AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌರವ್ ಗಂಗೂಲಿಗೆ ಬಿಗ್ ಶಾಕ್ ನೀಡಿದ ಪಶ್ಚಿಮ ಬಂಗಾಳ ಸರ್ಕಾರ

Sourav Ganguly: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ವಿಐಪಿ ಭದ್ರತೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಅದರ ಭಾಗವಾಗಿ, ಸೌರವ್ ಗಂಗೂಲಿ ಅವರ Z ಕ್ಯಾಟಗರಿ ಭದ್ರತೆಯನ್ನು Y ಕ್ಯಾಟಗರಿಗೆ ಇಳಿಸಲಾಗಿದೆ. ಗಂಗೂಲಿಗೆ ಯಾವುದೇ ನೇರ ಬೆದರಿಕೆ ಇಲ್ಲದಿರುವುದು ಮತ್ತು ಸಕ್ರಿಯ ಅಧಿಕೃತ ಹುದ್ದೆಗಳಿಲ್ಲದಿರುವುದು ಭದ್ರತೆ ಕಡಿತಕ್ಕೆ ಕಾರಣ. ಇದು ಕೇವಲ ಗಂಗೂಲಿಗೆ ಮಾತ್ರವಲ್ಲದೆ ಹಲವು ವಿಐಪಿಗಳಿಗೂ ಅನ್ವಯಿಸುವ ಆಡಳಿತಾತ್ಮಕ ನಿರ್ಧಾರವಾಗಿದೆ.

ಸೌರವ್ ಗಂಗೂಲಿಗೆ ಬಿಗ್ ಶಾಕ್ ನೀಡಿದ ಪಶ್ಚಿಮ ಬಂಗಾಳ ಸರ್ಕಾರ
Sourav Ganguly
ಪೃಥ್ವಿಶಂಕರ
|

Updated on: Jun 03, 2026 | 3:04 PM

Share

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೀನಾಯವಾಗಿ ಸೋಲಿಸಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ (BJP) ಸರ್ಕಾರ ತನ್ನ ಕ್ರಾಂತಿ ಕಾರಿ ನಿರ್ಧಾರಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಗಳನ್ನು ತರಲಾರಂಭಿಸಿದೆ. ಈಗಾಗಲೇ ಆ ರೀತಿಯ ಕಾರ್ಯಗಳು ಶುರುವಾಗಿವೆ. ಇದೀಗ ಮತ್ತೊಂದು ಕೆಲಸಕ್ಕೆ ಕೈಹಾಕಿರುವ ಸರ್ಕಾರ, ವಿಐಪಿಗಳಿಗೆ (VIP) ನೀಡುತ್ತಿದ್ದ ಭದ್ರತೆಗಳಲ್ಲೂ ಬದಲಾವಣೆಗಳನ್ನು ತಂದಿದೆ. ಆ ಪ್ರಕಾರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರಿಗೆ ಇಷ್ಟು ದಿನ ನೀಡುತ್ತಿದ್ದ ‘Z’ ಕ್ಯಾಟಗರಿ ಭದ್ರತೆಯನ್ನು ‘Y’ ಕ್ಯಾಟಗರಿಗೆ ಇಳಿಸಲಾಗಿದೆ.

ಗಂಗೂಲಿಗೆ ಬಿಗ್ ಶಾಕ್

ಸೌರವ್ ಗಂಗೂಲಿಗೆ ದೇಶದಲ್ಲಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದಲ್ಲೂ ಅಪಾರ ಕ್ರೇಜ್ ಇದೆ. ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಬಂಗಾಳ ಸರ್ಕಾರವು 2023 ರಲ್ಲಿ ಗಂಗೂಲಿಗೆ ನೀಡುತ್ತಿದ್ದ ಭದ್ರತೆಯನ್ನು ‘Y’ ಕ್ಯಾಟಗರಿಯಿಂದ ‘Z’ ಕ್ಯಾಟಗರಿಗೆ ಏರಿಸಿತ್ತು. ಇದೀಗ ಬಂಗಾಳದಲ್ಲಿ ನೂತನ ಸರ್ಕಾರ ಬಂದ ಬಳಿಕ ರಾಜ್ಯದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ನಡೆಸಿದ ವಿಐಪಿ ಭದ್ರತೆ ಪರಿಶೀಲನೆಯಲ್ಲಿ ಗಂಗೂಲಿಗೆ ‘Z’ ಕ್ಯಾಟಗರಿಯ ಭದ್ರತೆ ಅಗತ್ಯವಿಲ್ಲ ಎಂಬುದು ತಿಳಿದು ಬಂದಿದೆ. ಗಂಗೂಲಿಗೆ ಯಾವುದೇ ನೇರ ಬೆದರಿಕೆ ಇಲ್ಲದ ಕಾರಣ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

‘Y’ ಕ್ಯಾಟಗರಿ ಭದ್ರತೆ ಹೇಗಿರಲಿದೆ?

ಇಲ್ಲಿಯವರೆಗೆ ‘Z’ ಕ್ಯಾಟಗರಿಯ ಭದ್ರತೆಯಲ್ಲಿದ್ದ ಗಂಗೂಲಿ ಅವರನ್ನು ಸುಮಾರು 8 ರಿಂದ 10 ವಿಶೇಷ ಸಶಸ್ತ್ರ ಪೊಲೀಸರು ನಿರಂತರವಾಗಿ ಕಾವಲು ಕಾಯುತ್ತಿದ್ದರು. ಕೋಲ್ಕತ್ತಾದ ಬಹಾಲಾದಲ್ಲಿರುವ ಅವರ ನಿವಾಸದಲ್ಲಿದ್ದಾಗಲೆಲ್ಲಾ ಅವರನ್ನು ಸಶಸ್ತ್ರ ಪಡೆಗಳು ಗಸ್ತು ತಿರುಗುತ್ತಿದ್ದವು. ಇದಲ್ಲದೆ, ಅವರು ರಾಜ್ಯದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ವಿಶೇಷ ಬೆಂಗಾವಲು ವಾಹನಗಳು ಅವರೊಂದಿಗೆ ಇರುತ್ತಿದ್ದವು. ಇದೀಗ ‘Y’ ಕ್ಯಾಟಗರಿ ಭದ್ರತೆ ಅಡಿಯಲ್ಲಿ, ವಿಶೇಷ ಶಾಖೆಯ ಮೂವರು ಪೊಲೀಸರು ಗಂಗೂಲಿ ಅವರ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಅಲ್ಲದೆ, ಅವರ ನಿವಾಸದಲ್ಲಿ ಇನ್ನೂ ಮೂವರು ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕ್ರಿಕೆಟ್ ಜೊತೆಗೆ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಕ್ಕೂ ಅಂತ್ಯ ಹಾಡಬೇಕು; ಸೌರವ್ ಗಂಗೂಲಿ

ಬಂಗಾಳ ಸರ್ಕಾರ ನೀಡಿದ ಸ್ಪಷ್ಟನೆ ಏನು?

ಈ ಭದ್ರತಾ ಕಡಿತವು ಸೌರವ್ ಗಂಗೂಲಿಗೆ ಮಾತ್ರವಲ್ಲ, ರಾಜ್ಯಾದ ಹಲವು ವಿಐಪಿಗಳಿಗೆ ನೀಡುತ್ತಿದ್ದ ಭದ್ರತೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬಂಗಾಳ ಸರ್ಕಾರದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೊಸ ಸರ್ಕಾರವು ವ್ಯಕ್ತಿಯ ಅಧಿಕೃತ ಸ್ಥಾನಮಾನ, ಪ್ರಸ್ತುತ ಸಾಂವಿಧಾನಿಕ ಸ್ಥಾನಮಾನ ಮತ್ತು ಅವರು ಎದುರಿಸುತ್ತಿರುವ ಬೆದರಿಕೆಯ ಮಟ್ಟವನ್ನು ಆಧರಿಸಿ ಭದ್ರತಾ ವ್ಯಾಪ್ತಿಯನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಗಂಗೂಲಿ ಪ್ರಸ್ತುತ ಯಾವುದೇ ಸಕ್ರಿಯ ಅಧಿಕೃತ ಹುದ್ದೆಗಳನ್ನು ಹೊಂದಿಲ್ಲದ ಕಾರಣ ಭದ್ರತಾ ವ್ಯವಸ್ಥೆಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More