
ಮೂರು ಪಂದ್ಯಗಳ ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬಂದಿಳಿದಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಮೊದಲಿಗೆ ನಡೆಯಲಿದ್ದು, ಸೆಪ್ಟೆಂಬರ್ 23 ರಂದು ಭಾರತಕ್ಕೆ ಆಗಮಿಸಿರುವ ವಿಂಡೀಸ್ ತಂಡವು ಗುರುವಾರದಿಂದ ತನ್ನ ಅಭ್ಯಾಸವನ್ನು ಪ್ರಾರಂಭಿಸಲಿದೆ. ಆ ನಂತರ ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸವೂ ಶುರುವಾಗಲಿದೆ.
ಈ ಏಕದಿನ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾವನ್ನು ಸಹ ಪ್ರಕಟಿಸಲಾಗಿದೆ. ಅದರಂತೆ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಸಹ ತಂಡದಲ್ಲಿದ್ದಾರೆ. ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಲಾಗಿದೆ.
ಟೀಂ ಇಂಡಿಯಾ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಔಕಿಬ್ ನಬಿ, ಯಶಸ್ವಿ ಜೈಸ್ವಾಲ್ ಮತ್ತು ನಮನ್ ಧೀರ್.
ವೆಸ್ಟ್ ಇಂಡೀಸ್ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಆಗಿ ಶಾಯ್ ಹೋಪ್ ಆಯ್ಕೆಯಾಗಿದ್ದಾರೆ. ರೋಸ್ಟನ್ ಚೇಸ್, ಜಸ್ಟಿನ್ ಗ್ರೀನೇವ್ಸ್, ಜಾನ್ ಕ್ಯಾಂಪ್ಬೆಲ್, ಗುಡಕೇಶ್ ಮೋತಿ, ಅಲ್ಜಾರಿ ಜೋಸೆಫ್ ಅವರಂತಹ ಆಟಗಾರರ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಕೀಮೊ ಪಾಲ್, ಶೆರ್ಫೇನ್ ರುದರ್ಫೋರ್ಡ್ ಮತ್ತು ಜೇಡನ್ ಸೀಲ್ಸ್ ಅವರಂತಹ ಆಟಗಾರರು ಸಹ ತಂಡದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ, ವಿಕೆಟ್ ಕೀಪರ್), ಜ್ಯುವೆಲ್ ಆಂಡ್ರ್ಯೂ, ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಅಮೀರ್ ಜಂಗೂ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ವಿಟೆಲ್ ಲಾವ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್ ಮತ್ತು ಜೇಡನ್ ಸೀಲ್ಸ್.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ಯುವ ಪಡೆ
Published On - 4:28 pm, Wed, 23 September 26