CWG 2022: ಆಂಗ್ಲರ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆ ಅರ್ಧಶತಕ ಸಿಡಿಸಿದ ಸ್ಮೃತಿ ಮಂಧಾನ..!

CWG 2022: ಸ್ಮೃತಿ ಅವರ ಅಂತಹ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 7 ಓವರ್‌ಗಳಲ್ಲಿ 73 ರನ್ ಗಳಿಸಿತು. ಜೊತೆಗೆ ಈ ಎಡಗೈ ಬ್ಯಾಟರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಗದ ಅರ್ಧಶತಕ ಬಾರಿಸಿ ದಾಖಲೆಯನ್ನು ಸಹ ಮಾಡಿದರು.

CWG 2022: ಆಂಗ್ಲರ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆ ಅರ್ಧಶತಕ ಸಿಡಿಸಿದ ಸ್ಮೃತಿ ಮಂಧಾನ..!
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮಂಧಾನ ಅವರ ಬ್ಯಾಟ್​ನಿಂದ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ತಮ್ಮ ಅಬ್ಬರ ಮುಂದುವರೆಸಿರುವ ಮಂಧಾನ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸಹ ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಆಡಿದ ಸ್ಮೃತಿ ಎರಡನೇ ಏಕದಿನ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ನೀಡಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಬರೆದುಕೊಂಡಿದ್ದಾರೆ.
Follow us
TV9 Web
| Updated By: ಪೃಥ್ವಿಶಂಕರ

Updated on:Aug 06, 2022 | 6:10 PM

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಮೊದಲ ಬಾರಿಗೆ ಆಡುತ್ತಿರುವ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡವು ಸತತವಾಗಿ ಪ್ರಬಲ ಪ್ರದರ್ಶನ ನೀಡುತ್ತಿದೆ. ತಂಡದ ಈ ಉತ್ತಮ ಪ್ರದರ್ಶನಕ್ಕೆ ಬಹುಪಾಲು ಪ್ರತಿ ಪಂದ್ಯದಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ದೊಡ್ಡ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರಿಂದ ಇಂತಹ ಪ್ರದರ್ಶನ ನಿರೀಕ್ಷಿಸಲಾಗಿದ್ದು, ಸ್ಮೃತಿ ನಿರಾಸೆ ಮೂಡಿಸಲಿಲ್ಲ. ಭಾರತದ ದಿಗ್ಗಜ ಬ್ಯಾಟರ್ ಬಿರುಸಿನ ಅರ್ಧಶತಕವನ್ನು ಗಳಿಸಿದ್ದಲ್ಲದೆ, ಬಲವಾದ ದಾಖಲೆಯನ್ನೂ ಮಾಡಿದರು.

ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದ 9ನೇ ದಿನವಾದ ಶನಿವಾರ ಆಗಸ್ಟ್ 6 ರಂದು ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ಭಾರತ ತಂಡವು ಮೊದಲು ಬ್ಯಾಟ್ ಮಾಡಿತು ಮತ್ತು ಪವರ್‌ಪ್ಲೇನಲ್ಲಿಯೇ, ಸ್ಮೃತಿ ಟೀಮ್ ಇಂಡಿಯಾಕ್ಕೆ ಅದ್ಭುತ ಆರಂಭವನ್ನು ನೀಡಿದರು. ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯಗಳಲ್ಲಿ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿ ಬೌಂಡರಿ ಗಳಿಸಿದ್ದ ಸ್ಮೃತಿ ಇಲ್ಲೂ ಅದೇ ಶೈಲಿಯನ್ನು ತೋರಿದ್ದು, ಫಲಿತಾಂಶ ಹಾಗೆಯೇ ಉಳಿದಿದೆ.

ಭಾರತಕ್ಕೆ ಅಬ್ಬರದ ಆರಂಭ

ಇದನ್ನೂ ಓದಿ
Image
ಬಿರುಗಾಳಿ ಎಬ್ಬಿಸಲು ಒಪ್ಪಂದ ಮಾಡಿಕೊಂಡ ಕ್ರಿಸ್ ಗೇಲ್; 22 ದಿನಗಳ ಕಾಲ ಬೌಲರ್​ಗಳು ನಿದ್ದೆಗೆಡುವುದು ಖಂಡಿತ!
Image
ಐಪಿಎಲ್ ಫ್ರಾಂಚೈಸಿಗಳ ಮಾಸ್ಟರ್​ ಪ್ಲಾನ್​; ಬಿಬಿಲ್​ ತೊರೆಯಲು ಮುಂದಾದ15 ಆಸೀಸ್ ಆಟಗಾರರು!
Image
IND vs WI: ಸಂಜು ಇನ್, ಶ್ರೇಯಸ್ ಔಟ್! ರೋಹಿತ್ ಬಗ್ಗೆ ಸಸ್ಪೆನ್ಸ್; 4ನೇ ಟಿ20 ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾ

ಸ್ಮೃತಿ ಅವರ ಅಂತಹ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 7 ಓವರ್‌ಗಳಲ್ಲಿ 73 ರನ್ ಗಳಿಸಿತು. ಜೊತೆಗೆ ಈ ಎಡಗೈ ಬ್ಯಾಟರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಗದ ಅರ್ಧಶತಕ ಬಾರಿಸಿ ದಾಖಲೆಯನ್ನು ಸಹ ಮಾಡಿದರು. ಸ್ಮೃತಿ ಕೇವಲ 23 ಎಸೆತಗಳಲ್ಲಿ 50 ರನ್ ಗಳಿಸಿದರು. ಜೊತೆಗೆ ಈ ಪಂದ್ಯಾವಳಿಯಲ್ಲಿ ಸ್ಮೃತಿ ತಮ್ಮ ಎರಡನೇ ಅರ್ಧಶತಕವನ್ನು ಸಹ ಪೂರ್ಣಗೊಳಿಸಿದರು.

ಇದು ಸಿಡಬ್ಲ್ಯೂಜಿಗೆ ಮಾತ್ರವಲ್ಲದೆ ಮಹಿಳಾ ಟಿ20ಯಲ್ಲಿ ಭಾರತದ ಬ್ಯಾಟರ್​ ಒಬ್ಬರ ವೇಗದ ಅರ್ಧಶತಕ ಎಂಬ ಹೊಸ ದಾಖಲೆಯೂ ಸೃಷ್ಟಿಯಾಯಿತು. ಸ್ಮೃತಿ ಈ ಹಿಂದೆ ನಿರ್ಮಿಸಿದ್ದ 24 ಎಸೆತಗಳ ಅರ್ಧಶತಕದ ದಾಖಲೆಯನ್ನು ಮುರಿದರು. ಅಷ್ಟೇ ಅಲ್ಲ, ಮಹಿಳಾ ಟೂರ್ನಿಯ ನಾಕೌಟ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ದಾಖಲೆಯೂ ಇದಾಗಿದೆ.

ಜೆಮಿಮಾ ನೆರವು

ಸ್ಮೃತಿ (61 ರನ್, 32 ಎಸೆತ, 8 ಬೌಂಡರಿ, 3 ಸಿಕ್ಸರ್) ಅವರ ಈ ಇನ್ನಿಂಗ್ಸ್‌ನ ನೆರವಿನಿಂದ ಭಾರತಕ್ಕೆ ತ್ವರಿತ ಆರಂಭ ಸಿಕ್ಕರೂ ಮಧ್ಯಮ ಓವರ್‌ಗಳಲ್ಲಿ ತಂಡದ ಇನಿಂಗ್ಸ್ ನಿಧಾನವಾಯಿತು. ಶೆಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ನಡುವಿನ ಬಲವಾದ ಜೊತೆಯಾಟವು ಕೊನೆಯ 20 ಓವರ್‌ಗಳಲ್ಲಿ ಭಾರತವನ್ನು 164 ರನ್‌ಗಳ ಉತ್ತಮ ಸ್ಕೋರ್‌ಗೆ ಕೊಂಡೊಯ್ದಿತು. ಜೆಮಿಮಾ 31 ಎಸೆತಗಳಲ್ಲಿ 44 ರನ್ ಗಳಿಸಿ ಅಜೇಯರಾಗಿ ಮರಳಿದರು.

Published On - 6:07 pm, Sat, 6 August 22

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು