ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಓಟಗಾರ ಅವಿನಾಶ್ ಸೇಬಲ್ 8:11:20 ನಿಮಿಷದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಮತ್ತು ರಾಷ್ಟ್ರೀಯ ದಾಖಲೆ ಕೂಡ ಆಗಿದೆ. ಓರೆಗಾನ್‌ನ ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯ ಫೈನಲ್‌ನಲ್ಲಿ ಅವಿನಾಶ್ 11ನೇ ಸ್ಥಾನ ಪಡೆದಿದ್ದರು.
ಅವಿನಾಶ್ ಸೇಬಲ್ ಅವರ ಈ ಗೆಲುವು ಬಹಳ ದೊಡ್ಡದು. ವಾಸ್ತವವಾಗಿ, ಕಳೆದ 6 ಕಾಮನ್‌ವೆಲ್ತ್ ಕ್ರೀಡಾಕೂಟದಿಂದ, ಕೀನ್ಯಾದ ಅಥ್ಲೀಟ್‌ಗಳು ಮಾತ್ರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಆದರೆ ಸೇಬಲ್ ಈ ದಾಖಲೆಯನ್ನು ನಾಶಪಡಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸೇಬಲ್ ತಮ್ಮ ವೈಯಕ್ತಿಕ ದಾಖಲೆ, ರಾಷ್ಟ್ರೀಯ ದಾಖಲೆಯನ್ನು ಮುರಿದರು. ಚಿನ್ನದ ಪದಕಕ್ಕೆ ಹತ್ತಿರವಾಗಿದ್ದ ಸೇಬಲ್, ಕೀನ್ಯಾದ ಇಬ್ರಾಹಿಂ ಕಿಬಿವೋಟ್ ಅವರಿಗಿಂತ ಒಂದು ಇಂಚು ಹಿಂದೆ ಇದ್ದಿದ್ದರಿಂದ ಚಿನ್ನ ಕೈತಪ್ಪಿತು.
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಅಥ್ಲೀಟ್‌ನಲ್ಲಿ 4 ಪದಕಗಳನ್ನು ಗೆದ್ದಿದೆ. ಸೇಬಲ್‌ಗೂ ಮುನ್ನ ತೇಜಸ್ವಿನ್ ಶಂಕರ್ ಹೈಜಂಪ್‌ನಲ್ಲಿ ಕಂಚು ಜಯಿಸಿದರು. ಮುರಳಿ ಶ್ರೀಶಂಕರ್ ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 10,000 ಮೀಟರ್ ಓಟದ ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಗೆದ್ದಿದ್ದಾರೆ.
ಮಹಾರಾಷ್ಟ್ರದ ಬೀಡ್ ನಿವಾಸಿಯಾದ ಸೇಬಲ್ 12 ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಭಾರತೀಯ ಸೇನೆಗೆ ಸೇರಿದ್ದಾರೆ. ಅವರನ್ನು 2013-14ರವರೆಗೆ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜಿಸಲಾಗಿತ್ತು. ಇದರ ನಂತರ ಅವರನ್ನು ವಾಯವ್ಯ ರಾಜಸ್ಥಾನ ಮತ್ತು ಸಿಕ್ಕಿಂನಲ್ಲಿಯೂ ನಿಯೋಜಿಸಲಾಯಿತು.
Published On - 4:58 pm, Sat, 6 August 22