VIDEO: ಇವರಿಗೆ ಕಾಶ್ಮೀರ ಬೇಕಂತೆ…ಉಲ್ಟಾ ಧ್ವಜ ಹಿಡಿದ ಪಾಕ್ ಫ್ಯಾನ್ನ ಟ್ರೋಲ್ ಮಾಡಿದ ಭಾರತೀಯ
T20 World Cup 2022: ಭಾರತ-ಪಾಕಿಸ್ತಾನ್ ಈ ಬಾರಿಯ ವಿಶ್ವಕಪ್ನಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಿ, ಅಲ್ಲೂ ಎರಡೂ ತಂಡಗಳು ಗೆಲ್ಲಬೇಕಾಗುತ್ತದೆ.
T20 World Cup 2022: ಮೆಲ್ಬೋರ್ನ್ನಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ್ (India vs Pakistan) ನಡುವೆ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 53 ಎಸೆತಗಳಲ್ಲಿ 82 ರನ್ ಚಚ್ಚಿದ್ದರು. ಪರಿಣಾಮ ಅಂತಿಮ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲುವು ಒಲಿದಿತ್ತು. ಇದು ಮೈದಾನದಲ್ಲಿನ ಘಟನೆಯಾದರೆ, ಇತ್ತ ಸ್ಟೇಡಿಯಂನಲ್ಲೂ ಸ್ವಾರಸ್ಯಕರ ಘಟನೆಯೊಂದು ನಡೆದಿತ್ತು.
ಎಂಸಿಜಿ ಸ್ಟೇಡಿಯಂನಲ್ಲಿ ಭಾರತ-ಪಾಕ್ ನಡುವಣ ರೋಚಕ ಹಣಾಹಣಿಯನ್ನು ವೀಕ್ಷಿಸುತ್ತಾ ಉಭಯ ತಂಡಗಳ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದರು. ಈ ಜೋಶ್್ನಲ್ಲಿ ಪಾಕಿಸ್ತಾನದ ಅಭಿಮಾನಿಯೊಬ್ಬ ತಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಿಡಿದು ಹರ್ಷೋದ್ಘಾರದಲ್ಲಿ ತೊಡಗಿಸಿಕೊಂಡಿದ್ದ. ಇದನ್ನು ಗಮನಿಸಿದ ಭಾರತೀಯ ವ್ಯಕ್ತಿಯೊಬ್ಬರು ಧ್ವಜ ಉಲ್ಟಾ ಹಿಡಿದ್ದೀರಾ ಎಂದು ಸೂಚಿಸಿದ್ದಾರೆ. ಹಲವು ಬಾರಿ ಹೇಳಿದ ಬಳಿಕವಷ್ಟೇ ತಾನು ಪಾಕ್ ಧ್ವಜವನ್ನು ಉಲ್ಟಾ ಹಿಡಿರುವುದು ಆತನಿಗೆ ಗೊತ್ತಾಗಿದೆ.
ಈ ಸನ್ನಿವೇಶವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದ್ದು, ಇದೇ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿ…ಇವರಿಗೆ ಕಾಶ್ಮೀರ ಬೇಕಂತೆ ಎಂದು ಟ್ರೋಲ್ ಮಾಡುತ್ತಿರುವುದು ಕಾಣಬಹುದು. ಅಂದರೆ ಸ್ವಂತ ಧ್ವಜವನ್ನೇ ಸರಿಯಾಗಿ ಹಿಡಿಯಲು ಬರದವರು ಕಾಶ್ಮೀರ ಬೇಕೆಂದು ಹೇಳುತ್ತಿದ್ದಾರೆ ವ್ಯಂಗ್ಯವಾಡಿದ್ದಾರೆ.
ಇದೀಗ ಈ ಸ್ವಾರಸ್ಯಕರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅದರ ಜೊತೆ ಇವರಿಗೆಲ್ಲಾ ಕಾಶ್ಮೀರ ಬೇಕೆಂತೆ ಎನ್ನುವ ಡೈಲಾಗ್ ಕೂಡ ಸಖತ್ ಟ್ರೆಂಡ್ ಆಗಿರುವುದು ವಿಶೇಷ.
ಭಾರತ-ಪಾಕಿಸ್ತಾನ್ ಮುಂದಿನ ಪಂದ್ಯ ಯಾವಾಗ?
ಭಾರತ-ಪಾಕಿಸ್ತಾನ್ ಈ ಬಾರಿಯ ವಿಶ್ವಕಪ್ನಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಿ, ಅಲ್ಲೂ ಎರಡೂ ತಂಡಗಳು ಗೆಲ್ಲಬೇಕಾಗುತ್ತದೆ. ಅಂದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಇಲ್ಲಿ ಎರಡು ಗುಂಪುಗಳಾಗಿ 12 ತಂಡಗಳು ಮುಖಾಮುಖಿಯಾಗುತ್ತಿದೆ. ಇದರಲ್ಲಿ ಗ್ರೂಪ್-2 ನಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳಿವೆ. ಗ್ರೂಪ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಪಾಯಿಂಟ್ ಟೇಬಲ್ನಲ್ಲಿ ಭಾರತ-ಪಾಕಿಸ್ತಾನ್ ಮೊದಲೆರಡು ಸ್ಥಾನಗಳನ್ನು ಪಡೆದರೆ ಮಾತ್ರ ಸೆಮಿಫೈನಲ್ಗೇರಬಹುದು.
ಸೆಮಿಫೈನಲ್ನಲ್ಲಿ ಗ್ರೂಪ್-1 ಮತ್ತು ಗ್ರೂಪ್-2 ನಿಂದ ಎಂಟ್ರಿ ಕೊಡುವ ನಾಲ್ಕು ತಂಡಗಳು ಪರಸ್ಪರ ಸೆಣಸಲಿದೆ. ಅಂದರೆ ಭಾರತ-ಪಾಕಿಸ್ತಾನ್ ಗ್ರೂಪ್-2 ನಿಂದ ಸೆಮಿಫೈನಲ್ ಪ್ರವೇಶಿಸಿದ ಬಳಿಕ ಗ್ರೂಪ್-1 ತಂಡಗಳ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲೂ ಭಾರತ-ಪಾಕಿಸ್ತಾನ್ ತಂಡಗಳು ಗೆದ್ದು ಫೈನಲ್ಗೆ ಪ್ರವೇಶಿಸಬೇಕು. ಅಂದರೆ ಮಾತ್ರ ಮತ್ತೊಮ್ಮೆ ಭಾರತ-ಪಾಕಿಸ್ತಾನ್ ಕ್ರಿಕೆಟ್ ಕದನವನ್ನು ವೀಕ್ಷಿಸಬಹುದು. ಇಲ್ಲದಿದ್ದರೆ ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ವರೆಗೂ ಕಾಯಲೇಬೇಕಾಗುತ್ತದೆ.