IND vs WI 5th T20I: ಇಂದು ಅಂತಿಮ ಟಿ20 ಕದನ: ಭಾರತ ತಂಡದಲ್ಲಿ ಆಗಲಿದೆ ಮಹತ್ವದ ಬದಲಾವಣೆ?
India Playing XI vs WI, 5th T20I: ಇದೀಗ ಒಂದು ದಿನ ಕೂಡ ಬಿಡುವಿಲ್ಲದೆ ಅಂತಿಮ ಪಂದ್ಯಕ್ಕೆ ಸಜ್ಜಾಗುತ್ತಿದೆ. ಭಾರತಕ್ಕೆ ಇದೊಂದು ಔಪಚಾರಿಕ ಪಂದ್ಯವಾದರೆ, ಇತ್ತ ವೆಸ್ಟ್ ಇಂಡೀಸ್ ಕನಿಷ್ಠ ಕೊನೆಯ ಕದನದಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಯೋಜನೆಯಲ್ಲಿದೆ.

ಏಕದಿನ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನೂ ವಶಪಡಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡ (India vs West Indies) ಇದೀಗ ಅಂತಿಮ ಟಿ20 ಕದನಕ್ಕೆ ಸಜ್ಜಾಗುತ್ತಿದೆ. ಇಂದು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ಐದನೇ ಟಿ20 ಪಂದ್ಯ ನಡಯಲಿದೆ. ನಿನ್ನೆಯಷ್ಟೆ ಇದೇ ಕ್ರೀಡಾಂಗಣದಲ್ಲಿ ನಾಲ್ಕನೇ ಪಂದ್ಯ ನಡೆದಿತ್ತು. ಇಲ್ಲಿ ಟೀಮ್ ಇಂಡಿಯಾ (Team India) 59 ರನ್ಗಳ ಅಮೋಘ ಗೆಲುವು ಕಂಡು 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದೀಗ ಒಂದು ದಿನ ಕೂಡ ಬಿಡುವಿಲ್ಲದೆ ಅಂತಿಮ ಪಂದ್ಯಕ್ಕೆ ಸಜ್ಜಾಗುತ್ತಿದೆ. ಭಾರತಕ್ಕೆ ಇದೊಂದು ಔಪಚಾರಿಕ ಪಂದ್ಯವಾದರೆ, ಇತ್ತ ವೆಸ್ಟ್ ಇಂಡೀಸ್ ಕನಿಷ್ಠ ಕೊನೆಯ ಕದನದಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಯೋಜನೆಯಲ್ಲಿದೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಕೆಲ ಆಟಗಾರರು ವಿಶ್ರಾಂತಿ ಮೊರೆ ಹೋದರೆ ಬೆಂಚ್ ಕಾದಿದ್ದ ಪ್ಲೇಯರ್ಸ್ ಕಣಕ್ಕಿಳಿಯುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಇಂದಿನ ಪಂದ್ಯದಿಂದ ಹೊರಗುಳಿದರೆ ಅಚ್ಚರಿ ಪಡಬೇಕಿಲ್ಲ. ರಿಷಭ್ ಪಂತ್ ನಾಯಕ ಸ್ಥಾನ ಪಡೆದುಕೊಳ್ಳಬಹುದು. ರೋಹಿತ್ ಜಾಗದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ಗೆ ಕೂಡ ವಿಶ್ರಾಂತಿ ನೀಡಬಹುದು. ಜಡೇಜಾ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ ಇಲೆವೆನ್ಗೆ ಕಮ್ಬ್ಯಾಕ್ ಮಾಡಬಹುದು.
ಐದನೇ ಟಿ20 ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ:
ಭಾರತ vs ವೆಸ್ಟ್ ಇಂಡೀಸ್ ಐದನೇ T20 ಪಂದ್ಯ ಯಾವಾಗ ನಡೆಯಲಿದೆ?
ಭಾರತ vs ವೆಸ್ಟ್ ಇಂಡೀಸ್ ನಡುವಿನ ಐದನೇ T20 ಪಂದ್ಯ ಇಂದು ಭಾನುವಾರ (ಆಗಸ್ಟ್ 7) ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ 5 ನೇ T20 ಪಂದ್ಯ ಎಲ್ಲಿ ನಡೆಯಲಿದೆ?
ಭಾರತ vs ವೆಸ್ಟ್ ಇಂಡೀಸ್ 5 ನೇ T20I ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ 5 ನೇ T20 ಪಂದ್ಯ ಯಾವಾಗ ಆರಂಭವಾಗುತ್ತದೆ?
ಭಾರತ vs ವೆಸ್ಟ್ ಇಂಡೀಸ್ 5 ನೇ T20 ಪಂದ್ಯ IST ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ 7:30ಕ್ಕೆ ಟಾಸ್ ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ 5 ನೇ T20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಭಾರತ vs ವೆಸ್ಟ್ ಇಂಡೀಸ್ ಸರಣಿಯ ಪ್ರಸಾರ ಹಕ್ಕುಗಳನ್ನು ಫ್ಯಾನ್‌ಕೋಡ್ ಖರೀದಿಸಿದೆ. ಪರಿಣಾಮವಾಗಿ, ನಾಲ್ಕನೇ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ವೆಬ್‌ಸೈಟ್ ಮತ್ತು ಫ್ಯಾನ್‌ಕೋಡ್ ಎಂಬ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಆದಾಗ್ಯೂ, ಭಾರತ vs ವೆಸ್ಟ್ ಇಂಡೀಸ್ ಪಂದ್ಯವನ್ನು ಫ್ಯಾನ್‌ಕೋಡ್‌ನಲ್ಲಿ ವೀಕ್ಷಿಸಲು, ವೀಕ್ಷಕರು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಭಾರತ vs ವೆಸ್ಟ್ ಇಂಡೀಸ್ ಪಂದ್ಯವನ್ನು ಟಿವಿಯಲ್ಲಿ ಡಿಡಿ ಸ್ಪೋರ್ಟ್ಸ್ 1.0 ನಲ್ಲಿ ಲೈವ್ ವೀಕ್ಷಿಸಬಹುದು.
ಭಾರತ ಸಂಭಾವ್ಯ XI: ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್.




