WI vs IND 3rd T20: ಇಂದೇ ನಡೆಯಲಿದೆ ಭಾರತ-ವೆಸ್ಟ್ ಇಂಡೀಸ್ 3ನೇ ಪಂದ್ಯ: ಸಮಯದಲ್ಲಿ ಬದಲಾವಣೆ

India vs West Indies: 4 ಓವರ್​ಗಳನ್ನು ಎಸೆದ ಮೆಕಾಯ್ ಒಂದು ಮೇಡನ್ ಓವರ್​ ಸೇರಿದಂತೆ ಕೇವಲ 17 ರನ್​ ನೀಡಿ 6 ವಿಕೆಟ್ ಕಬಳಿಸಿದ್ದರು. ಪರಿಣಾಮ ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ 138 ರನ್​ಗಳಿಸಿ ಆಲೌಟ್ ಆಯಿತು.

WI vs IND 3rd T20: ಇಂದೇ ನಡೆಯಲಿದೆ ಭಾರತ-ವೆಸ್ಟ್ ಇಂಡೀಸ್ 3ನೇ ಪಂದ್ಯ: ಸಮಯದಲ್ಲಿ ಬದಲಾವಣೆ
India vs West Indies
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 02, 2022 | 11:34 AM

ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವು ಮಂಗಳವಾರ ನಡೆಯಲಿದೆ. ಸೋಮವಾರವಷ್ಟೇ ಸೇಂಟ್​ ಕಿಟ್ಸ್​ ಮೈದಾನದಲ್ಲಿ 2ನೇ ಟಿ20 ಪಂದ್ಯವಾಡಿದ್ದ ಉಭಯ ತಂಡಗಳು, ಇದೀಗ ಅದೇ ಮೈದಾನದಲ್ಲಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದೆ. ಇದೀಗ ಮೂರನೇ ಪಂದ್ಯಕ್ಕಾಗಿ ಗಂಟೆಗಳ ಅಂತರದಲ್ಲಿ ಎರಡೂ ತಂಡಗಳು ಸಜ್ಜಾಗಬೇಕಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಮಕಾಡೆ ಮಲಗಿತು. ಅದರಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಒಬೆಡ್ ಮೆಕಾಯ್ ದಾಳಿಗೆ ತತ್ತರಿಸಿದ್ದರು.

4 ಓವರ್​ಗಳನ್ನು ಎಸೆದ ಮೆಕಾಯ್ ಒಂದು ಮೇಡನ್ ಓವರ್​ ಸೇರಿದಂತೆ ಕೇವಲ 17 ರನ್​ ನೀಡಿ 6 ವಿಕೆಟ್ ಕಬಳಿಸಿದ್ದರು. ಪರಿಣಾಮ ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ 138 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್​ ಬಾರಿಸಿ ಭರ್ಜರಿ ಜಯ ಸಾಧಿಸಿತು.

ಇದೀಗ ವೆಸ್ಟ್ ಇಂಡೀಸ್ ಗೆದ್ದಿರುವ ಸೇಂಟ್ ಕಿಟ್ಸ್ ಮೈದಾನದಲ್ಲೇ ಮೂರನೇ ಪಂದ್ಯವಾಡಲಾಗುತ್ತಿದೆ. ಹೀಗಾಗಿಯೇ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸರಣಿಯಲ್ಲಿ ಮೇಲುಗೈ ಸಾಧಿಸಲಿದೆ. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹುದು.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಎಷ್ಟು ಗಂಟೆಗೆ ಪಂದ್ಯ ಶುರು? ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಬೇಕಿತ್ತು. ಆದರೆ 2ನೇ ಪಂದ್ಯವು ತಡವಾಗಿ ಆರಂಭವಾಗಿದ್ದ ಕಾರಣ, ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ನೀಡಲು ಮೂರನೇ ಪಂದ್ಯದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅದರಂತೆ 8 ಗಂಟೆಯ ಬದಲಿಗೆ ಈ ಪಂದ್ಯವು ರಾತ್ರಿ 9.30 ರಿಂದ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಭಾರತದಲ್ಲಿ ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಆ್ಯಪ್​ನಲ್ಲೂ ಈ ಪಂದ್ಯದ ಲೈವ್ ಸ್ಟೀಮಿಂಗ್ ಇರಲಿದೆ.

ಉಭಯ ತಂಡಗಳು ಹೀಗಿವೆ:

ವೆಸ್ಟ್ ಇಂಡೀಸ್ ಟಿ20 ತಂಡ: ನಿಕೋಲಸ್ ಪೂರನ್ (ನಾಯಕ) , ಡೆವೊನ್ ಥಾಮಸ್ (ವಿಕೆಟ್ ಕೀಪರ್) , ಬ್ರಾಂಡನ್ ಕಿಂಗ್ , ಕೈಲ್ ಮೇಯರ್ಸ್ , ಶಿಮ್ರಾನ್ ಹೆಟ್ಮೆಯರ್ , ರೋವ್​ಮನ್ ಪೊವೆಲ್ , ಓಡಿಯನ್ ಸ್ಮಿತ್ , ಜೇಸನ್ ಹೋಲ್ಡರ್ , ಅಕೆಲ್ ಹೋಸೇನ್ , ಅಲ್ಜಾರಿ ಜೋಸೆಫ್ , ಓಬೆಡ್ ಮೆಕಾಯ್ , ಕೀಮೋ ಬ್ರೋಕ್ ಶೆಫರ್ , ಷಮರ್ ಬ್ರೋಕ್ ಪಾಲ್ , ಹೇಡನ್ ವಾಲ್ಷ್.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ ( ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅವೇಶ್ ಖಾನ್ , ಅರ್ಷದೀಪ್​ ಸಿಂಗ್ , ರವಿ ಬಿಷ್ಣೋಯ್ , ಸಂಜು ಸ್ಯಾಮ್ಸನ್ , ಹರ್ಷಲ್ ಪಟೇಲ್ , ದೀಪಕ್ ಹೂಡಾ, ಕುಲ್​ದೀಪ್ ಯಾದವ್.

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ