್ಲಿ ಸಣ್ಣ ಮಳೆಯಿಂದಾಗಿ ಟಾಸ್ ಅನ್ನು ಮುಂದೂಡಲಾಗಿದೆ.

  • 09 Jun 2024 07:24 PM (IST)

    ಪಂದ್ಯ ನಡೆಯದಿದ್ದರೆ ಏನು?

    ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಪಂದ್ಯ ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳು ತಲಾ 1 ಅಂಕ ಗಳಿಸಲಿವೆ. ಆದರೆ, ಪಂದ್ಯ ನಡೆಯದಿರುವ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ 65 ನಿಮಿಷಗಳ ನಂತರ ಓವರ್‌ಗಳನ್ನು ಕಡಿತಗೊಳಿಸಲು ಪ್ರಾರಂಭಿಸಲಾಗುತ್ತದೆ.

  • 09 Jun 2024 07:23 PM (IST)

    ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಮೋದಿ

    ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ. ಇನ್ನು ರಾಷ್ಟ್ರಪತಿಗಳು ಸಹ ಮೋದಿಗೆ ಪ್ರಮಾಣವಚನ ಬೋಧಿಸಲು ಆಗಮಿಸಿದ್ದಾರೆ,

  • 09 Jun 2024 07:08 PM (IST)

    ನ್ಯೂಯಾರ್ಕ್‌ನಲ್ಲಿ ಮಳೆ

    ಭಾರತ-ಪಾಕಿಸ್ತಾನ ಪಂದ್ಯ ವಿಳಂಬವಾಗುವ ಸಾಧ್ಯತೆ ಇದೆ. ನ್ಯೂಯಾರ್ಕ್‌ನ ಹಲವು ಪ್ರದೇಶಗಳಲ್ಲಿ ಮಳೆ ಪ್ರಾರಂಭವಾಗಿದೆ. ನಾಸೋ ಕೌಂಟಿಯಲ್ಲೂ ಮೋಡ ಕವಿದ ವಾತಾವರಣವಿದೆ.

  • 09 Jun 2024 06:43 PM (IST)

    ಮೋದಿ ನಂತರ ಯಾರ್ಯಾರು ಪ್ರಮಾಣವಚನ ಸ್ವೀಕರಿಸುತ್ತಾರೆ?

    3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಕ್ಯಾಬಿನೆಟ್​​ ಸಚಿವರಾಗಿ ಮೊದಲಿಗೆ ರಾಜನಾಥ್ ಸಿಂಗ್‌, ನಂತರ ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್‌ ಸಿಂಗ್‌ ಚೌಹಾಣ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  • 09 Jun 2024 06:33 PM (IST)

    ನಸ್ಸೌ ಕೌಂಟಿ ಹವಾಮಾನ

    ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೂ ಮುನ್ನ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಭಾರತ-ಪಾಕ್ ಪಂದ್ಯ ವಿಳಂಬವಾಗುವುದು ಖಚಿತ.

  • 09 Jun 2024 06:22 PM (IST)

    ಭಾರತ- ಪಾಕಿಸ್ತಾನ ಮುಖಾಮುಖಿ ವರದಿ

    ಈ ಬಾರಿ ಟಿ20 ವಿಶ್ವಕಪ್‌ನ ಪಿಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 8ನೇ ಬಾರಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆಡಿದ 7 ಪಂದ್ಯಗಳಲ್ಲಿ ಟೀಂ ಇಂಡಿಯಾ 6 ಬಾರಿ ಗೆದ್ದಿದ್ದರೆ, 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ.

  • Published On - Jun 09,2024 6:21 PM

    Follow us
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
    ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
    ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
    ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
    ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್