India vs west indies: ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಟೀಮ್ ಇಂಡಿಯಾ ಪ್ರಮುಖ ಬೌಲರ್ ಔಟ್

| Updated By: ಝಾಹಿರ್ ಯೂಸುಫ್

Updated on: Jan 25, 2022 | 7:19 PM

India vs west indies: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಮೊಹಮ್ಮದ್ ಶಮಿ ವಿಶ್ರಾಂತಿ ಪಡೆದಿದ್ದರು. ಜಸ್​ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಓವರ್​ಗಳನ್ನು ಬೌಲ್ ಮಾಡಿದ್ದಾರೆ.

India vs west indies: ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಟೀಮ್ ಇಂಡಿಯಾ ಪ್ರಮುಖ ಬೌಲರ್ ಔಟ್
Team India
Follow us on

ದಕ್ಷಿಣ ಆಫ್ರಿಕಾದಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಇದೀಗ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 6 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ 3 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. ಅಲ್ಲದೆ ಈ ಸರಣಿಗಾಗಿ ಈ ವಾರದೊಳಗೆ ಟೀಮ್ ಇಂಡಿಯಾವನ್ನು ಪ್ರಕಟಿಸಬಹುದು. ಆದರೆ ಈ ಸರಣಿಯಿಂದ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಿದೆ ಎಂದು ವರದಿಯಾಗಿದೆ. ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಗುಳಿದಿದ್ದ ತಂಡದ ನಾಯಕ ರೋಹಿತ್ ಶರ್ಮಾ ಅವರು ಮರಳಲು ಸಿದ್ಧರಾಗಿದ್ದು, ಹೀಗಾಗಿ ತಂಡವನ್ನು ಅವರೇ ಮುನ್ನಡೆಸಲಿದ್ದಾರೆ.

ಇನ್ನು ಸೌತ್ ಆಫ್ರಿಕಾ ವಿರುದ್ದ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈ ಬಿಡಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭುವನೇಶ್ವರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ ತಂಡಕ್ಕೆ ಮರಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಮೊಹಮ್ಮದ್ ಶಮಿ ವಿಶ್ರಾಂತಿ ಪಡೆದಿದ್ದರು. ಜಸ್​ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಓವರ್​ಗಳನ್ನು ಬೌಲ್ ಮಾಡಿದ್ದಾರೆ. ಇನ್ನು ಮುಂದಿನ ಟಿ20 ವಿಶ್ವಕಪ್ ಪರಿಗಣಿಸಿ ಅವರಿಗೆ ಅವಕಾಶ ನೀಡಬೇಕಿದೆ. ಅಲ್ಲದೆ ಐಪಿಎಲ್ ಕೂಡ ಶುರುವಾಗಲಿದೆ. ಹೀಗಾಗಿ ಮುಂದಿನ ಕೆಲವು ತಿಂಗಳುಗಳು ಆಟಗಾರರಿಗೆ ಕಠಿಣವಾಗಲಿವೆ. ಹೀಗಾಗಿ ಬುಮ್ರಾ ಅವರಿಗೆ ವಿಶ್ರಾಂತಿ ಅನುಭವಿ ವೇಗಿ ಶಮಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆ ಸಮಿತಿ ಮುಂದಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಕೊರೋನಾ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯಿಂದ ಹೊರಗುಳಿದಿದ್ದ ವಾಷಿಂಗ್ಟನ್ ಸುಂದರ್ ಕೂಡ ಟೀಮ್ ಇಂಡಿಯಾಕ್ಕೆ ಮರಳಲಿದ್ದಾರೆ. ಅಲ್ಲದೆ ಅಕ್ಷರ್ ಪಟೇಲ್ ಈಗ ಫಿಟ್ ಆಗಿದ್ದು, ಅವರಿಗೂ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಇದರಿಂದ ಜಯಂತ್ ಯಾದವ್ ಸ್ಥಾನ ಕಳೆದುಕೊಳ್ಳುವುದು ಖಚಿತ ಎನ್ನಬಹುದು.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ:

1ನೇ ODI, ಫೆಬ್ರವರಿ 6, ಭಾನುವಾರ, ಅಹಮದಾಬಾದ್

2ನೇ ODI, ಫೆಬ್ರವರಿ 9, ಬುಧವಾರ, ಅಹಮದಾಬಾದ್

3ನೇ ODI, ಫೆಬ್ರವರಿ 11, ಶುಕ್ರವಾರ, ಅಹಮದಾಬಾದ್

ಟಿ20 ಸರಣಿಯ ವೇಳಾಪಟ್ಟಿ:

1 ನೇ T20, ಫೆಬ್ರವರಿ 16 , ಬುಧವಾರ, ಕೋಲ್ಕತ್ತಾ

2 ನೇ T20, ಫೆಬ್ರವರಿ 18 , ಶುಕ್ರವಾರ, ಕೋಲ್ಕತ್ತಾ

3ನೇ T20, ಫೆಬ್ರವರಿ 20 , ಭಾನುವಾರ, ಕೋಲ್ಕತ್ತಾ

 

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!