AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಸಂಜು ಏಕಾಂಗಿ ಹೋರಾಟ ವ್ಯರ್ಥ; ಕಳಪೆ ಫೀಲ್ಡಿಂಗಾಗಿ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 9 ರನ್​ಗಳಿಂದ ಸೋಲನುಭವಿಸಿದೆ.

IND vs SA: ಸಂಜು ಏಕಾಂಗಿ ಹೋರಾಟ ವ್ಯರ್ಥ; ಕಳಪೆ ಫೀಲ್ಡಿಂಗಾಗಿ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ
TV9 Web
| Edited By: |

Updated on:Oct 06, 2022 | 10:57 PM

Share

ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa) ನಡುವೆ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 9 ರನ್​ಗಳಿಂದ ಸೋಲನುಭವಿಸಿದೆ. ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗದ ಕಾರಣ ಎರಡೂ ಇನಿಂಗ್ಸ್‌ಗಳಿಂದ ಪಂದ್ಯದ ತಲಾ 10 ಓವರ್‌ಗಳನ್ನು ಕಡಿತಗೊಳಿಸಲಾಯಿತು. ಹೀಗಾಗಿ 40 ಓವರ್‌ಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಆರಂಭಿಕ ವೈಫಲ್ಯದ ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್ ಮತ್ತು ಮಿಲ್ಲರ್ ಅವರ ಬೃಹತ್ ಜೊತೆಯಾಟದಿಂದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಆರಂಭಿಕರ ವೈಫಲ್ಯದ ಜೊತೆಗೆ ರುತುರಾಜ್ ಹಾಗೂ ಇಶಾನ್ ಕಿಶನ್ ನಿದಾನಗತಿಯ ಬ್ಯಾಟಿಂಗ್​, ಟೀಂ ಇಂಡಿಯಾವನ್ನು ಸೋಲಿನ ದವಡೆಗೆ ಸಿಲುಕಿಸಿತು.

ಸಂಜು ಸ್ಯಾಮ್ಸನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ನಿರಾಸೆಯನ್ನು ಬದಿಗಿಟ್ಟ ಸ್ಯಾಮ್ಸನ್ (ಅಜೇಯ 86) ಲಕ್ನೋದಲ್ಲಿ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ, ಕಳಪೆ ಫೀಲ್ಡಿಂಗ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಹರಿಣಗಳು ನೀಡಿದ ಟಾರ್ಗೆಟ್ ತಲುಪಲು ಸಾಧ್ಯವಾಗಲಿಲ್ಲ.

ಧವನ್ ಸೇರಿದಂತೆ ಯುವಾ ಬ್ರಿಗೇಡ್ ಫ್ಲಾಪ್

ದಕ್ಷಿಣ ಆಫ್ರಿಕಾದ ಬಲಿಷ್ಠ ಮತ್ತು ಅನುಭವಿ ಬೌಲಿಂಗ್ ಮುಂದೆ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ನಾಯಕ ಶಿಖರ್ ಧವನ್ ರೂಪದಲ್ಲಿ ಒಬ್ಬ ಅನುಭವಿ ಬ್ಯಾಟ್ಸ್‌ಮನ್ ಮಾತ್ರ ಇದ್ದರು. ಅವರನ್ನು ಹೊರತುಪಡಿಸಿ ಶುಭಮನ್ ಗಿಲ್, ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಅಗ್ರ 4 ರಲ್ಲಿದ್ದರು. ಆದರೆ, ಈ ನಾಲ್ವರಲ್ಲಿ ಯಾರಿಗೂ ಕೂಡ ಒಂದು ಒಳ್ಳೇಯ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಗಿಲ್ ಮತ್ತು ಧವನ್ ಕೇವಲ 6 ಓವರ್‌ಗಳಲ್ಲಿ 8 ರನ್‌ಗಳಿಗೆ ಔಟಾದರು. ಅದೇ ಸಮಯದಲ್ಲಿ, ಇಶಾನ್ ಮತ್ತು ಗಾಯಕ್ವಾಡ್ 40 ರನ್ ಜೊತೆಯಾಟವನ್ನು ಹಂಚಿಕೊಂಡರು, ಆದರೆ ಇದಕ್ಕಾಗಿ 11 ಓವರ್ಗಳಿಗಿಂತ ಹೆಚ್ಚು ಎಸೆತಗಳನ್ನು ಆಡಿದರು.

ಶ್ರೇಯಸ್ ಉತ್ತಮ ಬ್ಯಾಟಿಂಗ್

ಒಂದು ಹಂತಕ್ಕೆ ಭಾರತ 51 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಅನುಭವಿ ಜೋಡಿಯಾದ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಮೈದಾನಕ್ಕಿಳಿದಿದ್ದರು. ಅಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧ ದಾಳಿ ನಡೆಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು 100 ರ ಗಡಿ ದಾಟಿಸಿದರು. ಆದರೆ 118 ರನ್ ಗಳಿಸುವಷ್ಟರಲ್ಲಿ ಅವರ ವಿಕೆಟ್ ಪತನವಾಗುವುದರೊಂದಿಗೆ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಂತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಸ್ಯಾಮ್ಸನ್ ಆಕ್ರಮಣಕಾರಿ ಶೈಲಿಯನ್ನು ಬಿಟ್ಟು ಇನ್ನಿಂಗ್ಸ್ ಅನ್ನು ಕೊನೆಯ ಓವರ್‌ಗೆ ಕೊಂಡೊಯ್ಯಲು ಪ್ರಯತ್ನಿಸಿದರು.

ಸ್ಯಾಮ್ಸನ್-ಶಾರ್ದೂಲ್ ಪ್ರಯತ್ನ ಸಾಕಾಗಲಿಲ್ಲ

ಈ ಪ್ರಯತ್ನದಲ್ಲಿ, ಸ್ಯಾಮ್ಸನ್ ಶಾರ್ದೂಲ್ ಠಾಕೂರ್ ಅವರಿಂದ ಉತ್ತಮ ಬೆಂಬಲವನ್ನು ಪಡೆದರು. ಇಬ್ಬರೂ ಜೊತೆಯಾಗಿ 93 ರನ್ (66 ಎಸೆತ) ಗಳ ಜೊತೆಯಾಟ ನಡೆಸಿದರು. ಆದರೆ 38ನೇ ಓವರ್‌ನಲ್ಲಿ ಎನ್‌ಗಿಡಿ ಬ್ಯಾಕ್ ಟು ಬ್ಯಾಕ್ ಎಸೆತದಲ್ಲಿ ಶಾರ್ದೂಲ್ ಮತ್ತು ಕುಲದೀಪ್ ಯಾದವ್ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಸಂಕಷ್ಟವನ್ನು ಹೆಚ್ಚಿಸಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಭಾರತಕ್ಕೆ 30 ರನ್ ಬೇಕಾಗಿತ್ತು. ಅಂತಿಮ ಓವರ್ ಎದುರಿಸಿದ ಸ್ಯಾಮ್ಸನ್ 3 ಬೌಂಡರಿ ಮತ್ತು 1 ಸಿಕ್ಸರ್ ಗಳಿಸಿದರಾದರೂ ಅದು ಗೆಲುವಿಗೆ ಸಾಕಾಗಲಿಲ್ಲ.

ಶಾರ್ದೂಲ್-ಕುಲ್ದೀಪ್ ಅದ್ಭುತ ಬೌಲಿಂಗ್

ಇದಕ್ಕೂ ಮುನ್ನ ಈ ಪಂದ್ಯ ಮಳೆಯಿಂದಾಗಿ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿದ್ದು, ಪಂದ್ಯ 50 ಓವರ್‌ಗಳ ಬದಲಿಗೆ 40 ಓವರ್ ಆಗಿತ್ತು. ಅನುಕೂಲಕರ ಪರಿಸ್ಥಿತಿಯ ಲಾಭವನ್ನು ಪಡೆಯಲು ಟೀಮ್ ಇಂಡಿಯಾದ ವೇಗದ ಬೌಲರ್‌ಗಳಿಗೆ ಮೊದಲ ಅವಕಾಶ ಸಿಕ್ಕಿತು. ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ಅವರ ಬಿಗಿಯಾದ ಬೌಲಿಂಗ್ ನಂತರ ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಶಾರ್ದೂಲ್ ಯನಮಾನ್ ಮಲನ್ ಮತ್ತು ತೆಂಬಾ ಬವುಮಾ ಅವರ ವಿಕೆಟ್‌ಗಳನ್ನು ಪಡೆದರೆ, ಕುಲ್ದೀಪ್ ಏಡನ್ ಮಾರ್ಕ್ರಾಮ್ ಅವರನ್ನು ಶೂನ್ಯಕ್ಕೆ ವಜಾ ಮಾಡುವಲ್ಲಿ ಯಶಸ್ವಿಯಾದರು. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕ್ವಿಂಟನ್ ಡಿ ಕಾಕ್ ಅವರನ್ನು ಬಲಿಪಶು ಮಾಡಿದರು.

ಮಿಲ್ಲರ್-ಕ್ಲಾಸೆನ್ ಸ್ಫೋಟಕ ಪಾಲುದಾರಿಕೆ

ಆದರೆ, ಇದಾದ ಬಳಿಕ ಭಾರತ ತಂಡಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ. ಇನ್ ಫಾರ್ಮ್ ಡೇವಿಡ್ ಮಿಲ್ಲರ್ (ಔಟಾಗದೆ 75) ಮತ್ತು ಹೆನ್ರಿಚ್ ಕ್ಲಾಸೆನ್ (ಔಟಾಗದೆ 74) ಅತ್ಯುತ್ತಮ ಬ್ಯಾಟಿಂಗ್ ಮಾಡಿ ಶತಕದ ಜೊತೆಯಾಟ ನಡೆಸಿ ತಂಡವನ್ನು 249 ರನ್‌ಗಳಿಗೆ ಕೊಂಡೊಯ್ದರು. ಇವರಿಬ್ಬರ ನಡುವೆ 139 ರನ್‌ಗಳ ಅಜೇಯ ಜೊತೆಯಾಟವಿದ್ದು, ದಕ್ಷಿಣ ಆಫ್ರಿಕಾವನ್ನು ಬಲಿಷ್ಠ ಸ್ಥಿತಿಗೆ ತಂದಿತು.

ಭಾರತದ ಕಳಪೆ ಫೀಲ್ಡಿಂಗ್

ಈ ಪಂದ್ಯದಲ್ಲಿ ಭಾರತ ತಂಡದ ಫೀಲ್ಡಿಂಗ್ ಸಾಕಷ್ಟು ನಿರಾಸೆ ಮೂಡಿಸಿತು. ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 3 ಉತ್ತಮ ಕ್ಯಾಚ್‌ಗಳನ್ನು ಬಿಟ್ಟರೆ, ಕೆಲವರು ಮಿಸ್‌ಫೀಲ್ಡಿಂಗ್‌ನಲ್ಲಿ ಬೌಂಡರಿಗಳನ್ನು ನೀಡಿದರು. 9ನೇ ಓವರ್‌ನಲ್ಲಿ ಶುಭಮನ್ ಗಿಲ್ ಕ್ಯಾಚ್ ಕೈಬಿಟ್ಟರೆ, 38ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ರವಿ ಬಿಷ್ಣೋಯ್ ಹಿಡಿಯುವ ಕ್ಯಾಚ್ ಕೈಚೆಲ್ಲಿದರು.

Published On - 10:48 pm, Thu, 6 October 22

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ