South Africa vs India: ಭಾರತ- ದಕ್ಷಿಣ ಆಫ್ರಿಕಾ ಅಂತಿಮ ಮೂರನೇ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಸಂಪೂರ್ಣ ಮಾಹಿತಿ
IND vs SA 3rd Test: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ ಪಂದ್ಯ ಯಾವಾಗ ಆರಂಭ?, ಯಾವ ಮೈದಾನದಲ್ಲಿ ನಡೆಯಲಿದೆ? ಎಂಬ ಕುರಿತ ಮಾಹಿತಿ ಇಲ್ಲಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs Soutrh Africa) ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯ ನಡೆದಿದ್ದು, ಉಭಯ ತಂಡಗಳು ತಲಾ ಒಂದು ಟೆಸ್ಟ್ ಗೆದ್ದು ಬೀಗಿದೆ. ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 113 ರನ್ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್ಬರ್ಗ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್ಗಳ ಗೆಲುವು ಕಂಡಿತು. ಸದ್ಯ ಮೂರನೇ ಟೆಸ್ಟ್ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ. ಉಭಯ ತಂಡಗಳು ಅಂತಿಮ ನಿರ್ಣಾಯಕ ಕದನ ಬಹುಮುಖ್ಯವಾಗಿದೆ. ಹಾಗಾದ್ರೆ ಮೂರನೇ ಟೆಸ್ಟ್ (IND vs SA 3rd Test) ಪಂದ್ಯ ಯಾವಾಗ ಆರಂಭ?, ಯಾವ ಮೈದಾನದಲ್ಲಿ ನಡೆಯಲಿದೆ? ಎಂಬ ಕುರಿತ ಮಾಹಿತಿ ಇಲ್ಲಿದೆ.
ಯಾವಾಗ ಆರಂಭ?:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 11ರಿಂದ ಆರಂಭವಾಗಲಿದೆ.
ಸ್ಥಳ:
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.
ನೇರ ಪ್ರಸಾರ:
ಭಾರತದಲ್ಲಿ ಈ ಪಂದ್ಯದ ನೇರಪ್ರಸಾರದ ಹಕ್ಕು ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದ್ದು ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಕೂಡ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗಿದೆ.
ಕೇಪ್ ಟೌನ್ನಲ್ಲಿ ಭಾರತ:
3ನೇ ಟೆಸ್ಟ್ ಪಂದ್ಯ ನಡೆಯಲಿರುವ ಕೇಪ್ ಟೌನ್ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ. ಹೌದು, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಕಮ್ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.
ವಿರಾಟ್ ಕೊಹ್ಲಿ ಲಭ್ಯ:
ಕೊನೇ ಟೆಸ್ಟ್ಗೆ ವಿರಾಟ್ ಕೊಹ್ಲಿ ಲಭ್ಯರಿರುತ್ತಾರೆ ಎಂದು ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದ ಬಳಿಕ ತಿಳಿಸಿದ್ದಾರೆ. ಇಂಜುರಿಗೆ ತುತ್ತಾಗಿದ್ದ ಕೊಹ್ಲಿ ಈಗಾಗಲೇ ಅಭ್ಯಾಸ ಶುರು ಮಾಡಿದ್ದಾರಂತೆ. ಈ ಬಗ್ಗೆ ಕೋಚ್ ದ್ರಾವಿಡ್ ಕೂಡ ಸ್ಪಷ್ಟ ಪಡಿಸಿದ್ದಾರೆ.
ಎರಡನೇ ಟೆಸ್ಟ್ ಹೇಗಿತ್ತು?:
ವಾಂಡರರ್ಸ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ಗೆ 118 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 122 ರನ್ ಬಾಕಿ ಇದ್ದರೆ, ಭಾರತಕ್ಕೆ 8 ವಿಕೆಟುಗಳ ಅವಶ್ಯಕತೆಯಿತ್ತು. ವಾನ್ ಡರ್ ಡುಸೆನ್ ಮತ್ತು ಡೀನ್ ಎಲ್ಗರ್ ಜೊತೆಯಾಟ ಸರಾಗವಾಗಿ ಮುಂದುವರಿಯಿತು. ಇಬ್ಬರೂ 3ನೇ ವಿಕೆಟಿಗೆ 82 ರನ್ ಜೊತೆಯಾಟ ಆಡಿದರು. ಡುಸೆನ್ ನಿರ್ಗಮನದ ಬಳಿಕ ಡೀನ್ ಎಲ್ಗರ್ಗೆ ಟೆಂಬ ಬವುಮ ಜೊತೆಯಾದರು. 71ನೇ ಟೆಸ್ಟ್ ಪಂದ್ಯ ಆಡಿದ 34 ವರ್ಷದ ಡೀನ್ ಎಲ್ಗಾರ್ ತಮ್ಮ 14ನೇ ಶತಕದಿಂದ ಸ್ವಲ್ಪದರಲ್ಲಿ ವಂಚಿತರಾದರು. ಎಲ್ಗರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಿಕಾ ತಂಡ 67.4 ಓವರುಗಳಲ್ಲಿ 3 ವಿಕೆಟಿಗೆ 243 ರನ್ ಪೇರಿಸಿ ಜಯಿಸಿತು. ಸೆಂಚುರಿಯನ್ನಲ್ಲಿ ಅನುಭವಿಸಿದ ಸೋಲಿಗೂ ಪ್ರವಾಸಿ ತಂಡದ ಎದುರು ಸೇಡು ತೀರಿಸಿಕೊಳ್ಳುವುದರ ಜತೆಗೆ ಸರಣಿಯಲ್ಲಿ ಕುತೂಹಲ ಕಾಯ್ದುಕೊಂಡಿತು.
PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?