ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ದಾಖಲೆಯ ಅರ್ಧಶತಕ ಗಳಿಸಿದರು. ಪ್ರತಿ ಬಾರಿಯಂತೆ ಇಂದೂ ಕೂಡ ಪಂತ್ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದರ ಪರಿಣಾಮ ಅವರು ಮಾಜಿ ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ (Kapil Dev) ಅವರ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಭಾರತದ (Indian Cricket Team) ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ತಮ್ಮ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಇನ್ನಿಂಗ್ಸ್ ಅನ್ನು ವಹಿಸಿಕೊಂಡರು. ಎರಡನೇ ದಿನ ಶ್ರೀಲಂಕಾವನ್ನು 109 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ವಿಹಾರಿ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ಬ್ಯಾಟಿಂಗ್‌ಗೆ ಇಳಿದ ಪಂತ್ ಶ್ರೀಲಂಕಾ ಬೌಲರ್‌ಗಳನ್ನು ಹೀನಾಯವಾಗಿ ಥಳಿಸಿದರು. ಅಬ್ಬರದ ಅರ್ಧಶತಕ ಸಿಡಿಸಿದ ಪಂತ್ ಕ್ಯಾಚಿತ್ತು ಔಟಾದರು. ಆದರೆ ಔಟ್ ಆಗುವ ಮೊದಲು, ಅವರು ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡಿದರು.
ಕಪಿಲ್ ದೇವ್ ದಾಖಲೆ ಮುರಿದ ಪಂತ್
42ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂತ್ ಅರ್ಧಶತಕವನ್ನು ಪೂರ್ಣಗೊಳಿಸಿದರು, ಇದಕ್ಕಾಗಿ ಅವರು ಕೇವಲ 28 ಎಸೆತಗಳನ್ನು ತೆಗೆದುಕೊಂಡರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು. ಭಾರತ ತಂಡದ ಮಾಜಿ ನಾಯಕ ಕಪಿಲ್ 1982ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇವರ ಬಳಿಕ ಶಾರ್ದೂಲ್ ಠಾಕೂರ್ ಮೂರನೇ ಸ್ಥಾನದಲ್ಲಿದ್ದಾರೆ. ಠಾಕೂರ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಪಂತ್ ಆರಂಭದಿಂದಲೂ ಆಕ್ರಮಣಕಾರಿ ಮನೋಭಾವವನ್ನು ಉಳಿಸಿಕೊಂಡರು. ಅವರು 31 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ವೇಳೆ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಅವರ ಬ್ಯಾಟ್‌ನಿಂದ ಹೊರಬಂದವು. ಅಂದರೆ ಕೇವಲ ಬೌಂಡರಿಯಿಂದ 40 ರನ್ ಗಳಿಸಿದರು. ಪಂತ್ ಅವರ ಸ್ಟ್ರೈಕ್ ರೇಟ್ 161.29 ಆಗಿತ್ತು.
ಊಟದ ಹೊತ್ತಿಗೆ ಭಾರತದ ಮುನ್ನಡೆ 342 ತಲುಪಿದೆ
ಶ್ರೀಲಂಕಾ ವಿರುದ್ಧದ ಎರಡನೇ ಹಗಲು-ರಾತ್ರಿ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನವಾದ ಭಾನುವಾರ ರಾತ್ರಿ ಊಟದ ತನಕ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 199 ರನ್ ಗಳಿಸಿದೆ. ಭಾರತದ ಒಟ್ಟು ಮುನ್ನಡೆ 342 ರನ್ ಆಗಿದೆ. ರಾತ್ರಿ ಊಟದ ವೇಳೆಗೆ ಶ್ರೇಯಸ್ ಅಯ್ಯರ್ 18 ರನ್ ಗಳಿಸಿದ್ದರೆ, ರವೀಂದ್ರ ಜಡೇಜಾ 10 ರನ್ ಗಳಿಸಿದ್ದರು. ರಿಷಬ್ ಪಂತ್ 50, ನಾಯಕ ರೋಹಿತ್ ಶರ್ಮಾ 46, ಹನುಮ ವಿಹಾರಿ 35 ರನ್ ಗಳಿಸಿದರು. ಶ್ರೀಲಂಕಾ ಪರ ಪ್ರವೀಣ್ ಜಯವಿಕ್ರಮ್ ಎರಡು ವಿಕೆಟ್ ಪಡೆದರು. ಲಸಿತ್ ಅಂಬುಲ್ದೇನಿಯಾ ಮತ್ತು ಧನಂಜಯ್ ಡಿ ಸಿಲ್ವಾ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ICC Women’s World Cup: ಭಾರತದ ಎದುರು ಭಾರೀ ಅಂತರದಿಂದ ಸೋತ ವಿಂಡೀಸ್ಗೆ ದಂಡದ ಬರೆ ಎಳೆದ ಐಸಿಸಿ..!