
ಭಾರತ ಹಾಗೂ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿ ಆಗಿತ್ತು. ಈ ರೀತಿ ಐಸಿಸಿ ಸರಣಿಗಳಲ್ಲಿ ಮಾತ್ರ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಗುತ್ತವೆಯೇ ಹೊರತು ಎರಡೂ ದೇಶಗಳ ಮಧ್ಯೆ ಸರಣಿಗಳು ನಡೆಯದೇ ದಶಕ ಕಳೆದಿದೆ. 2012-13ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸರಣಿ ಪಂದ್ಯಗಳನ್ನು ಆಡಿತ್ತು. ಇದಾದ ಬಳಿಕ ಈ ರೀತಿಯ ಯಾವುದೇ ಸರಣ ಎರಡೂ ದೇಶಗಳ ಮಧ್ಯೆ ನಡೆದಿಲ್ಲ. ಇದು ಮತ್ತೆ ನಡೆಯಬೇಕು ಎಂದರೆ ಒಂದೇ ಷರತ್ತು ಇದೆ ಎಂದು ಕಾಮೆಂಟೇಟರ್ ಸುನೀಲ್ ಗವಾಸ್ಕರ್ ಅವರು ಹೇಳಿದ್ದಾರೆ.
ಇತ್ತೀಚೆಗೆ ಚಾನೆಲ್ ಒಂದರಲ್ಲಿ ಮಾತನಾಡಿರೋ ಸುನೀಲ್ ಗವಾಸ್ಕರ್, ‘ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡುವ ಏಕೈಕ ಮಾರ್ಗವೆಂದರೆ ಎರಡೂ ರಾಷ್ಟ್ರಗಳ ಸರ್ಕಾರಗಳು ಗಡಿಯಲ್ಲಿ ಶಾಂತಿ ನೆಲೆಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಂದಾಗ ಮಾತ್ರ ದ್ವಿಪಕ್ಷೀಯ ಸರಣಿ ಸಾಧ್ಯ’ ಎಂದಿದ್ದಾರೆ.
‘ದೇಶದ ಗಡಿಯಲ್ಲಿ ಶಾಂತಿ ಇಲ್ಲದೆ ಭಾರತ ಹಾಗೂ ಪಾಕ್ ಸರಣಿ ಪಂದ್ಯವನ್ನಾಡಲು ಹೇಗೆ ಸಾಧ್ಯ? ಒಂದೊಮ್ಮೆ ಗಡಿಯಲ್ಲಿ ಶಾಂತಿ ನೆಲೆಸಿದರೆ ಭಾರತ ಹಾಗೂ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಚರ್ಚಿಸಬಹುದು. ಗಡಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಈಗ ಆ ಬಗ್ಗೆ ಚರ್ಚಿಸೋಣ ಎನ್ನುವ ಪರಿಸ್ಥಿತಿ ಬರಬೇಕು’ ಎಂದು ಅವರು ಹೇಳಿದ್ದಾರೆ. ‘ಶಾಂತಿ ನೆಲೆಸುವವರೆಗೂ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುವುದಿಲ್ಲ’ ಎಂದು ಸುನೀಲ್ ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Champions Trophy 2025: ಒಂದು ಪಂದ್ಯವನ್ನು ಗೆಲ್ಲದೆ ಹೊರಬಿದ್ದ ಪಾಕಿಸ್ತಾನಕ್ಕೆ ಸಿಕ್ಕ ಹಣವೆಷ್ಟು?
ಈ ವರ್ಷ ಭಾರತ ಹಾಗೂ ಪಾಕ್ ಮಧ್ಯೆ ಸಾಕಷ್ಟು ಪಂದ್ಯಗಳು ನಡೆಯಲಿವೆ. 2025ರ ಏಷ್ಯಾ ಕಪ್ನಲ್ಲಿ ಭಾರತ ಹಾಗೂ ಪಾಕ್ ಮುಖಾ ಮುಖಿ ಆಗಲಿವೆ. ಸೆಪ್ಟೆಂಬರ್ನಲ್ಲಿ ಈ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಳ್ಳಲಿವೆ. ಸೂಪರ್ 4 ಸ್ಟೇಜ್ನಲ್ಲೂ ಎರಡೂ ತಂಡಗಳು ಆಡಿವೆ. ಒಂದೊಮ್ಮೆ ಆಯ್ಕೆ ಆದರೆ ಇವರು ಫಿನಾಲೆಯಲ್ಲೂ ಆಡುವ ಸಾಧ್ಯತೆ ಹೆಚ್ಚು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.