AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ಪಾಕ್ ಪಂದ್ಯದ ಟಿಕೆಟ್​ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್..! ಕೆಂಡಕಾರಿದ ಫ್ಯಾನ್ಸ್

India vs Pakistan World Cup 2023: ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆನ್​ಲೈನ್ ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸರ್ವರ್ ಕೈಕೊಟ್ಟಿದೆ. ಹೀಗಾಗಿ ಭಾಗಶಃ ಅಭಿಮಾನಿಗಳಿಗೆ ಟಿಕೆಟ್ ಖರೀದಿ ಮಾಡಲು ಸಾಧ್ಯವಾಗಿಲ್ಲ. ಒಂದು ಟಿಕೆಟ್ ಖರೀದಿಗಾಗಿ ಗಂಟೆಗಟ್ಟಲೆ ಆನ್​ಲೈನ್​ನಲ್ಲಿ ಕಾದು ಕುಳಿತರೂ ಕಳಪೆ ಸರ್ವರ್​ನಿಂದಾಗಿ ಟಿಕೆಟ್ ಖರೀದಿ ಸಾಧ್ಯವಾಗಿಲ್ಲ.

ಭಾರತ- ಪಾಕ್ ಪಂದ್ಯದ ಟಿಕೆಟ್​ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್..! ಕೆಂಡಕಾರಿದ ಫ್ಯಾನ್ಸ್
ಭಾರತ- ಪಾಕಿಸ್ತಾನ ಪಂದ್ಯ
ಪೃಥ್ವಿಶಂಕರ
|

Updated on:Aug 30, 2023 | 8:00 AM

Share

2023 ರ ಏಷ್ಯಾಕಪ್ (Asia Cup 2023) ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ (Nepal vs Pakistan) ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಏಷ್ಯಾಕಪ್​ಗೆ ನಿಜವಾಗಿ ಕಳೆಗಟ್ಟುವುದು ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಕದನದಿಂದ. ಈ ಉಭಯ ತಂಡಗಳು ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿ ಮೈದನಾದಲ್ಲಿ ಮುಖಾಮುಖಿಯಾಗುತ್ತಿವೆ. ಆ ಬಳಿಕ ಈ ಎರಡೂ ತಂಡಗಳು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ವಾಸ್ತವವಾಗಿ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ (ICC World Cup 2023) ಆರಂಭವಾಗುತ್ತಿದ್ದು, ಕ್ರಿಕೆಟ್​ನ ಈ ಮಹಾ ಸಂಗ್ರಾಮದಲ್ಲಿ ಭಾರತ- ಪಾಕ್ ತಂಡಗಳು ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಎದುರಾಗುತ್ತಿವೆ. ಹೀಗಾಗಿ ಈ ಬದ್ಧವೈರಿಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ವಿಶ್ವಕಪ್ ಟಿಕೆಟ್​ಗಳ ಮಾರಾಟದ ಹೊಣೆ ಹೊತ್ತಿದ್ದ ಬುಕ್ ಮೈ ಶೋ ಕಂಪನಿಯ ಕಳಪೆ ಸೇವೆಯಿಂದಾಗಿ ಕ್ರಿಕೆಟ್ ಅಭಿಮಾನಿಗಳು ಈ ಕಂಪನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಎಲ್ಲಾ ಟಿಕೆಟ್​ಗಳು ಸೋಲ್ಡ್ ಔಟ್

ಅಕ್ಟೋಬರ್ 14 ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಮಾರಾಟವನ್ನು ನಿನ್ನೆ ಅಂದರೆ ಆಗಸ್ಟ್ 29 ರ ಸಂಜೆ 6 ಗಂಟೆಗೆ ಆರಂಭಿಸುವುದಾಗಿ ಬುಕ್ ಮೈ ಶೋ ಆನ್​ಲೈನ್ ವೇದಿಕೆ ನಿರ್ದೇಶನ ನೀಡಿತ್ತು. ಹೀಗಾಗಿ ಈ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಟಿಕೆಟ್ ಖರೀದಿಸಲು ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತ್ತಿದ್ದರು. ಆದರೆ ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪಂದ್ಯದ ಎಲ್ಲಾ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆ. ಆದರೆ ಈ ನಡುವೆ ಟಿಕೆಟ್ ಖರೀದಿಗಾಗಿ ಗಂಟೆಗಟ್ಟಲೆ ಕಾದು ಕುಳಿತರೂ ಟಿಕೆಟ್ ಖರೀದಿಸಲು ಸಾಧ್ಯವಾಗದ ಕಾರಣ ಅಭಿಮಾನಿಗಳು ಬುಕ್ ಮೈ ಶೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಭಾರತಕ್ಕೆ ಸುಲಭ ತುತ್ತಾದ ಪಾಕಿಸ್ತಾನ; ಸೆಮೀಸ್​ಗೆ ಟೀಂ ಇಂಡಿಯಾ! ಟೂರ್ನಿಯಿಂದ ಪಾಕ್ ಔಟ್

ಗಂಟೆಗಟ್ಟಲೆ ಕಾದರೂ ಟಿಕೆಟ್ ಸಿಕ್ಕಿಲ್ಲ

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆನ್​ಲೈನ್ ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸರ್ವರ್ ಕೈಕೊಟ್ಟಿದೆ. ಹೀಗಾಗಿ ಭಾಗಶಃ ಅಭಿಮಾನಿಗಳಿಗೆ ಟಿಕೆಟ್ ಖರೀದಿ ಮಾಡಲು ಸಾಧ್ಯವಾಗಿಲ್ಲ. ಒಂದು ಟಿಕೆಟ್ ಖರೀದಿಗಾಗಿ ಗಂಟೆಗಟ್ಟಲೆ ಆನ್​ಲೈನ್​ನಲ್ಲಿ ಕಾದು ಕುಳಿತರೂ ಕಳಪೆ ಸರ್ವರ್​ನಿಂದಾಗಿ ಟಿಕೆಟ್ ಖರೀದಿ ಸಾಧ್ಯವಾಗಿಲ್ಲ. ಹೀಗಾಗಿ ಬುಕ್ ಮೈ ಶೋ ವಿರುದ್ಧ ಕ್ರಿಕೆಟ್ ಫ್ಯಾನ್ಸ್ ಗರಂ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕೆಲವೇ ಕ್ಷಣಗಳಲ್ಲಿ ವೆಬ್‌ಸೈಟ್ ಕ್ರ್ಯಾಶ್

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳಿಗೆ ಬೇಡಿಕೆ ಗಗನಕ್ಕೇರುವ ನಿರೀಕ್ಷೆಯಿತ್ತು. ಹಾಗೆಯೇ ಟಿಕೆಟ್ ಮಾರಾಟ ಆರಂಭವಾದ ಬಳಿಕ ವೆಬ್‌ಸೈಟ್ ಕ್ರ್ಯಾಶ್ ಆಗುವ ನಿರೀಕ್ಷೆ ಕೂಡ ಇತ್ತು. ಹಾಗಾಗಿ ಎಲ್ಲರೂ ಬೇಗನೇ ಟಿಕೆಟ್‌ ಖರೀದಿಸಲು ಕಾಯುತ್ತಿದ್ದರು. ಆದರೆ ಟಿಕೆಟ್ ಮಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ವೆಬ್‌ಸೈಟ್ ಕ್ರ್ಯಾಶ್ ಆಗಿದೆ. ಟಿಕೆಟ್ ಖರೀದಿಗಾಗಿ ಫ್ಯಾನ್ಸ್ ಕಾದು ಕಾದು ಸುಸ್ತಾದರೂ, ಟಿಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದ್ದವು. ಇದನ್ನು ಗಮನಿಸಿದ ಟಿಕೆಟ್ ಆಕಾಂಕ್ಷಿಗಳು ಇದರಲ್ಲೇನೊ ಗೋಲ್​ಮಾಲ್ ನಡೆದಿದೆ ಎಂದು ಬುಕ್ ಮೈ ಶೋ ವಿರುದ್ಧ ಗಂಭೀರ ಆರೋಪ ಹೊರಿಸುತ್ತಿದ್ದಾರೆ.

ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ನೆಟ್ಟಿಗರು ಇದೊಂದು ದೊಡ್ಡ ‘ಹಗರಣ’ ಎಂದಿದ್ದಾರೆ. ಇನ್ನು ಕೆಲವರು ಇಷ್ಟು ಬೇಗ ಟಿಕೆಟ್ ಹೇಗೆ ಸೋಲ್ಡ್ ಔಟ್ ಆಯ್ತು? ಯಾರಿಗೆ ಟಿಕೆಟ್ ಸಿಕ್ಕಿತು? ಯಾರು ಆ ಅದೃಷ್ಟವಂತರು ಎಂದು ನಾನಾ ಪೋಸ್ಟ್​ಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:59 am, Wed, 30 August 23