ಏಷ್ಯಾಕಪ್ ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ? ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ? ಇಲ್ಲಿದೆ ವಿವರ
Asia Cup 2023 Opening Ceremony Live Streaming: 2023ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಮೊದಲ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲಿದೆ (ಆಯೋಜಕರಿಂದ ಅಧಿಕೃತ ಸಮಯ ಹೊರಬಿದ್ದಿಲ್ಲ. ಆದರೆ ವರದಿ ಪ್ರಕಾರ ಪಂದ್ಯ ಆರಂಭವಾಗುವ 90 ನಿಮಿಷ ಮೊದಲು ಸಮಾರಂಭ ಆರಂಭವಾಗಲಿದೆ). ಭಾರತೀಯ ಕಾಲಮಾನದ ಪ್ರಕಾರ, ಮೊದಲ ಪಂದ್ಯದ ಟಾಸ್ 2.30 ಗಂಟೆಗೆ ನಡೆಯಲ್ಲಿದ್ದು, ಪಂದ್ಯ 3 ಗಂಟೆಯಿಂದ ಪ್ರಾರಂಭವಾಗುತ್ತದೆ.
ಏಷ್ಯಾಕಪ್ (Asia Cup 2023) 16ನೇ ಸೀಸನ್ ಆಗಸ್ಟ್ 30ರಿಂದ ಅಂದರೆ ಇಂದಿನಿಂದ ಆರಂಭವಾಗುತ್ತಿದೆ. ಇದು ಏಕದಿನ ಮಾದರಿಯ 14ನೇ ಆವೃತ್ತಿಯಾಗಿದ್ದು, ಆವೃತ್ತಿಯ ಮೊದಲು ಪಂದ್ಯ ನೇಪಾಳ ಮತ್ತು ಪಾಕಿಸ್ತಾನ (Nepal vs Pakistan) ನಡುವೆ ಮುಲ್ತಾನ್ ಮೈದಾನದಲ್ಲಿ ನಡೆಯಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಫೆವರೇಟ್ ಪಾಕಿಸ್ತಾನವೇ ಆಗಿದ್ದರೂ, ಕ್ರಿಕೆಟ್ ಶಿಶುಗಳನ್ನು ಯಾವ ಹಂತದಲ್ಲೂ ಪಾಕ್ ಕಡೆಗಣಿಸುಂತಿಲ್ಲ. ಇನ್ನು ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Multan International Cricket Stadium) ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. 2018ರ ನಂತರ ಐದು ವರ್ಷಗಳ ಬಳಿಕ ಈ ವರ್ಷ ಏಕದಿನ ಏಷ್ಯಾಕಪ್ ಆಯೋಜಿಸಲಾಗುತ್ತಿರುವುದು ಈ ಟೂರ್ನಿಗೆ ಮತ್ತಷ್ಟು ರಂಗು ತಂದಿದೆ.
ಭಾರತ ಕ್ರಿಕೆಟ್ ತಂಡ ಸೇರಿದಂತೆ ಒಟ್ಟು 6 ತಂಡಗಳು ಏಷ್ಯಾಕಪ್ 2023ರಲ್ಲಿ ಭಾಗವಹಿಸಲಿವೆ. ಈ ಆರು ತಂಡಗಳನ್ನು ತಲಾ ಮೂರು ಗುಂಪುಗಳಲ್ಲಿ ಇರಿಸಲಾಗಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನದ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ ಒಂದೊಂದು ಪಂದ್ಯಗಳನ್ನು ಆಡುತ್ತವೆ. ಬಳಿಕ ಎರಡೂ ಗುಂಪಿನ ಅಗ್ರ 2 ತಂಡಗಳು ಸೂಪರ್ ಫೋರ್‌ಗೆ ಮುನ್ನಡೆಯುತ್ತವೆ. ಬಳಿಕ ಇದರಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಫೈನಲ್ ಆಡಲಿದ್ದು, ಈ ಟೂರ್ನಿಯ ಅಂತಿಮ ಪಂದ್ಯವು ಸೆಪ್ಟೆಂಬರ್ 17, 2023 ರಂದು ನಡೆಯಲಿದೆ.
Witness the Super 11 Asia Cup 2023 curtain-raiser live on 30 August at the Multan Cricket Stadium 🏟️
Enjoy live fireworks and performances by Aima Baig and Nepal’s Trishala Gurung, followed by the opening match between Pakistan and Nepal 🎆✨#AsiaCup2023 pic.twitter.com/NtWbLfoSu1
— Pakistan Cricket (@TheRealPCB) August 29, 2023
Asia Cup 2023: ಬ್ಯಾಟಿಂಗ್ ಕ್ರಮಾಂಕ ಬದಲಿಸ್ತಾರಾ ರೋಹಿತ್? ಅನುಮಾನ ಮೂಡಿಸಿದ ನಾಯಕನ ನಡೆ
ಉದ್ಘಾಟನಾ ಸಮಾರಂಭದ ಪೂರ್ಣ ವಿವರ ಇಲ್ಲಿದೆ
ಏಷ್ಯಾಕಪ್ 2023 ರ ಉದ್ಘಾಟನಾ ಸಮಾರಂಭ ಯಾವಾಗ ನಡೆಯಲಿದೆ?
2023ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಮೊದಲ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲಿದೆ (ಆಯೋಜಕರಿಂದ ಅಧಿಕೃತ ಸಮಯ ಹೊರಬಿದ್ದಿಲ್ಲ. ಆದರೆ ವರದಿ ಪ್ರಕಾರ ಪಂದ್ಯ ಆರಂಭವಾಗುವ 90 ನಿಮಿಷ ಮೊದಲು ಸಮಾರಂಭ ಆರಂಭವಾಗಲಿದೆ). ಭಾರತೀಯ ಕಾಲಮಾನದ ಪ್ರಕಾರ, ಮೊದಲ ಪಂದ್ಯದ ಟಾಸ್ 2.30 ಗಂಟೆಗೆ ನಡೆಯಲ್ಲಿದ್ದು, ಪಂದ್ಯ 3 ಗಂಟೆಯಿಂದ ಪ್ರಾರಂಭವಾಗುತ್ತದೆ.
ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?
ಏಷ್ಯಾಕಪ್ 2023 ರ ಉದ್ಘಾಟನಾ ಸಮಾರಂಭವು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾಹಿತಿ ಪ್ರಕಾರ ಏಷ್ಯಾಕಪ್ ಉದ್ಘಾಟನಾ ಸಮಾರಂಭದಲ್ಲಿ ಎಆರ್ ರೆಹಮಾನ್ ಮತ್ತು ಅತೀಫ್ ಅಸ್ಲಾಂ ಹಾಗೂ ಐಮಾ ಬೇಗ್ ಮತ್ತು ತ್ರಿಶಾಲಾ ಗುರುಂಗ್ ಕೂಡ ಪ್ರದರ್ಶನ ನೀಡಲಿದ್ದಾರೆ.
ಏಷ್ಯಾಕಪ್‌ನ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಏಷ್ಯಾಕಪ್‌ನ ನೇರ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಖರೀದಿಸಿದೆ. ಹೀಗಾಗಿ ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ವಿವಿಧ ಭಾಷೆಗಳಲ್ಲಿ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ OTT ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲಿ ನೀವು ಏಷ್ಯಾಕಪ್ ಉದ್ಘಾಟನಾ ಸಮಾರಂಭ ಮತ್ತು ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ