ಶ್ರೀಲಂಕಾ ವಿರುದ್ಧದ (India vs Sri Lanka) ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 39 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಈ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಕರ್ (Harmanpreet Kaur and Pooja Vastrakar) ಅವರ ಅರ್ಧಶತಕದ ಆಧಾರದ ಮೇಲೆ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 255 ರನ್ ಟಾರ್ಗೆಟ್ ನೀಡಿತು. ರನ್ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 47.3 ಓವರ್‌ಗಳಲ್ಲಿ 216 ರನ್ ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ವರ್ಚಸ್ವಿ ನಾಯಕಿ ಮಿಥಾಲಿ ರಾಜ್ ಅವರ ನಿವೃತ್ತಿಯ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು ಆಡುತ್ತಿರುವ ಭಾರತ, ಮೊದಲ ಎರಡು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಭಾರತ ಈ ಹಿಂದೆ ಟಿ20 ಅಂತಾರಾಷ್ಟ್ರೀಯ ಸರಣಿಯನ್ನೂ 2-1 ಅಂತರದಲ್ಲಿ ಗೆದ್ದುಕೊಂಡಿತ್ತು. ಅದೇ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಎರಡನೇ ಏಕದಿನ ಪಂದ್ಯದವನ್ನು 10 ವಿಕೆಟ್‌ಗಳಿಂದ ಏಕಪಕ್ಷೀಯ ಗೆಲುವು ದಾಖಲಿಸಿತು. ಪಂದ್ಯದ ಎಲ್ಲಾ ವಿಭಾಗಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದು, ಶ್ರೀಲಂಕಾ ಪ್ರವಾಸದುದ್ದಕ್ಕೂ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡದಿಂದ ಇದೇ ರೀತಿಯ ಪ್ರದರ್ಶನಗಳನ್ನು ನಿರೀಕ್ಷಿಸಲಾಗಿತ್ತು.
India complete a 3-0 clean sweep ?
They win the third ODI against Sri Lanka in Pallekele by 39 runs. #SLvIND |? Scorecard: https://t.co/LlEQ247Spf pic.twitter.com/t8aDwv1uEC
— ICC (@ICC) July 7, 2022
ಶ್ರೀಲಂಕಾ ಪರ ನೀಲಾಕ್ಷಿ ಡಿ ಸಿಲ್ವಾ 59 ಎಸೆತಗಳಲ್ಲಿ 48 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರಲ್ಲದೆ ನಾಯಕಿ ಚಾಮರಿ ಅಟ್ಟಪಟ್ಟು 44, ಹುಸೇನಿ ಪೆರೇರಾ 39 ಮತ್ತು ಹರ್ಷಿತಾ ಸಮರವಿಕ್ರಮ 22 ರನ್ ಗಳಿಸಿದರು. ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ 10 ಓವರ್‌ಗಳಲ್ಲಿ 36 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಮೇಘನಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಮತ್ತು ಹರ್ಲೀನ್ ಡಿಯೋಲ್ ತಲಾ ಒಂದು ವಿಕೆಟ್ ಪಡೆದರು.
ಪೂಜಾ ವಿಶ್ವದಾಖಲೆ
ಮೊದಲು ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 124 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ, ಇದರ ನಂತರ ಪೂಜಾ ವಸ್ತ್ರಾಕರ್ ಎಂಟನೇ ಕ್ರಮಾಂಕಕ್ಕೆ ಬಂದು ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕರೆದೊಯ್ದರು. ಈ ಇನ್ನಿಂಗ್ಸ್ ಮೂಲಕ ಪೂಜಾ ತಮ್ಮ ಹೆಸರಿನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. 8ನೇ ಕ್ರಮಾಂಕದಲ್ಲಿ ಬಂದು ಅತ್ಯಧಿಕ ರನ್ ಬಾರಿಸಿದ ಕೀರ್ತಿಗೆ ಪೂಜಾ ಭಾಜನರಾಗಿದ್ದಾರೆ.
Published On - 5:23 pm, Thu, 7 July 22