IPL 2022 Auction: ಐಪಿಎಲ್ ಮೆಗಾ ಹರಾಜಿಗಾಗಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದ ಬಿಸಿಸಿಐ
IPL 2022 Mega Auction: ವಿದೇಶದಿಂದ ಬಂದು ಮೆಗಾ ಹರಾಜಿನಲ್ಲಿ ಭಾಗವಹಿಸುವವರು 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅಲ್ಲದೆ 8ನೇ ದಿನ ಮತ್ತು 9ನೇ ದಿನದಂದು (ಎರಡು ಬಾರಿ) ಕೋವಿಡ್ ಟೆಸ್ಟ್ ಮಾಡಿಸಬೇಕು.
ಐಪಿಎಲ್ ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಬಹುತೇಕ ಫ್ರಾಂಚೈಸಿಗಳ ತಂಡಗಳು ಬೆಂಗಳೂರಿಗೆ ಆಗಮಿಸಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿಗಾಗಿ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳನ್ನು ಪಾಲಿಸಿದವರಿಗೆ ಮಾತ್ರ ಮೆಗಾ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಬಿಸಿಸಿಐ ಫ್ರಾಂಚೈಸಿಗೆ ತಿಳಿಸಲಾದ ನಿಯಮಗಳೇನು ನೋಡೋಣ…
1- ಫ್ರಾಂಚೈಸಿಗಳನ್ನು ಪ್ರತಿನಿಧಿಸುವ ಅಧಿಕಾರಿಗಳು ಫೆಬ್ರವರಿ 9, 10 ಮತ್ತು 11 ರಂದು RT-PCR ವರದಿ ಪಡೆದಿರಬೇಕು. ಈ ಮೂಲಕ ಕೊರೋನಾ ಸೋಂಕು ಇಲ್ಲ ಎಂಬುದನ್ನು ದೃಢಪಡಿಸಬೇಕಾಗುತ್ತದೆ. ಪರೀಕ್ಷೆಯನ್ನು BCCI ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ ನಡೆಸುತ್ತದೆ.
2- ಒಂದು ತಂಡದ ಪರ್ಸ್ 90 ಕೋಟಿ ರೂ. ಅಂದರೆ ಒಂದು ತಂಡವು ಒಟ್ಟು 90 ಕೋಟಿಯವರೆಗೂ ಹರಾಜು ಕೂಗಬಹುದು. ಅದರಂತೆ ಈಗಾಗಲೇ ಉಳಿಸಿಕೊಂಡ ಆಟಗಾರರ ಒಟ್ಟು ಮೊತ್ತವನ್ನು ಕಳೆದು ಬಾಕಿ ಇರುವ ಮೊತ್ತದಲ್ಲಿ ಹರಾಜ ನಡೆಸಬೇಕಾಗುತ್ತದೆ.
3- ವಿದೇಶದಿಂದ ಬಂದು ಮೆಗಾ ಹರಾಜಿನಲ್ಲಿ ಭಾಗವಹಿಸುವವರು 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅಲ್ಲದೆ 8ನೇ ದಿನ ಮತ್ತು 9ನೇ ದಿನದಂದು (ಎರಡು ಬಾರಿ) ಕೋವಿಡ್ ಟೆಸ್ಟ್ ಮಾಡಿಸಬೇಕು.
3- ಫೆಬ್ರವರಿ 11 ರಂದು ಹರಾಜಿನ ಸ್ಥಳಕ್ಕೆ ಆಗಮಿಸುವವರ ಮೇಲೆ ಬಿಸಿಸಿಐ ನಿಕಟ ನಿಗಾ ಇರಿಸುತ್ತದೆ. ಅವರನ್ನು COVID-19 ರೋಗಲಕ್ಷಣಗಳಿಗಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
4- ಸೋಂಕಿನ ಲಕ್ಷಣ ಕಂಡು ಬಂದರೆ ನೆಗೆಟಿವ್ ವರದಿ ಬರುವವರೆಗೂ ಯಾವುದೇ ಕಾರಣಕ್ಕೂ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.
5- ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವವರು BCCI ವೈದ್ಯಕೀಯ ತಂಡದೊಂದಿಗೆ COVID ಲಸಿಕೆ ಪಡೆದಿರುವ ರಿಪೋರ್ಟ್ (ಯಾವುದಾದರೂ ಇದ್ದರೆ) ಸೇರಿದಂತೆ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
6- ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಮುಖವಾಡಗಳನ್ನು ಧರಿಸುವುದು ಕೂಡ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(IPL 2022 Auction: BCCI asks all 10 franchises to follow these 6 Rules)
Published On - 9:13 pm, Sat, 5 February 22