
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಪ್ರಿಕಾವನ್ನು 135 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ, 4 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನ ಕೈವಶ ಮಾಡಿಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 283 ರನ್ ಗಳಿಸಿತು. ಉತ್ತರವಾಗಿ ಇಡೀ ದಕ್ಷಿಣ ಆಫ್ರಿಕಾ ತಂಡ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ರಮಣದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 135 ರನ್‌ಗಳ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಇದರೊಂದಿಗೆ ಟೀಂ ಇಂಡಿಯಾ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ದಕ್ಷಿಣ ಆಫ್ರಿಕಾ 141 ರನ್‌ಗಳಿಗೆ 9ನೇ ವಿಕೆಟ್ ಕಳೆದುಕೊಂಡಿದೆ. ಕೇಶವ್ ಮಹಾರಾಜ್ 8 ಎಸೆತಗಳಲ್ಲಿ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ 131 ರನ್ ಗಳಿಸುವಷ್ಟರಲ್ಲಿ 8ನೇ ವಿಕೆಟ್ ಕಳೆದುಕೊಂಡಿತು. ಇನ್ನು ಕೇವಲ 27 ಎಸೆತಗಳು ಆಡಲು ಉಳಿದಿದ್ದು, ಆಫ್ರಿಕಾಕ್ಕೆ 153 ರನ್ ಅಗತ್ಯವಿದೆ. ಅಂದರೆ ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದಿದೆ.
ದಕ್ಷಿಣ ಆಫ್ರಿಕಾ 96 ರನ್ ಗಳಿಸುವಷ್ಟರಲ್ಲಿ ಆರನೇ ವಿಕೆಟ್ ಕಳೆದುಕೊಂಡಿತು. ಟ್ರಿಸ್ಟಾನ್ ಸ್ಟಬ್ಸ್ ಕೂಡ ಔಟಾಗಿದ್ದಾರೆ. 43 ರನ್ ಗಳಿಸಿದ ಬಳಿಕ ರವಿ ಬಿಷ್ಣೋಯ್‌ಗೆ ಬಲಿಯಾದರು.
96 ರನ್ ಆಗುವಷ್ಟರಲ್ಲಿ ದಕ್ಷಿಣ ಆಫ್ರಿಕಾ ತಂಡದ ಅರ್ಧದಷ್ಟು ಆಟಗಾರರು ಪೆವಿಲಿಯನ್‌ಗೆ ಮರಳಿದ್ದಾರೆ. ಐದನೇ ವಿಕೆಟ್ ರೂಪದಲ್ಲಿ ಡೇವಿಡ್ ಮಿಲ್ಲರ್ 27 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕಾ 11 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸಿದೆ. ಟ್ರಿಸ್ಟಾನ್ ಸ್ಟಬ್ಸ್ 42 ರನ್ ಮತ್ತು ಡೇವಿಡ್ ಮಿಲ್ಲರ್ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಗೆಲುವಿಗೆ ಇನ್ನೂ 206 ರನ್‌ಗಳ ಅಗತ್ಯವಿದೆ.
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ ಪವರ್‌ಪ್ಲೇ ಪೂರ್ಣಗೊಂಡಿದೆ. 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 30 ರನ್ ಗಳಿಸಿದೆ. ಟ್ರಿಸ್ಟಾನ್ ಸ್ಟಬ್ಸ್ 12 ರನ್ ಹಾಗೂ ಡೇವಿಡ್ ಮಿಲ್ಲರ್ 5 ರನ್ ಗಳಿಸಿ ಆಡುತ್ತಿದ್ದಾರೆ.
ಅರ್ಷದೀಪ್ ಸಿಂಗ್ ತಮ್ಮ ಅದ್ಭುತ ಬೌಲಿಂಗ್ ಅನ್ನು ಮುಂದುವರೆಸಿದ್ದು, ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿದರು. ಕ್ಲಾಸೆನ್ ಖಾತೆ ತೆರೆಯದೆ ನಾಲ್ಕನೇ ಬ್ಯಾಟ್ಸ್‌ಮನ್ ಆಗಿ ಪೆವಿಲಿಯನ್‌ಗೆ ಮರಳಿದರು.
ಅರ್ಷದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ನಾಯಕ ಏಡನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿದರು. ಎಂಟು ಎಸೆತಗಳಲ್ಲಿ ಎಂಟು ರನ್ ಗಳಿಸಿದ ನಂತರ ಮಾರ್ಕ್ರಾಮ್ ಔಟಾದರು. ಇದು ಈ ಪಂದ್ಯದಲ್ಲಿ ಅರ್ಷದೀಪ್ ಅವರ ಎರಡನೇ ವಿಕೆಟ್ ಆಗಿದೆ. ದಕ್ಷಿಣ ಆಫ್ರಿಕಾ 10 ರನ್ ಗಳಿಸುವಷ್ಟರಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು.
ಆಫ್ರಿಕಾ ತಂಡ ಕೇವಲ ಒಂದು ರನ್ಗೆ ತನ್ನ 2ನೇ ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ, ರಿಕಲ್ ಟನ್ ಅವರನ್ನು ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಎರಡನೇ ಹೊಡೆತ ನೀಡಿದರು.
ಅರ್ಷದೀಪ್ ಸಿಂಗ್ ಮೊದಲ ಓವರ್‌ನಲ್ಲಿ ರೀಜಾ ಹೆಂಡ್ರಿಕ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಯಶಸ್ಸನ್ನು ನೀಡಿದರು. ದಕ್ಷಿಣ ಆಫ್ರಿಕಾ ಒಂದು ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಹೆಂಡ್ರಿಕ್ಸ್ ಖಾತೆ ತೆರೆಯದೆ ಔಟಾಗಿದ್ದರು.
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಅದ್ಭುತ ಶತಕಗಳ ನೆರವಿನಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 283 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಸಂಜು ಸ್ಯಾಮ್ಸನ್ ನಂತರ ತಿಲಕ್ ವರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ್ದಾರೆ. ತಿಲಕ್ ಸತತ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದರು. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 51 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು, ಆದರೆ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರು. ಆದರೆ, ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಮತ್ತೊಂದು ಶತಕ ಬಾರಿಸಿದರು. ಇದು ಟಿ20 ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸ್ಯಾಮ್ಸನ್ ಅವರ ಮೂರನೇ ಶತಕವಾಗಿದೆ.
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಭಾರತ ಕೇವಲ 15 ಓವರ್‌ಗಳಲ್ಲಿ 200 ರನ್‌ಗಳ ಗಡಿ ದಾಟಿದೆ. ಸ್ಯಾಮ್ಸನ್ ಮತ್ತು ತಿಲಕ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಕಾಡಿದರು. ಈ ಅವಧಿಯಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳನ್ನು ಪೂರೈಸಿದರು.
ಸಂಜು ಸ್ಯಾಮ್ಸನ್ ಬಳಿಕ ತಿಲಕ್ ವರ್ಮಾ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದಕ್ಕೂ ಮುನ್ನ ತಿಲಕ್ ಮೂರನೇ ಟಿ20 ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ್ದರು. ಎರಡನೇ ವಿಕೆಟ್‌ಗೆ ತಿಲಕ್ ಮತ್ತು ಸ್ಯಾಮ್ಸನ್ ನಡುವಿನ ಶತಕದ ಜೊತೆಯಾಟ ಪೂರ್ಣಗೊಂಡಿದೆ.
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಬಿರುಸಿನ ಇನ್ನಿಂಗ್ಸ್‌ನಿಂದ ಭಾರತ 12 ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್‌ಗೆ 162 ರನ್ ಗಳಿಸಿದೆ. ಸ್ಯಾಮ್ಸನ್ ಮತ್ತು ತಿಲಕ್ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಬೆಂಡೆತ್ತಿ ಬೌಂಡರಿಗಳ ಮಳೆಗರೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಸಿಡಿಸಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ಖಾತೆ ತೆರೆಯದೆ ಔಟಾಗಿದ್ದ ಸ್ಯಾಮ್ಸನ್ ಈ ಪಂದ್ಯದಲ್ಲಿ ಲಯ ತೋರುತ್ತಿದ್ದು, 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.
ಮೊದಲ ಹಿನ್ನಡೆಯ ಹೊರತಾಗಿಯೂ, ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭಾರತದ ರನ್ ವೇಗವನ್ನು ನಿಧಾನಗೊಳಿಸಿಲ್ಲ. ಹೀಗಾಗಿ ಒಂಬತ್ತು ಓವರ್‌ಗಳಲ್ಲಿ ತಂಡ 100 ರನ್‌ಗಳನ್ನು ದಾಟಿದೆ.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಸಿಪಾಮ್ಲಾ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಭಾರತಕ್ಕೆ ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಆರಂಭವನ್ನು ನೀಡಿದರು ಮತ್ತು ಮೊದಲ ವಿಕೆಟ್‌ಗೆ 73 ರನ್ ಸೇರಿಸಿದರು.
ಭಾರತದ ಸ್ಕೋರ್ 50 ದಾಟಿದೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಬೌಲರ್‌ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದೇ ಹೊತ್ತಿಗೆ ಟೀಂ ಇಂಡಿಯಾ ಸ್ಕೋರ್ 50ರ ಗಡಿ ದಾಟಿದೆ.
ಮೊದಲ 3 ಓವರ್‌ಗಳಲ್ಲಿ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 14 ರನ್ ಹಾಗೂ ಅಭಿಷೇಕ್ ಶರ್ಮಾ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಮೊದಲ ಓವರ್‌ನಲ್ಲಿ ಟೀಂ ಇಂಡಿಯಾ 4 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಖಾತೆ ತೆರೆದಿದ್ದಾರೆ. ಈ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಕೂಡ ಜೀವದಾನ ಪಡೆದರು.
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣದೀಪ್ ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.
ರಿಯಾನ್ ರೆಕ್ಲೆಸ್ಟೋನ್, ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಮಾರ್ಕೆ ಜೆನ್ಸನ್, ಜೆರಾಲ್ಡ್ ಕೊಯೆಟ್ಜಿ, ಆಂಡಿಲ್ ಸಿಮೆಲೇನ್, ಕೇಶವ್ ಮಹಾರಾಜ್, ಲುಥೋ ಸಿಪಾಮ್ಲಾ.
ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ತಂಡ ಒಟ್ಟು 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ.
Published On - 7:59 pm, Fri, 15 November 24