India vs Netherlands: ಭಾರತ-ನೆದರ್​ಲೆಂಡ್ಸ್ ಪಂದ್ಯಕ್ಕೆ ಮಳೆಯ ಕಾಟ?: ಸಿಡ್ನಿ ಹವಾಮಾನ ವರದಿ ಇಲ್ಲಿದೆ ನೋಡಿ

| Updated By: Vinay Bhat

Updated on: Oct 27, 2022 | 8:38 AM

Sydney Weather Report, IND vs NED: ಟಿ20 ವಿಶ್ವಕಪ್​ನಲ್ಲಿ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಹಾಗೂ ನೆದರ್​ಲೆಂಡ್ಸ್ ತಂಡ ಮುಖಾಮುಖಿ ಆಗುತ್ತಿದೆ. ಹಾಗಾದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?, ಸಿಡ್ನಿ ಹವಾಮಾನ ಹೇಗಿದೆ? ಎಂಬುದನ್ನು ನೋಡೋಣ.

India vs Netherlands: ಭಾರತ-ನೆದರ್​ಲೆಂಡ್ಸ್ ಪಂದ್ಯಕ್ಕೆ ಮಳೆಯ ಕಾಟ?: ಸಿಡ್ನಿ ಹವಾಮಾನ ವರದಿ ಇಲ್ಲಿದೆ ನೋಡಿ
sydney cricket ground weather
Follow us on

ಐಸಿಸಿ ಟಿ20 ವಿಶ್ವಕಪ್​ನಲ್ಲಿಂದು (T20 Word Cup) ಮತ್ತೊಂದು ರೋಚಕ ಕದನ ನಡೆಯಲದೆ. ಮಧ್ಯಾಹ್ನ 12:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಹಾಗೂ ನೆದರ್​ಲೆಂಡ್ಸ್ (India vs Netherlands) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಮತ್ತೊಂದು ಜಯ ಸಾಧಿಸಿ ಟೇಬಲ್ ಟಾಪರ್ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಬಾಂಗ್ಲಾ ಎದುರು ಸೋತ ನೆದರ್​ಲೆಂಡ್ಸ್ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ರೋಹಿತ್ ಪಡೆ ನೆದರ್​ಲೆಂಡ್ಸ್ ತಂಡವನ್ನು ಹಗುರವಾಗಿ ಪರಿಗಣಿಸದೆ ಗೇಮ್ ಪ್ಲಾನ್ ರೂಪಿಸುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್ (Sydney Cricket Ground) ಸಾಕ್ಷಿಯಾಗಲಿದೆ. ಹಾಗಾದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?, ಸಿಡ್ನಿ ಹವಾಮಾನ ಹೇಗಿದೆ? ಎಂಬುದನ್ನು ನೋಡೋಣ.

ಕಳೆದ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಮೆಲ್ಬೋರ್ನ್​ನಲ್ಲಿ ವರುಣನ ಕಾಟ ಇರಲಿದೆ ಎಂದು ಹೇಳಲಾಗಿತ್ತು. ಆದರೆ, ಪಂದ್ಯ ಸರಾಗವಾಗಿ ಸಾಗಿತು. ಇಂದು ಕೂಡ ಇಂಡೋ- ನೆದರ್​ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆ ಎನ್ನಲಾಗಿದೆ. ಗುರುವಾರ ಸಿಡ್ನಿ ಸುತ್ತಮುತ್ತ ಮಳೆಯಾಗುವ ಸಾಧ್ಯತೆಯಿರುವ ಕಾರಣ ಪಂದ್ಯಕ್ಕೂ ಸಣ್ಣ ಪ್ರಮಾಣದಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೆಲ್ಬೋರ್ನ್​ಗೆ ಹೋಲಿಸಿದರೆ ಸಿಡ್ನಿ ಪಿಚ್ ವಿಶೇಷವಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನ ಬ್ಯಾಟಿಂಗ್‌ಗೆ ಉತ್ತಮವಾಗಿರುವ ಪಿಚ್ ಹೊಂದಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ಕಾರಣ ಆರಂಭದಿಂದಲೇ ಬ್ಯಾಟರ್‌ಗಳು ಯಶಸ್ಸು ಸಾಧಿಸುತ್ತಾರೆ. ಇದುಕೂಡ ದೊಡ್ಡ ಮೈದಾನ ಆಗಿರುವುದರಿಂದ 160+ ರನ್ ಕಲೆಹಾಕುವುದು ಸುಲಭವಲ್ಲ. ಹೀಗಾಗಿ ಇಂದಿನ ಮ್ಯಾಚ್ ಕೂಡ ಹೈವೋಲ್ಟೇಜ್ ಆಗುವ ನಿರೀಕ್ಷೆಯಿದೆ. ಭಾರತ- ನೆದರ್​ಲೆಂಡ್ಸ್ ಪಂದ್ಯಕ್ಕೂ ಮುನ್ನ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸೆಣೆಸಾಟ ನಡೆಸಲಿದೆ.

ಇದನ್ನೂ ಓದಿ
IND vs NED: ಟಿ20 ವಿಶ್ವಕಪ್​ನಲ್ಲಿಂದು ಭಾರತ-ನೆದರ್​ಲೆಂಡ್ಸ್ ಮುಖಾಮುಖಿ: ರೋಹಿತ್ ಪಡೆಯಲ್ಲಿ ಏನು ಬದಲಾವಣೆ?
ರೋಹಿತ್ ಬಳಿಕ ಟೀಂ ಇಂಡಿಯಾದ ನಾಯಕ ಯಾರು? ಪಾಕ್ ಮಾಜಿ ಕ್ರಿಕೆಟಿಗರ ಆಯ್ಕೆ ಯಾರು ಗೊತ್ತಾ?
T20 World Cup 2022: ಸೆಮಿಫೈನಲ್ ಆಡುವ 4 ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ
India vs Netherlands: ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯ ಟೀಮ್ ಇಂಡಿಯಾಗೆ ಏಕೆ ಬಹಳ ಮುಖ್ಯ? ಇಲ್ಲಿದೆ 4 ಕಾರಣಗಳು

ಟೀಮ್ ಇಂಡಿಯಾ ಮೊದಲ ಪಂದ್ಯ ಗೆದ್ದರೂ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಓಪನರ್​ಗಳಾದ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಯಾದವ್ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಕೊಹ್ಲಿ ಹಾರ್ದಿಕ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೊಡುಗೆ ತಂಡಕ್ಕೆ ಇನ್ನೂ ಬೇಕಾಗಿದೆ. ಅಕ್ಷರ್ ಪಟೇಲ್ ಕಡೆಯಿಂದ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟ ನಿರೀಕ್ಷಿಸಲಾಗಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಕೂಡ ಭಾರತ ಬಿಗಿಯಾಗಬೇಕಿದೆ. ಕಳೆದ ಪಾಕ್ ವಿರುದ್ಧ ಮೊದಲ 10 ಓವರ್​ಗಳಲ್ಲಿ ಭಾರತೀಯ ಬೌಲರ್​ಗಳು ನೀಡಿದ್ದು ಕೇವಲ 60 ರನ್​ಗಳನ್ನು ಮಾತ್ರ. ಆದರೆ, ನಂತರದ 10 ಓವರ್​ಗಳಲ್ಲಿ 99 ರನ್ ನೀಡಿದ್ದರು. ಅದರಲ್ಲೂ ಡೆತ್​ ಓವರ್​ಗಳಲ್ಲಿ ರನ್ ಬಿಟ್ಟು ಕೊಟ್ಟ ಪರಿಣಾಮ ಪಾಕಿಸ್ತಾನ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಹೀಗಾಗಿ ಕಳೆದ ಒಂದು ವರ್ಷದಿಂದ ರೋಹಿತ್ ಪಡೆಯಲ್ಲಿ ಕಾಡುತ್ತಿರುವ ಡೆತ್ ಓವರ್​ಗಳ ಸಮಸ್ಯೆ ಸುಧಾರಿಸಬೇಕಿದೆ.

ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. 12 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ TV9Kannada.com ನಲ್ಲಿ ಈ ಪಂದ್ಯದ ಲೈವ್ ನವೀಕರಣಗಳನ್ನು ಸಹ ಓದಬಹುದು.

Published On - 8:37 am, Thu, 27 October 22