IND vs SA: ದುಬಾರಿ ಬೌಲರ್​ಗೆ ಕೋಕ್, ಉಮ್ರಾನ್​ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI

| Updated By: ಪೃಥ್ವಿಶಂಕರ

Updated on: Jun 16, 2022 | 3:31 PM

IND vs SA: ಟಿ20 ಸರಣಿಯಲ್ಲಿ 3ನೇ ಪಂದ್ಯವು ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಭಾರತ ತಂಡ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಏಕೆಂದರೆ ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಕಳೆದುಕೊಳ್ಳಲ್ಲಿದೆ.

IND vs SA: ದುಬಾರಿ ಬೌಲರ್​ಗೆ ಕೋಕ್, ಉಮ್ರಾನ್​ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI
ರಾಹುಲ್ ದ್ರಾವಿಡ್, ಉಮ್ರಾನ್ ಮಲಿಕ್
Follow us on

ದೆಹಲಿ ಮತ್ತು ಕಟಕ್ ಸೋಲಿನ ನಂತರ ಟೀಂ ಇಂಡಿಯಾ (Team India) ವಿಶಾಖಪಟ್ಟಣದಲ್ಲಿ ಆಫ್ರಿಕನ್ನರ ವಿರುದ್ಧ ಸೇಡು ತೀರಿಸಿಕೊಂಡಿತು. ಟಿ20 ಸರಣಿ (T20 series)ಯಲ್ಲಿ 3ನೇ ಪಂದ್ಯವು ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಭಾರತ ತಂಡ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಏಕೆಂದರೆ ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಕಳೆದುಕೊಳ್ಳಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಗೆಲುವಿಗಾಗಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ವಿಶಾಖಪಟ್ಟಣಂ ಟಿ20 ಪಂದ್ಯವನ್ನು ಪುನರಾವರ್ತಿಸಬೇಕಾಗಿದೆ. ಆದರೆ, ಇಲ್ಲಿ ಪ್ರಶ್ನೆ ಏನೆಂದರೆ, ಯಾವ ಪ್ಲೇಯಿಂಗ್ ಇಲೆವೆನ್ ಜೊತೆ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ? ಭಾರತ ತಂಡದಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ. ಅಂದಹಾಗೆ, ಕಳೆದ ಮೂರು T20 ಪಂದ್ಯಗಳಲ್ಲಿ, ಟೀಮ್ ಇಂಡಿಯಾದಲ್ಲಿ ಇಬ್ಬರು ಆಟಗಾರರು ಕಳಪೆ ಪ್ರದರ್ಶನ ತೋರಿದ್ದಾರೆ. ಅವರ ಹೆಸರು ರಿಷಬ್ ಪಂತ್ ಮತ್ತು ವೇಗದ ಬೌಲರ್ ಅವೇಶ್ ಖಾನ್ (Rishabh Pant and fast bowler Avesh Khan).

ಈಗ ರಿಷಬ್ ಪಂತ್ ತಂಡದ ನಾಯಕ, ಹಾಗಾಗಿ ಅವರನ್ನು ತಂಡದಿಂದ ಹೊರಗಿಡುವುದು ಅಸಾಧ್ಯ. ಆದರೆ ಅವೇಶ್ ಖಾನ್ ಅವರನ್ನು ಖಂಡಿತವಾಗಿ ಬೆಂಚ್​ ಕಾಯಿಸಬಹುದು. ಅವೇಶ್ ಖಾನ್ ಮೊದಲ ಮತ್ತು ಮೂರನೇ ಟಿ20ಯಲ್ಲಿ ಅತ್ಯಂತ ದುಬಾರಿ ಬೌಲರ್ ಎಂದು ಸಾಬೀತುಪಡಿಸಿದ್ದಾರೆ. ಅವೇಶ್ ಖಾನ್ 3 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ, ಈವರೆಗೆ ಸರಣಿಯಲ್ಲಿ 11 ಓವರ್‌ಗಳಲ್ಲಿ 87 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಅವರ ಎಕಾನಮಿ ದರವು ಪ್ರತಿ ಓವರ್‌ಗೆ 8 ರನ್‌ಗಳ ಸಮೀಪದಲ್ಲಿದೆ. ಹಾಗಾದರೆ ಟೀಂ ಇಂಡಿಯಾ ಅವೇಶ್ ಖಾನ್ ಅವರನ್ನು ಹೊರಗೆ ಕೂರಿಸುತ್ತದೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಇದನ್ನೂ ಓದಿ:IND vs IRE: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಹಾರ್ದಿಕ್​ಗೆ ನಾಯಕತ್ವ! ಹೊಸಬರಿಗೆ ಅವಕಾಶ

ಇದನ್ನೂ ಓದಿ
IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ
IND vs IRE: 6 ಎಸೆತಗಳಲ್ಲಿ 6 ಸಿಕ್ಸರ್! ಐಪಿಎಲ್​ನಲ್ಲಿ 413 ರನ್ ಚಚ್ಚಿದ ಬ್ಯಾಟರ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ
IND vs IRE: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಹಾರ್ದಿಕ್​ಗೆ ನಾಯಕತ್ವ! ಹೊಸಬರಿಗೆ ಅವಕಾಶ

ಉಮ್ರಾನ್ ಮಲಿಕ್​ಗೆ ಅವಕಾಶ ಸಿಗುತ್ತಾ?

ಅವೇಶ್ ಖಾನ್ ಅವರ ವಿಶೇಷತೆ ಎಂದರೆ ಅವರ ವೇಗ. ಆದರೆ ಅವರಿಗಿಂತ ವೇಗವಾಗಿ ಬೌಲಿಂಗ್ ಮಾಡುವ ಆಟಗಾರ ಟೀಮ್ ಇಂಡಿಯಾದಲ್ಲಿರುವುದಿಂದ ಅವೇಶ್​ಗೆ ಈ ಪಂದ್ಯದಲ್ಲಿ ಕೋಕ್ ಸಿಗುವ ಸಾಧ್ಯತೆಯಿದೆ. ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮ ಹೆಸರಿನಲ್ಲಿ 22 ವಿಕೆಟ್ ಪಡೆದರು. ಅಲ್ಲದೆ ಅವರು 157 ಕಿ.ಮೀ. ಗಂಟೆಯ ವೇಗದಲ್ಲಿ ಚೆಂಡನ್ನು ಎಸೆದು ದಾಖಲೆ ಬರೆದರು. ನಂತರ ಟೀಂ ಇಂಡಿಯಾದಲ್ಲಿ ಉಮ್ರಾನ್​ಗೆ ಸ್ಥಾನ ಕೂಡ ದಕ್ಕಿತು. ಇದೀಗ ಟೀಂ ಇಂಡಿಯಾ ಈ ವೇಗದ ಬೌಲರ್‌ಗೆ ಪದಾರ್ಪಣೆ ಅವಕಾಶ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಫಾರ್ಮ್ ಮತ್ತು ಫಿಟ್‌ನೆಸ್ ಉಮ್ರಾನ್ ಮಲಿಕ್ ಬಳಿ ಇದೆ. ಹೀಗಾಗಿ ನಾಲ್ಕನೇ ಟಿ20ಯಲ್ಲಿ ಟೀಂ ಇಂಡಿಯಾಗೆ ಉಮ್ರಾನ್ ಪ್ರಬಲ ಅಸ್ತ್ರವಾಗುವ ನಿರೀಕ್ಷೆ ಇದೆ.

ಟೀಮ್ ಇಂಡಿಯಾದ ಸಂಭಾವ್ಯ 11

ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಹಾಲ್.

Published On - 3:28 pm, Thu, 16 June 22