AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಒಂದರ ಹಿಂದೆ ಒಂದರಂತೆ ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ; ಗೆಲ್ಲಲ್ಲು 250 ರನ್ ಟಾರ್ಗೆಟ್

IND vs SA: ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ಗಳ ಪ್ರದರ್ಶನ ಹೆಚ್ಚು ಕಡಿಮೆ ಉತ್ತಮವಾಗಿತ್ತು. ಆದರೆ ತಂಡದ ಫೀಲ್ಡಿಂಗ್ ಮಾತ್ರ ಬೌಲರ್​ಗಳಿಗೆ ಹೆಚ್ಚು ನೆರವು ನೀಡಲಿಲ್ಲ.

IND vs SA: ಒಂದರ ಹಿಂದೆ ಒಂದರಂತೆ ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ; ಗೆಲ್ಲಲ್ಲು 250 ರನ್ ಟಾರ್ಗೆಟ್
TV9 Web
| Edited By: |

Updated on:Oct 06, 2022 | 7:51 PM

Share

ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಭಾರತದ ‘ಬಿ ತಂಡ’ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಲಕ್ನೋದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ (Shardul Thakur and Kuldeep Yadav) ಅವರ ಅದ್ಭುತ ಬೌಲಿಂಗ್‌ನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 40 ಓವರ್‌ಗಳಲ್ಲಿ 249 ರನ್‌ಗಳಿಗೆ ಸೀಮಿತಗೊಳಿಸಿತು. ಆದರೆ, ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಬೌಲರ್‌ಗಳಿಗೆ ಸಹಾಯ ಮಾಡಲಿಲ್ಲ. ತಂಡದ ಫೀಲ್ಡಿಂಗ್ ಉತ್ತಮವಾಗಿದ್ದರೆ, ಆಫ್ರಿಕಾ ತಂಡವನ್ನು ಇನ್ನೂ ಕಡಿಮೆ ಸ್ಕೋರ್​ಗೆ ಕಟ್ಟಿ ಹಾಕಬಹುದಿತ್ತು.

ಅಕ್ಟೋಬರ್ 6, ಗುರುವಾರದಂದು ಏಕನಾ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ಮೊದಲ ಏಕದಿನ ಪಂದ್ಯವು ನಿಗದಿತ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಬೆಳಗಿನ ಜಾವ ಮಳೆಯಿಂದಾಗಿ ಮೊದಲು, ಪಂದ್ಯವನ್ನು ಅರ್ಧ ಗಂಟೆ ಮುಂದೂಡಲಾಗಿತ್ತು. ನಂತರ ಎಡಬಿಡದೆ ಸುರಿದ ಮಳೆಯಿಂದಾಗಿ ಮತ್ತೆ ಒಂದು ಗಂಟೆ 45 ನಿಮಿಷಗಳ ಕಾಲ ಪಂದ್ಯವನ್ನು ಮುಂದೂಡಲಾಯಿತು. ಈ ಮೂಲಕ 1.30ಕ್ಕೆ ಆರಂಭವಾಗಬೇಕಿದ್ದ ಪಂದ್ಯದ ಮೊದಲ ಎಸೆತವನ್ನು 3.45ಕ್ಕೆ ಎಸೆಯಲು ಸಾಧ್ಯವಾಯಿತು. ಟಾಸ್ ಗೆದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಭಾರತ ತಂಡದ ಪರ ವೇಗದ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ಈ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದರು. ಅದರಲ್ಲೂ ಶಾರ್ದೂಲ್, ಆಫ್ರಿಕಾದ ಯನ್ಮನ್ ಮಲನ್ ಮತ್ತು ನಾಯಕ ತೆಂಬಾ ಬವುಮಾ ವಿಕೆಟ್ಗಳನ್ನು ಪಡೆದು ತಂಡಕ್ಕೆ ಅದ್ಭುತ ಆರಂಭ ನೀಡಿದರು.

ಮತ್ತೊಂದೆಡೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಉತ್ತಮ ಸ್ಪೆಲ್ ಮಾಡಿದರು. ಆರಂಭಿಕರಿಬ್ಬರ ವಿಕೆಟ್ ಬಳಿಕ ಕ್ರೀಸ್​ಗೆ ಬಂದ ಮಾಕ್ರಾಮ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡುವುದರಲ್ಲಿ ಕುಲ್ದೀಪ್ ಯಶಸ್ವಿಯಾದರು.

T20I ಸರಣಿಯಿಂದ ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್, ಈ ಪಂದ್ಯದಲ್ಲೂ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ಅವರು ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ವಿರುದ್ಧ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾದರು. ಈ ಪಂದ್ಯದ ಮೂಲಕ ಬಿಷ್ಣೋಯ್ ಭಾರತದ ಪರ ಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿದ್ದು, ಇವರಲ್ಲದೆ ರುತುರಾಜ್ ಗಾಯಕ್ವಾಡ್ ಕೂಡ ಈ ಪಂದ್ಯದೊಂದಿಗೆ ಏಕದಿನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ 23ನೇ ಓವರ್‌ಗೆ ಕೇವಲ 110 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾವನ್ನು ಅಲ್ಪ ಸ್ಕೋರ್‌ಗೆ ಕಟ್ಟಿಹಾಕುವ ಅವಕಾಶವಿತ್ತು. ಆದರೆ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಜೊತೆಯಾಟವು ಇದಕ್ಕೆ ಅವಕಾಶ ನೀಡಲಿಲ್ಲ. ಇಬ್ಬರೂ ಸೇರಿ 106 ಎಸೆತಗಳಲ್ಲಿ 139 ರನ್‌ಗಳ ಅತ್ಯುತ್ತಮ ಜೊತೆಯಾಟ ನೀಡಿದರು. ಇಬ್ಬರೂ ಸಹ ಅರ್ಧಶತಕಗಳನ್ನು ಬಾರಿಸಿದರು ಮತ್ತು ಕೊನೆಯ 5 ಓವರ್‌ಗಳಲ್ಲಿ 54 ರನ್ ಗಳಿಸಿದರು.

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ಗಳ ಪ್ರದರ್ಶನ ಹೆಚ್ಚು ಕಡಿಮೆ ಉತ್ತಮವಾಗಿತ್ತು. ಆದರೆ ತಂಡದ ಫೀಲ್ಡಿಂಗ್ ಮಾತ್ರ ಬೌಲರ್​ಗಳಿಗೆ ಹೆಚ್ಚು ನೆರವು ನೀಡಲಿಲ್ಲ. ಇನಿಂಗ್ಸ್‌ನ ಆರಂಭದಲ್ಲಿಯೇ ಶುಭಮನ್ ಗಿಲ್ ಅವರು ಮಲಾನ್ ಅವರ ಸುಲಭ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ಕೈಬಿಟ್ಟರು. 38ನೇ ಓವರ್‌ನಲ್ಲಿ, ಸಿರಾಜ್ ಮತ್ತು ಬಿಷ್ಣೋಯ್ ಅವರು ಅವೇಶ್ ಖಾನ್ ಅವರ ಸತತ ಎರಡು ಎಸೆತಗಳಲ್ಲಿ ಕ್ಲಾಸೆನ್ ಮತ್ತು ಮಿಲ್ಲರ್ ಅವರ ಕ್ಯಾಚ್‌ಗಳನ್ನು ಕೈಬಿಟ್ಟರು. ಜೀವದಾನ ಪಡೆದ ಈ ಇಬ್ಬರು ಬಳಿಕ 30 ಕ್ಕೂ ಹೆಚ್ಚು ರನ್ ಗಳಿಸಿದರು. ಇವರಲ್ಲದೆ, ಇಶಾನ್ ಕಿಶನ್ ಮತ್ತು ಗಾಯಕ್ವಾಡ್ ಕೂಡ ಔಟ್‌ಫೀಲ್ಡ್‌ನಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಅಧಿಕ ರನ್ ಬಿಟ್ಟುಕೊಟ್ಟರು.

Published On - 7:47 pm, Thu, 6 October 22

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್