IPL 2025 mega auction: 574 ಆಟಗಾರರ ಶಾರ್ಟ್​ ಲಿಸ್ಟ್ ಪ್ರಕಟಿಸಿದ ಬಿಸಿಸಿಐ

IPL 2025 mega auction: ಐಪಿಎಲ್ ಮೆಗಾ ಹರಾಜಿಗೆ 574 ಆಟಗಾರರ ಅಂತಿಮ ಪಟ್ಟಿ ಪ್ರಕಟವಾಗಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುವ ಈ ಹರಾಜಿನಲ್ಲಿ 48 ಕ್ಯಾಪ್ಡ್ ಭಾರತೀಯರು, 318 ಅನ್‌ಕ್ಯಾಪ್ಡ್ ಭಾರತೀಯರು ಮತ್ತು 208 ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಈ ಹರಾಜಿನಲ್ಲಿ ಒಟ್ಟು 204 ಸ್ಥಾನಗಳನ್ನು ಭರ್ತಿ ಮಾಡಲಾಗುವುದು.

IPL 2025 mega auction: 574 ಆಟಗಾರರ ಶಾರ್ಟ್​ ಲಿಸ್ಟ್ ಪ್ರಕಟಿಸಿದ ಬಿಸಿಸಿಐ
ಐಪಿಎಲ್ ಮೆಗಾ ಹರಾಜು
Follow us
ಪೃಥ್ವಿಶಂಕರ
|

Updated on:Nov 15, 2024 | 9:00 PM

ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 24 ಮತ್ತು ನವೆಂಬರ್ 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿಯ ಮೆಗಾ ಹರಾಜು ನಡೆಯಲಿದೆ. ಕೆಲವು ದಿನಗಳ ಹಿಂದೆ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಆ ಬಳಿಕ ಬರೋಬ್ಬರಿ 1574 ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹರಾಜಿಗೆ ನೋಂದಣಿಯಾಗಿರುವ ಆಟಗಾರರ ಶಾರ್ಟ್​ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೆ ಒಟ್ಟು 574 ಆಟಗಾರರ ಅಂತಿಮ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ. ಇದರಲ್ಲಿ 48 ಕ್ಯಾಪ್ಡ್ ಭಾರತೀಯ ಆಟಗಾರರು ಸೇರಿದ್ದರೆ, 318 ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಸೇರಿದ್ದಾರೆ.

ಹರಾಜಿನಲ್ಲಿ 574 ಆಟಗಾರರು

ಉಳಿದಂತೆ 208 ವಿದೇಶಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ 12 ವಿದೇಶಿ ಅನ್‌ಕ್ಯಾಪ್ ಆಟಗಾರರು ಸೇರಿದ್ದಾರೆ. ವಾಸ್ತವವಾಗಿ ಐಪಿಎಲ್ ಮೆಗಾ ಹರಾಜಿಗೆ ಈ ಮೊದಲು 193 ವಿದೇಶಿ ಅನ್‌ಕ್ಯಾಪ್ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಕೇವಲ 12 ವಿದೇಶಿ ಅನ್‌ಕ್ಯಾಪ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಮಿತ್ರ ರಾಷ್ಟ್ರಗಳ 3 ಆಟಗಾರರು ಸೇರಿದ್ದಾರೆ. ಈ ಮೂಲಕ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 574 ಆಟಗಾರರ ಹೆಸರು ಬರಲಿದ್ದು, ಇದರಲ್ಲಿ ಖಾಲಿ ಇರುವ 204 ಸ್ಲಾಟ್​ಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ.

2 ದಿನಗಳ ಕಾಲ ಮೆಗಾ ಹರಾಜು

ಐಪಿಎಲ್ ಮೆಗಾ ಹರಾಜು ಎರಡು ದಿನಗಳ ಕಾಲ ಅಂದರೆ, ನವೆಂಬರ್ 23 ರ ಶನಿವಾರ ಮತ್ತು ನವೆಂಬರ್ 24 ರ ಭಾನುವಾರ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ಹರಾಜು ಆರಂಭವಾಗಲಿದೆ. ಇನ್ನು ಈ ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಹೆಸರುಗಳು ಸೇರಿವೆ. ಇವರುಗಳ ಮೂಲ ಬೆಲೆ 2 ಕೋಟಿ ರೂ. ಆಗಿದೆ. ಹಾಗೆಯೇ ಮಾರ್ಕ್ಯೂ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದೇಶಿ ಆಟಗಾರರಲ್ಲಿ ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಮಿಚೆಲ್ ಸ್ಟಾರ್ಕ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋಸ್ ಬಟ್ಲರ್ ಹೆಸರು ಸೇರಿದ್ದು, ಮಿಲ್ಲರ್ ಮೂಲ ಬೆಲೆ 1.50 ಕೋಟಿ ರೂ. ಆಗಿದೆ.

ಈ ಬಾರಿ ಎರಡು ಸೆಟ್‌ಗಳಲ್ಲಿ ಮಾರ್ಕ್ಯೂ ಆಟಗಾರರ ಹೆಸರು ಹರಾಜಿಗೆ ಬರಲಿದ್ದು, ಮೊದಲ ಸೆಟ್‌ನಲ್ಲಿ ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಮತ್ತು ಮಿಚೆಲ್ ಸ್ಟಾರ್ಕ್ ಇದ್ದರೆ, ಎರಡನೇ ಸೆಟ್‌ನಲ್ಲಿ ಯುಜ್ವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇದ್ದಾರೆ. ಮೇಲೆ ಹೇಳಿದಂತೆ ಈ 12 ಆಟಗಾರರ ಪೈಕಿ ಮಿಲ್ಲರ್ ಅವರ ಮೀಸಲು ಬೆಲೆ 1.50 ಕೋಟಿ ರೂ.ಗಳಾಗಿದ್ದರೆ ಇತರ ಆಟಗಾರರ ಮೂಲ ಬೆಲೆ 2 ಕೋಟಿ ರೂ. ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Fri, 15 November 24

ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ