ಸೆಮಿಫೈನಲ್​ಗೂ ಮುನ್ನ ಭಾರತಕ್ಕೆ ‘ಫೈನಲ್’ ಮ್ಯಾಚ್

T20 World Cup 2026: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 20 ತಂಡಗಳು ಕಣಕ್ಕಿಳಿದಿದ್ದವು. ಈ ಇಪ್ಪತ್ತು ಟೀಮ್​ಗಳಲ್ಲಿ ಈಗಾಗಲೇ 15 ತಂಡಗಳು ಹೊರಬಿದ್ದಿವೆ. ಇನ್ನು 2 ತಂಡಗಳು ಸೆಮಿಫೈನಲ್​ಗೇರಿದರೆ, ಭಾರತ, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ತಂಡಗಳು ಇನ್ನೂ ಸಹ ಸೆಮಿಫೈನಲ್​ ರೇಸ್​ನಲ್ಲಿದೆ.

ಸೆಮಿಫೈನಲ್​ಗೂ ಮುನ್ನ ಭಾರತಕ್ಕೆ ಫೈನಲ್ ಮ್ಯಾಚ್
T20 World Cup 2026

Updated on: Feb 28, 2026 | 7:46 AM

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್​ಗೇರಿದರೆ, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಎಲಿಮಿನೇಟ್ ಆಗಿದೆ. ಇನ್ನು ಭಾರತ, ಪಾಕಿಸ್ತಾನ್, ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್ ರೇಸ್​ನಲ್ಲಿದೆ. ಆದರೆ ಇನ್ನುಳಿದಿರುವುದು ಕೇವಲ 2 ಮ್ಯಾಚ್​ಗಳು ಮಾತ್ರ.

‘ಫೈನಲ್’ ಮ್ಯಾಚ್

ಈ ಎರಡು ಪಂದ್ಯಗಳಲ್ಲಿ 4 ತಂಡಗಳ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಅದರಲ್ಲೂ ಮಾರ್ಚ್ 1 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್​ ತಂಡಗಳು ಮುಖಾಮುಖಿಯಾಗಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಅಂದರೆ ಸೂಪರ್-8 ಸುತ್ತಿನ ಕೊನೆಯ ಪಂದ್ಯ​ ಭಾರತ ಮತ್ತು ವೆಸ್ಟ್ ಇಂಡೀಸ್​ ತಂಡಗಳಿಗೆ  ‘ಫೈನಲ್’ ಮ್ಯಾಚ್​ ಆಗಿ ಮಾರ್ಪಟ್ಟಿದೆ. ಇದರಲ್ಲಿ ಗೆದ್ದ ತಂಡವು ಸೆಮಿಫೈನಲ್​ಗೇರುವುದರಿಂದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಪಾಕಿಸ್ತಾನ್/ನ್ಯೂಝಿಲೆಂಡ್

ಮತ್ತೊಂದೆಡೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವೆ ಇಂದು (ಫೆ.28) ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡ ಸೋತರೆ ನ್ಯೂಝಿಲೆಂಡ್ ತಂಡವು ನೇರವಾಗಿ ಸೆಮಿಫೈನಲ್​​ಗೇರಲಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಶ್ರೀಲಂಕಾ ನೀಡುವ ಗುರಿಯನ್ನು ನಿರ್ದಿಷ್ಟ ಓವರ್​ಗಳಲ್ಲಿ ಅಥವಾ ಇಂತಿಷ್ಟು ಎಸೆತಗಳನ್ನು ಉಳಿಸಿ ಚೇಸ್ ಮಾಡಿದರೆ ನೆಟ್ ರನ್ ರೇಟ್ ನೆರವಿನೊಂದಿಗೆ ಸೆಮಿಫೈನಲ್​ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಪಾಕಿಸ್ತಾನ್ ಪಾಲಿಗೂ ಇಂದಿನ ಪಂದ್ಯವು ‘ಫೈನಲ್’ ಮ್ಯಾಚ್​ ಎಂದರೆ ತಪ್ಪಾಗಲಾರದು.

‘ಸೆಮಿ’ ಎದುರಾಳಿಗಳು

ಒಂದು ವೇಳೆ ಪಾಕಿಸ್ತಾನ್ ಅಥವಾ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೇರಿದರೆ ಗ್ರೂಪ್-1 ರಲ್ಲಿ ಅಗ್ರಸ್ಥಾನ ಪಡೆದಿರುವ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಹಾಗೆಯೇ ಭಾರತ ಅಥವಾ ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ ಗ್ರೂಪ್-2 ನಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ವಿರುದ್ಧ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ

ಹೀಗಾಗಿ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ತಮ್ಮ ಎದುರಾಳಿಗಳನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಭಾರತ, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ತಂಡಗಳಲ್ಲಿ ನಾಕೌಟ್ ಹಂತಕ್ಕೇರುವವರು ಯಾರು ಎಂಬದು ಇಂದು ಮತ್ತು ನಾಳೆ ನಿರ್ಧಾರವಾಗಲಿದೆ. ಇದರೊಂದಿಗೆ 20 ತಂಡಗಳೊಂದಿಗೆ ಶುರುವಾದ ಟೂರ್ನಿಯು 4 ತಂಡಗಳ ಕದನವಾಗಿ ಮಾರ್ಪಡಲಿದೆ. ಈ ನಾಲ್ಕು ತಂಡಗಳಲ್ಲಿ 2 ತಂಡವು ಮಾರ್ಚ್ 8 ರಂದು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

 

 

Follow Us