IND vs WI: 2 ವರ್ಷಗಳಿಂದ ಶತಕಗಳಿಲ್ಲ; ಬ್ಯಾಟಿಂಗ್ ಸರಾಸರಿಯಲ್ಲೂ ತೀರ ಕುಸಿತ ಕಂಡ ಕೊಹ್ಲಿ!

Virat Kohli: 2022 ರಲ್ಲಿ, ವಿರಾಟ್ ಕೊಹ್ಲಿ 5 ODI ಪಂದ್ಯಗಳನ್ನು ಆಡಿದ್ದು ಅವರ ಬ್ಯಾಟ್‌ನಿಂದ 142 ರನ್ ಬಂದಿವೆ. ಇದರೊಂದಿಗೆ ಅವರ ಬ್ಯಾಟಿಂಗ್ ಸರಾಸರಿ 28.40 ಆಗಿದೆ. ಕೊಹ್ಲಿ ತನ್ನ ವೃತ್ತಿಜೀವನದಲ್ಲಿ 2008 ರಲ್ಲಿ 31.80 ರ ಸರಾಸರಿಯಲ್ಲಿ ರನ್ ಗಳಿಸಿದ್ದರು.

IND vs WI: 2 ವರ್ಷಗಳಿಂದ ಶತಕಗಳಿಲ್ಲ; ಬ್ಯಾಟಿಂಗ್ ಸರಾಸರಿಯಲ್ಲೂ ತೀರ ಕುಸಿತ ಕಂಡ ಕೊಹ್ಲಿ!
ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Feb 10, 2022 | 7:51 PM

ವಿರಾಟ್ ಕೊಹ್ಲಿ… ಏಕದಿನ ಕ್ರಿಕೆಟ್‌ನ ಕಿಂಗ್ ಎಂದು ಕರೆದರೆ ತಪ್ಪಾಗಲಾರದು. ವಿರಾಟ್ ಕೊಹ್ಲಿ (Virat Kohli) ಹಲವು ವರ್ಷಗಳಿಂದ ಏಕದಿನ ಕ್ರಿಕೆಟ್ ಅನ್ನು ಆಳಿದ್ದಾರೆ. ಈ ವೈಟ್-ಬಾಲ್ ಮಾದರಿಯಲ್ಲಿ, ವಿರಾಟ್ ಕೊಹ್ಲಿ ಶತಕ ಮತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಂತೆ ವಿರಾಟ್ ಬ್ಯಾಟ್ ಈಗ ಏಕದಿನ ಕ್ರಿಕೆಟ್‌ನಲ್ಲಿ ಸೈಲೆಂಟ್ ಆಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯ (ODI series) ಮೊದಲ ಎರಡು ಪಂದ್ಯಗಳಲ್ಲಿ, ಕೊಹ್ಲಿ ಅಗ್ಗವಾಗಿ ವಿಕೆಟ್ ಒಪ್ಪಿಸಿದರು. ಈ ಎರಡು ವೈಫಲ್ಯಗಳ ನಂತರ ಮೊದಲ ಬಾರಿಗೆ, ಅವರ ODI ಅಂಕಿಅಂಶಗಳು ತುಂಬಾ ಕಳಪೆಯಾಗಿದೆ. ವಿರಾಟ್ ಕೊಹ್ಲಿಯ ODI ವೃತ್ತಿಜೀವನದ ಸರಾಸರಿ 58.35 ಆಗಿದ್ದರೂ, ಆದರೆ ನಾವು ಪ್ರತಿ ವರ್ಷದ ODI ಸರಾಸರಿ ಬಗ್ಗೆ ಮಾತನಾಡಿದರೆ, ಮೊದಲ ಬಾರಿಗೆ ಅವರ ಬ್ಯಾಟ್‌ನಿಂದ ಪ್ರತಿ ಪಂದ್ಯಕ್ಕೆ 30 ಕ್ಕಿಂತ ಕಡಿಮೆ ರನ್ ಗಳಿಸಲಾಗುತ್ತಿದೆ.

2022 ರಲ್ಲಿ, ವಿರಾಟ್ ಕೊಹ್ಲಿ 5 ODI ಪಂದ್ಯಗಳನ್ನು ಆಡಿದ್ದು ಅವರ ಬ್ಯಾಟ್‌ನಿಂದ 142 ರನ್ ಬಂದಿವೆ. ಇದರೊಂದಿಗೆ ಅವರ ಬ್ಯಾಟಿಂಗ್ ಸರಾಸರಿ 28.40 ಆಗಿದೆ. ಕೊಹ್ಲಿ ತನ್ನ ವೃತ್ತಿಜೀವನದಲ್ಲಿ 2008 ರಲ್ಲಿ 31.80 ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಏಕೆಂದರೆ ಅದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಆರಂಭವಾಗಿತ್ತು. ಆದರೆ ಈಗ 14 ವರ್ಷಗಳ ನಂತರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಅಂತಹ ದಿನಗಳನ್ನು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿಗೆ ಏನಾಗಿದೆ?

ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಮಾದರಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಏಕದಿನ ಮಾದರಿಯಲ್ಲಿ ಅವರು ಅರ್ಧಶತಕಗಳನ್ನು ಆಗಾಗ್ಗೆ ಬಾರಿಸುತ್ತಿದ್ದಾರೆ. ಆದರೆ, ಕಳೆದೆರಡು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ರೀತಿ ನೋಡಿದರೆ ಈ ಆಟಗಾರನ ಫಾರ್ಮ್ ಹದಗೆಟ್ಟಂತಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 4 ಎಸೆತಗಳಲ್ಲಿ ಔಟಾದರು. ಎರಡನೇ ODIನಲ್ಲಿ, ವಿರಾಟ್ ಇದ್ದಕ್ಕಿದ್ದಂತೆ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದರು. ವಿರಾಟ್ ಕೊಹ್ಲಿ ಪದೇ ಪದೇ ಒಂದೇ ರೀತಿಯಾಗಿ ಔಟಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ವಿರಾಟ್ ಜೊತೆ ಅದೃಷ್ಟ ಇಲ್ಲ – ಗವಾಸ್ಕರ್

ಅದೃಷ್ಟ ಕೂಡ ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಿಲ್ಲ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೆ ಅದೃಷ್ಟ ಬೇಕು, ಅದು ಸದ್ಯಕ್ಕೆ ವಿರಾಟ್ ಬಳಿ ಕಾಣಿಸುತ್ತಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್‌ನಲ್ಲಿಲ್ಲ, ಕನಿಷ್ಠ ಏಕದಿನ ಕ್ರಿಕೆಟ್‌ನಲ್ಲಿ, ಅವರು ದಕ್ಷಿಣ ಆಫ್ರಿಕಾದಲ್ಲಿ ಅರ್ಧಶತಕಗಳನ್ನು ಗಳಿಸಿದ್ದಾರೆ ಎಂದು ಗವಾಸ್ಕರ್ ಹೇಳಿದರು.

ಇದನ್ನೂ ಓದಿ:IPL Auction 2022: ಹಣದ ಹೊಳೆ ಹರಿಸುವ ಎಲ್ಲಾ ಐಪಿಎಲ್ ತಂಡಗಳ ಮಾಲೀಕರ ವಿವರ ಇಲ್ಲಿದೆ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ