ಹದಿನೈದನೇ ಆವೃತ್ತಿಯ ಏಷ್ಯಾಕಪ್ 2022 (Asia Cup 2022) ಟೂರ್ನಿ ರೋಚಕತೆ ಸೃಷ್ಟಿಸಿದೆ. ಈಗಾಗಲೇ ಭಾರತ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಇಂದು ಗ್ರೂಪ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ (Pakistan vs Hong Kong) ತಂಡ ಮುಖಾಮುಖಿ ಆಗಲಿದೆ. ಇದರಲ್ಲಿ ಗೆದ್ದ ತಂಡ ನಾಲ್ಕನೇ ಟೀಮ್ ಆಗಿ ಸೂಪರ್ 4 ಗೆ ಅರ್ಹತೆ ಪಡೆಯಲಿದೆ. ಎಲ್ಲಾದರು ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಭಾರತ ವಿರುದ್ಧ ಪುನಃ ಸೆಣೆಸಾಟ ನಡೆಸಲಿದೆ. ಸೂಪರ್ 4 ಹಂತದ ವೇಳಾಪಟ್ಟಿಯಲ್ಲಿ ಟೀಮ್ ಇಂಡಿಯಾ (Team India) ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ. ರೋಹಿತ್ ಪಡೆಯ ಎದುರಾಳಿ ಯಾರೆಲ್ಲ?, ಯಾವಾಗ ಪಂದ್ಯ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸೂಪರ್ 4 ಹಂತದ ಪಂದ್ಯ ಸೆ. 3 ಶನಿವಾರದಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಬಿ ಗ್ರೂಪ್ನ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಲಿದೆ. ಭಾನುವಾರದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಎದುರಾಳಿ ಯಾರು ಎಂಬುದು ಇಂದು ನಿರ್ಧಾರ ಆಗಲಿದೆ. ಪಾಕಿಸ್ತಾನ–ಹಾಂಗ್ ಕಾಂಗ್ ನಡುವಣ ಮ್ಯಾಚ್ನಲ್ಲಿ ಗೆದ್ದ ತಂಡ ಸೆ. 4 ರಂದು ಭಾರತ ವಿರುದ್ಧ ಕಣಕ್ಕಿಳಿಯಲಿದೆ.
ಇನ್ನು ಸೆಪ್ಟೆಂಬರ್ 6 ರಂದು ಭಾರತ ದುಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಸೆಪ್ಟೆಂಬರ್ 7 ರಂದು ಪಾಕ್–ಹಾಂಗ್ ಕಾಂಗ್ ಪಂದ್ಯದಲ್ಲಿ ಗೆದ್ದ ತಂಡ ಶ್ರೀಲಂಕಾ ವಿರುದ್ಧ ಆಡಬೇಕು. ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯ ಸೆಪ್ಟೆಂಬರ್ 8 ರಂದು ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯಲಿದೆ.
ಸೂಪರ್ 4 ಹಂತದಲ್ಲಿ ಕೂಡ ಪಾಯಿಂಟ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿದೆ. ಅಂದರೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳೇ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಏಷ್ಯಾಕಪ್ 2022 ಫೈನಲ್ ಫೈಟ್ ಸೆಪ್ಟೆಂಬರ್ 11 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೂಪರ್– 4 ವೇಳಾಪಟ್ಟಿ:
ಸೆಪ್ಟೆಂಬರ್ 3 – ಅಫ್ಘಾನಿಸ್ತಾನ್ vs ಶ್ರೀಲಂಕಾ- ಶಾರ್ಜಾ
ಸೆಪ್ಟೆಂಬರ್ 4 – ಭಾರತ vs A2- ದುಬೈ
ಸೆಪ್ಟೆಂಬರ್ 6 – ಭಾರತ vs ಅಫ್ಘಾನಿಸ್ತಾನ್ – ದುಬೈ
ಸೆಪ್ಟೆಂಬರ್ 7 – A2 vs ಶ್ರೀಲಂಕಾ- ದುಬೈ
ಸೆಪ್ಟೆಂಬರ್ 8 – ಭಾರತ vs ಶ್ರೀಲಂಕಾ- ದುಬೈ
ಸೆಪ್ಟೆಂಬರ್ 9 – ಅಫ್ಘಾನಿಸ್ತಾನ vs- A2- ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ– ದುಬೈ
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್. ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
Published On - 10:49 am, Fri, 2 September 22