WI vs IND: ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಬೌಲರ್ ಔಟ್..!
WI vs IND: ಹರ್ಷಲ್ ಪಟೇಲ್ ಅವರ ಪಕ್ಕೆಲುಬಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಎರಡೂ ಟಿ20 ಪಂದ್ಯಗಳಿಂದ ಹರ್ಷಲ್ ಹೊರಗುಳಿಯಲಿದ್ದಾರೆ ಎಂದು ಹೇಳಿಕೊಂಡಿದೆ.
ಏಷ್ಯಾ ಕಪ್ 2022 (Asia Cup 2022) ಪ್ರಾರಂಭವಾಗಲು ಕೇವಲ 3 ವಾರಗಳು ಉಳಿದಿವೆ. ಆದರೆ ಈ ಕ್ರೀಡಾಕೂಟಕ್ಕೆ ಭಾರತೀಯ ಕ್ರಿಕೆಟ್ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ತಂಡದ ಆಯ್ಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಶ್ನೆಗಳಿದ್ದು, ಕೆಲವರು ಆಟಗಾರರ ಫಿಟ್ನೆಸ್ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಮಧ್ಯಮ ವೇಗಿ ಹರ್ಷಲ್ ಪಟೇಲ್ (Harshal Patel) ಗಾಯಗೊಂಡಿರುವುದು ಹೊಸ ತಲೆನೋವು ತಂದಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡದೊಂದಿಗೆ ಇದ್ದ ಹರ್ಷಲ್ ಈಗ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಶನಿವಾರ, ಆಗಸ್ಟ್ 6 ರಂದು ಫ್ಲೋರಿಡಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ T20 ಪಂದ್ಯದ ಪ್ರಾರಂಭದೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹರ್ಷಸ್ ಪಟೇಲ್ ಅವರ ಗಾಯದ ಬಗ್ಗೆ ಹೊಸ ನವೀಕರಣವನ್ನು ಬಿಡುಗಡೆ ಮಾಡಿದೆ. ಅವರು ಪಕ್ಕೆಲುಬಿನ ಗಾಯದಿಂದ ತೊಂದರೆಗೀಡಾಗಿದ್ದರು, ಇದರಿಂದಾಗಿ ಅವರು ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ ಎಂದು ಮಂಡಳಿಯು ಎರಡನೇ ಪಂದ್ಯದ ಸಮಯದಲ್ಲಿಯೇ ತಿಳಿಸಿತ್ತು.
? Team Update ?
3⃣ changes for #TeamIndia as @IamSanjuSamson, @akshar2026 & @bishnoi0056 are named in the team. #WIvIND
Follow the match ▶️ https://t.co/DNIFgqfRJ5
A look at our Playing XI ? pic.twitter.com/BWPmuyZNf9
— BCCI (@BCCI) August 6, 2022
ಇದೀಗ ಬಿಸಿಸಿಐ ಹರ್ಷಲ್ ಪಟೇಲ್ ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಹೇಳಿದೆ. ಬಿಸಿಸಿಐ ತನ್ನ ಹೇಳಿಕೆಯಲ್ಲಿ, “ಹರ್ಷಲ್ ಪಟೇಲ್ ಅವರ ಪಕ್ಕೆಲುಬಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಎರಡೂ ಟಿ20 ಪಂದ್ಯಗಳಿಂದ ಹರ್ಷಲ್ ಹೊರಗುಳಿಯಲಿದ್ದಾರೆ ಎಂದು ಹೇಳಿಕೊಂಡಿದೆ.
Published On - 9:35 pm, Sat, 6 August 22