ರಿಷಭ್ ಪಂತ್​ಗೆ ಸವಾಲೆಸೆಯಲು ಎಂಟ್ರಿ ಕೊಟ್ಟಿದ್ದಾನೆ 19 ವರ್ಷದ ಬಿಗ್ ಹಿಟ್ಟರ್ ವಿಕೆಟ್ ಕೀಪರ್

Dinesh Bana: ದಿನೇಶ್ ಬಾನಾ ಪ್ರಸ್ತುತ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​. ಒಂದು ವೇಳೆ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೆ, ಅವರ ಅದ್ಭುತ ಬ್ಯಾಟಿಂಗ್ ಇಡೀ ವಿಶ್ವದ ಗಮನವನ್ನು ಸೆಳೆಯಬಹುದು.

ರಿಷಭ್ ಪಂತ್​ಗೆ ಸವಾಲೆಸೆಯಲು ಎಂಟ್ರಿ ಕೊಟ್ಟಿದ್ದಾನೆ 19 ವರ್ಷದ ಬಿಗ್ ಹಿಟ್ಟರ್ ವಿಕೆಟ್ ಕೀಪರ್
dinesh bana-rishab pant
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 05, 2022 | 3:28 PM

ಅಂಡರ್-19 ವಿಶ್ವಕಪ್‌ನಲ್ಲಿ (U19 World Cup) ಭಾರತ ತಂಡ ಫೈನಲ್ ತಲುಪಿದೆ. ಟೀಮ್ ಇಂಡಿಯಾದ (Team India) ಈ ಭರ್ಜರಿ ಪ್ರದರ್ಶನ ನಡುವೆ ಹಲವು ಹೆಸರುಗಳು ಚರ್ಚೆಯಲ್ಲಿವೆ. ಇದಾಗ್ಯೂ ಕಡಿಮೆ ಚರ್ಚೆಯಾಗುತ್ತಿರುವ ಹೆಸರೆಂದರೆ ದಿನೇಶ ಬಾನಾ (Dinesh Bana). 19 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಬಾನಾ ಅಂಡರ್​ 19 ವಿಶ್ವಕಪ್​ನಲ್ಲಿ ಅತ್ಯಾಧ್ಬುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 4 ಎಸೆತಗಳನ್ನು ಎದುರಿಸಿದ ಬಾನಾ 500 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ದಿನೇಶ್ ಬಾನಾ ಅವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ ಆಸೀಸ್ ವಿರುದ್ದ ಕೊನೆಯ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 27 ರನ್​ಗಳು. ಇದೀಗ ದಿನೇಶ್ ಬಾನಾ ಹೆಸರು ಐಪಿಎಲ್​ ಮೆಗಾ ಹರಾಜಿನಲ್ಲಿದೆ. ಬಿಗ್ ಹಿಟ್ಟರ್ ಎನಿಸಿಕೊಂಡಿರುವ ಈ ಯುವ ಆಟಗಾರನ ಮೇಲೆ ಬಹುತೇಕ ಫ್ರಾಂಚೈಸಿಗಳು ಕೂಡ ಕಣ್ಣಿಟ್ಟಿದೆ.

ಹರಿಯಾಣ ಮೂಲದ ದಿನೇಶ್ ಬಾನಾ ಪ್ರಸ್ತುತ ಭಾರತದ ಅಂಡರ್-19 ತಂಡದಲ್ಲಿ ಮಧ್ಯಮ-ಕೆಳ ಕ್ರಮಾಂಕದ ಬ್ಯಾಟ್ಸ್​ಮನ್. ಸಂದರ್ಭಕ್ಕನುಗುಣುವಾಗಿ ಬ್ಯಾಟ್ ಬೀಸುವ ಬಾಬಾಗೆ ಕೆಲವೊಮ್ಮೆ ಬ್ಯಾಟಿಂಗ್‌ ಬಡ್ತಿ ನೀಡಲಾಗುತ್ತದೆ. ಹೀಗೆ ಸಿಕ್ಕ ಅವಕಾಶಗಳಲ್ಲಿ ಬಾನಾ ಅಬ್ಬರಿಸಿದ್ದೇ ಹೆಚ್ಚು. ಅದರಲ್ಲೂ ಬಾನಾ ಅವರ ಪವರ್​ ಹಿಟ್ಟಿಂಗ್ ಕೆಲವೊಮ್ಮೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ನೆನಪಿಸುತ್ತದೆ. ಪಂತ್ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ವೇಗದ ಬ್ಯಾಟಿಂಗ್‌ಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಕೂಡ ಇದ್ದಾರೆ. ಇದಾಗ್ಯೂ ಪಂತ್​ಗೆ ಸವಾಲೆಸೆಯುವಂತಹ ಹಲವುಇ ಯುವ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸ್ಥಾನ ಅಲಂಕರಿಸುವ ಪಯತ್ನದಲ್ಲಿದ್ದಾರೆ.

ಇದೀಗ ದಿನೇಶ್ ಬಾನಾ ಕೂಡ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಗೇಮ್ ಚೇಂಜರ್​ ಅನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾಗೆ ಅತ್ಯುತ್ತಮ ಆಯ್ಕೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಆಸ್ಟ್ರೇಲಿಯಾ ವಿರುದ್ದ ಬಾನಾ 4 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು. ಈ ವೇಳೆ 2 ಬಿಗ್ ಸಿಕ್ಸ್ ಮತ್ತು 2 ಬೌಂಡರಿಗಳನ್ನು ಬಾರಿಸಿದ್ದರು. ಈ ಮೂಲಕ 19 ವರ್ಷದೊಳಗಿನ ಕ್ರಿಕೆಟ್‌ನ ಯಾವುದೇ ವಿಭಾಗದಲ್ಲಿ 4 ಅಥವಾ ಹೆಚ್ಚಿನ ಎಸೆತಗಳನ್ನು ಎದುರಿಸಿ ಕೇವಲ ಬೌಂಡರಿಗಳಿಂದ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಭರ್ಜರಿ ದಾಖಲೆಯೊಂದಿಗೆ ದಿನೇಶ್ ಬಾನಾ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ 4 ಎಸೆತಗಳಲ್ಲೇ ಐಪಿಎಲ್ ಫ್ರಾಂಚೈಸಿಗಳು ತನ್ನತ್ತ ನೋಡುವಂತೆ ಮಾಡಿದ್ದಾರೆ.

ದಿನೇಶ್ ಬಾನಾ ಪ್ರಸ್ತುತ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​. ಒಂದು ವೇಳೆ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೆ, ಅವರ ಅದ್ಭುತ ಬ್ಯಾಟಿಂಗ್ ಇಡೀ ವಿಶ್ವದ ಗಮನವನ್ನು ಸೆಳೆಯಬಹುದು. ದಿನೇಶ್ ಬಾನಾ ಅವರ ವಿಕೆಟ್ ಕೀಪಿಂಗ್ ಕೂಡ ಅತ್ಯುತ್ತಮವಾಗಿದೆ. ತಮ್ಮ ಕೀಪಿಂಗ್ ಅನ್ನು ಸುಧಾರಿಸಲು ಅವರು 8-9 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. ಅದರ ಜೊತೆ ಬ್ಯಾಟಿಂಗ್​ನತ್ತ ಅಭ್ಯಾಸ ನಡೆಸುತ್ತಾರೆ ಎಂದು ಕೋಚ್ ರಣವೀರ್ ಜಾಖರ್ ಹೇಳಿದ್ದಾರೆ. ಒಟ್ಟಿನಲ್ಲಿ ದಿನೇಶ್ ಬಾನಾ ಅವರ ಎಂಟ್ರಿ ಇದೀಗ ರಿಷಭ್ ಪಂತ್ ಹಾಗೂ ಇಶಾನ್ ಕಿಶನ್​ಗೆ ಹೊಸ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಅಂದಹಾಗೆ ಭಾರತ-ಇಂಗ್ಲೆಂಡ್ ನಡುವಣ ಅಂಡರ್​ 19 ವಿಶ್ವಕಪ್ ಫೈನಲ್​ ಪಂದ್ಯವು ಇಂದು (ಫೆ.5) ನಡೆಯಲಿದ್ದು, ಈ ಪಂದ್ಯದಲ್ಲಿ ದಿನೇಶ್ ಬಾನಾ ಕಮಾಲ್ ಮಾಡಿದ್ರೆ, ಐಪಿಎಲ್​ಗೆ ಎಂಟ್ರಿ ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Under 19 world cup: explosive wicket keeper batsman dinesh bana is big threat for rishabh pant)

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ