IND vs SL: ಹೀನಾಯ ಸೋಲಿನ ಬಳಿಕ ಮೈದಾನದಲ್ಲೇ ಪರಸ್ಪರ ಜಗಳಕ್ಕಿಳಿದ ಲಂಕಾ ತಂಡದ ಕೋಚ್ ಮತ್ತು ನಾಯಕ; ವಿಡಿಯೋ
IND vs SL: ದಾಸುನ್ ಶಾನಕಾ ಮತ್ತು ಮಿಕ್ಕಿ ಆರ್ಥರ್ ಅವರು ಯಾವುದೋ ವಿಷಯದ ಬಗ್ಗೆ ತೀವ್ರವಾಗಿ ವಾದಿಸುತ್ತಿದ್ದಾರೆ. ಇದರ ನಂತರ, ಮಿಕ್ಕಿ ಆರ್ಥರ್ ಒಂದು ಸ್ಮೈಲ್ನೊಂದಿಗೆ ಮೈದಾನದಿಂದ ಹೊರಗೆ ಹೋಗುತ್ತಿರುವುದು ಕಂಡುಬರುತ್ತದೆ.
ಶಿಖರ್ ಧವನ್ ಅವರ ನೇತೃತ್ವದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್‌ಗಳಿಂದ ಜಯ ಸಾಧಿಸಿದರೆ, ಮಂಗಳವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಜಯಗಳಿಸಿತು. ಸೂರ್ಯಕುಮಾರ್ ಯಾದವ್ ಮತ್ತು ನಂತರ ದೀಪಕ್ ಚಹರ್ ಅವರ ಅರ್ಧಶತಕಗಳ ಸಹಾಯದಿಂದ ತಂಡಕ್ಕೆ ಈ ಗೆಲುವು ಸಿಕ್ಕಿತು. ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಹೆಚ್ಚಿನ ಮೇಲುಗೈ ಸಾಧಿಸಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಿರ್ಣಾಯಕ ಸಂದರ್ಭಗಳಲ್ಲಿ ಮಾಡಿದ ತಪ್ಪುಗಳಿಂದಾಗಿ, ಆತಿಥೇಯರು ಸೋಲನ್ನು ಅನುಭವಿಸಿದರು. ಈ ಸಮಯದಲ್ಲಿ, ಶ್ರೀಲಂಕಾದ ತಂಡದ ತರಬೇತುದಾರ ಮಿಕ್ಕಿ ಆರ್ಥರ್ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತು ಸಾಕಷ್ಟು ಅಸಮಾಧಾನಗೊಂಡಂತೆ ಕಾಣುತ್ತಿದ್ದರು. ಪಂದ್ಯ ಮುಗಿದ ನಂತರ, ಮೈದಾನದಲ್ಲಿಯೇ ಶ್ರೀಲಂಕಾದ ನಾಯಕ ದಸುನ್ ಶಾನಕಾ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಈಗ ಸಖತ್ ಸುದ್ದಿಯಾಗುತ್ತಿದೆ.
ವಾಸ್ತವವಾಗಿ, ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ನಂತರ, ಶ್ರೀಲಂಕಾದ ಮಾಜಿ ದಂತಕಥೆ ರಸ್ಸೆಲ್ ಅರ್ನಾಲ್ಡ್ ಕೂಡ ಮಿಕ್ಕಿ ಆರ್ಥರ್ ಅವರ ಈ ನಡವಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೋಚ್ ಮತ್ತು ಕ್ಯಾಪ್ಟನ್ ನಡುವಿನ ಸಂಭಾಷಣೆ ಮೈದಾನದಲ್ಲಿರಬಾರದು ಎಂದಿದ್ದಾರೆ. ಈ ವೀಡಿಯೊದಲ್ಲಿ ದಾಸುನ್ ಶಾನಕಾ ಮತ್ತು ಮಿಕ್ಕಿ ಆರ್ಥರ್ ಅವರು ಯಾವುದೋ ವಿಷಯದ ಬಗ್ಗೆ ತೀವ್ರವಾಗಿ ವಾದಿಸುತ್ತಿದ್ದಾರೆ. ಇದರ ನಂತರ, ಮಿಕ್ಕಿ ಆರ್ಥರ್ ಒಂದು ಸ್ಮೈಲ್ನೊಂದಿಗೆ ಮೈದಾನದಿಂದ ಹೊರಗೆ ಹೋಗುತ್ತಿರುವುದು ಕಂಡುಬರುತ್ತದೆ.
— cric fun (@cric12222) July 20, 2021
ಚಹರ್ ಮತ್ತು ಸೂರ್ಯ ಟೀಮ್ ಇಂಡಿಯಾದ ಗೆಲುವಿನ ನಾಯಕರು ಈ ಪಂದ್ಯದಲ್ಲಿ ಶ್ರೀಲಂಕಾದ ನಾಯಕ ದಾಸುನ್ ಶಾನಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. 50 ಓವರ್‌ಗಳ ಪಂದ್ಯದಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ತಂಡ 275 ರನ್ ಗಳಿಸಿತು. ಐದು ಎಸೆತಗಳು ಬಾಕಿ ಇರುವಾಗ ಭಾರತ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು ಈ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದರೆ, ಒಂದು ಹಂತದಲ್ಲಿ ಟೀಂ ಇಂಡಿಯಾದ ಏಳು ವಿಕೆಟ್‌ಗಳು 193 ರನ್‌ಗಳಿಗೆ ಕುಸಿದಿದ್ದವು. ಇಲ್ಲಿಂದ ತಂಡವು ಸೋಲಿನತ್ತ ಸಾಗುತ್ತಿರುವಂತೆ ಕಾಣುತ್ತಿತ್ತು. ಆದರೆ ಇದರ ನಂತರ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ ನಡುವೆ ಎಂಟನೇ ವಿಕೆಟ್‌ಗೆ 84 ರನ್‌ಗಳ ಮುರಿಯದ ಪಾಲುದಾರಿಕೆ ಏರ್ಪಟ್ಟಿತು. ಇದರಲ್ಲಿ ಭುವನೇಶ್ವರ್ ಕುಮಾರ್ ಅಜೇಯ 19 ರನ್ ಗಳಿಸಿದರು. ಅದೇ ಸಮಯದಲ್ಲಿ, ಚಹರ್ ಅವರ ಬ್ಯಾಟ್ನಿಂದ 82 ಎಸೆತಗಳಲ್ಲಿ 69 ರನ್ಗಳು ಬಂದವು. ಇದರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಇದು ಚಹರ್ ಅವರ ಐದನೇ ಏಕದಿನ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಬೌಲಿಂಗ್ನಲ್ಲೂ ಚಹರ್ ಅದ್ಭುತ ಪ್ರದರ್ಶನ ನೀಡಿ ಎಂಟು ಓವರ್‌ಗಳ ಬೌಲಿಂಗ್‌ನಲ್ಲಿ 53 ರನ್ ನೀಡಿ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:India vs Sri lanka: ದೀಪಕ್ ಚಹರ್ ಆಟಕ್ಕೆ ಮಂಡಿಯೂರಿದ ಶ್ರೀಲಂಕಾ; ಟೀಂ ಇಂಡಿಯಾಗೆ ಸರಣಿ