Rohit Sharma: ಸಚಿನ್, ಕೊಹ್ಲಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಹಿಟ್​ಮ್ಯಾನ್

| Updated By: ಝಾಹಿರ್ ಯೂಸುಫ್

Updated on: Feb 05, 2022 | 4:33 PM

India vs West Indies: ಈ ಸರಣಿಯಲ್ಲಿ ಹಿಟ್​ಮ್ಯಾನ್ 200 ಕ್ಕೂ ಅಧಿಕ ರನ್ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದರೆ ವೆಸ್ಟ್ ಇಂಡೀಸ್​ ವಿರುದ್ದ ತವರಿನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಭಾರತದ ನಂಬರ್ 1 ಬ್ಯಾಟ್ಸ್​ಮನ್ ಎನಿಸಿಕೊಳ್ಳಬಹುದು.

Rohit Sharma: ಸಚಿನ್, ಕೊಹ್ಲಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಹಿಟ್​ಮ್ಯಾನ್
India vs West Indies
Follow us on

ಫೆಬ್ರವರಿ 6 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದೊಂದಿಗೆ ಭಾರತ-ವೆಸ್ಟ್ ಇಂಡೀಸ್ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ ಭಾನುವಾರ ನಡೆಯಲಿರುವ ಪಂದ್ಯವು ಟೀಮ್ ಇಂಡಿಯಾದ 1000ನೇ ಏಕದಿನ ಪಂದ್ಯ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಈ ಪಂದ್ಯದೊಂದಿಗೆ ವಿಶೇಷ ದಾಖಲೆ ಬರೆಯುವ ಅವಕಾಶವೊಂದು ರೋಹಿತ್ ಶರ್ಮಾ ಮುಂದಿದೆ.

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿದರೆ ವಿಂಡೀಸ್ ವಿರುದ್ದ ಅತೀ ಹೆಚ್ಚು ರನ್​ ಕಲೆಹಾಕಿದ ಭಾರತದ 2ನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 39 ಪಂದ್ಯಗಳಲ್ಲಿ 2235 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, 39 ಪಂದ್ಯಗಳಲ್ಲಿ 1573 ರನ್ ಬಾರಿಸಿರುವ ಸಚಿನ್ ತೆಂಡೂಲ್ಕರ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು 33 ಪಂದ್ಯಗಳಲ್ಲಿ ರೋಹಿತ್ ಶರ್ಮಾ 1523 ರನ್ ಬಾರಿಸಿದ್ದು, ವೆಸ್ಟ್ ಇಂಡೀಸ್ ವಿರುದ್ದ ಹಾಫ್ ಸೆಂಚುರಿ ಸಿಡಿಸಿದ್ರೆ ಸಚಿನ್ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.

ಇನ್ನು ಈ ಸರಣಿಯಲ್ಲಿ ಹಿಟ್​ಮ್ಯಾನ್ 200 ಕ್ಕೂ ಅಧಿಕ ರನ್ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದರೆ ವೆಸ್ಟ್ ಇಂಡೀಸ್​ ವಿರುದ್ದ ತವರಿನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಭಾರತದ ನಂಬರ್ 1 ಬ್ಯಾಟ್ಸ್​ಮನ್ ಎನಿಸಿಕೊಳ್ಳಬಹುದು. ಸದ್ಯ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದ ಭಾರತದಲ್ಲಿ 20 ಪಂದ್ಯಗಳಿಂದ 1239 ರನ್​ ಬಾರಿಸಿದ್ದಾರೆ. ಇದೀಗ 2ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 16 ಪಂದ್ಯಗಳಿಂದ 1040 ರನ್​ ಕಲೆಹಾಕಿದ್ದು, ಈ ಸರಣಿಯ ಮೂಲಕ ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶ ಹಿಟ್​ಮ್ಯಾನ್ ಮುಂದಿದೆ.

ಇದೀಗ ಗಾಯದಿಂದ ಚೇತರಿಸಿಕೊಂಡು ಕಂಬ್ಯಾಕ್ ಮಾಡುತ್ತಿರುವ ರೋಹಿತ್ ಶರ್ಮಾ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಹಲವು ದಾಖಲೆಯನ್ನು ಬರೆಯುವ ಅವಕಾಶ ಹೊಂದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಹಿಟ್​ಮ್ಯಾನ್ ಅವರ ಪ್ರದರ್ಶನ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ:

ಫೆಬ್ರವರಿ 6 – 1 ನೇ ODI, ಅಹಮದಾಬಾದ್

ಫೆಬ್ರವರಿ 9 – 2 ನೇ ODI, ಅಹಮದಾಬಾದ್

ಫೆಬ್ರವರಿ 11 – 3 ನೇ ODI, ಅಹಮದಾಬಾದ್

ಏಕದಿನ ಸರಣಿಗೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್ , ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್.

ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ಕೆಮರ್ ರೋಚ್, ಎನ್‌ಕ್ರುಮಾ ಬೊನ್ನರ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮರಿಯಾ ಶೆಫರ್ಡ್ , ಓಡಿಯನ್ ಸ್ಮಿತ್ ಮತ್ತು ಹೇಡನ್ ವಾಲ್ಷ್ ಜೂನಿಯರ್.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(India vs West Indies: Rohit Sharma looks to overtake Virat Kohli, Sachin Tendulkar in elite lists in ODI series)