SL W vs IND W: ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ

India Wins Women's Tri-Series Final: ಭಾರತ ಮತ್ತು ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 97 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸ್ಮೃತಿ ಮಂಧಾನ ಅವರ ಅದ್ಭುತ ಶತಕ (116 ರನ್) ಮತ್ತು ಸ್ನೇಹಾ ರಾಣಾ ಅವರ ಅತ್ಯುತ್ತಮ ಬೌಲಿಂಗ್ (4 ವಿಕೆಟ್) ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.

SL W vs IND W: ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ
India Women

Updated on: May 11, 2025 | 7:04 PM

ಶ್ರೀಲಂಕಾ, ಭಾರತ, ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ತ್ರಿಕೋನ ಸರಣಿಯ (Tri-Series) ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ (IND vs SL) ಮಹಿಳಾ ತಂಡಗಳ ನಡುವೆ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಫೈನಲ್ ಪಂದ್ಯವನ್ನು 97 ರನ್‌ಗಳಿಂದ ಏಕಪಕ್ಷೀಯವಾಗಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತಾ ಪಡೆ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ (Smriti Mandhana) ಅವರ ಶತಕ ಹಾಗೂ ಬೌಲರ್ ಸ್ನೇಹ್ ರಾಣಾ ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ಸುಲಭ ಜಯ ಸಾಧಿಸಿತು.

ಬೃಹತ್ ಟಾರ್ಗೆಟ್ ನೀಡಿದ ಭಾರತ

ಈ ಪಂದ್ಯದಲ್ಲಿ, ಭಾರತೀಯ ಮಹಿಳಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡದ ಪರ ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಮತ್ತೊಮ್ಮೆ ಉತ್ತಮ ಆರಂಭ ನೀಡಿದರು. ಪ್ರತೀಕಾ 30 ರನ್ ಗಳಿಸಿದರೆ, ಸ್ಮೃತಿ ಮಂಧಾನ ಶತಕ ಗಳಿಸಿದರು. ಮಂಧಾನ 101 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 116 ರನ್ ಕಲೆಹಾಕಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಮಂಧಾನ ಅವರ 11 ನೇ ಶತಕವಾಗಿದೆ. ಇದರೊಂದಿಗೆ, ಸ್ಮೃತಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸ್ಮೃತಿ ಮಂಧಾನಾ ಅವರಲ್ಲದೆ, ಹರ್ಲೀನ್ ಡಿಯೋಲ್, ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಕೂಡ ಅದ್ಭುತ ಬ್ಯಾಟಿಂಗ್ ಮಾಡಿದರು. ಹರ್ಲೀನ್ 47 ರನ್, ಹರ್ಮನ್ ಪ್ರೀತ್ 41 ರನ್ ಮತ್ತು ಜೆಮಿಮಾ 44 ರನ್ ಗಳಿಸಿ ತಂಡಕ್ಕೆ ನೆರವಾದರು. ದೀಪ್ತಿ ಶರ್ಮಾ ಅಜೇಯ 20 ರನ್ ಬಾರಿಸುವ ಮೂಲಕ ಇನ್ನಿಂಗ್ಸ್ ಮುಗಿಸಿದರು. ಇವರ ಆಟದಿಂದಾಗಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 342 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಮತ್ತೊಂದೆಡೆ ಶ್ರೀಲಂಕಾ ಪರ ಮಾಲಕಿ ಮಾದರ, ದೇವ್ಮಿ ವಿಹಂಗಾ ಮತ್ತು ಸುಗಂದಿಕಾ ಕುಮಾರಿ ತಲಾ 2 ವಿಕೆಟ್ ಪಡೆದರೆ, ಇನೋಕಾ ರಣವೀರ 1 ವಿಕೆಟ್ ಪಡೆದರು.

IPL 2025: ಪೂರ್ವ ನಿಗದಿತ ಸ್ಥಳಗಳಲ್ಲೇ ನಡೆಯಲಿವೆ ಐಪಿಎಲ್ ಪ್ಲೇಆಫ್‌, ಫೈನಲ್

ಸ್ನೇಹ್ ರಾಣಾ ಮಾಂತ್ರಿಕ ಬೌಲಿಂಗ್

343 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾದ ಆರಂಭ ತುಂಬಾ ಕೆಟ್ಟದಾಗಿತ್ತು. ಖಾತೆ ತೆರೆಯುವ ಮೊದಲೇ ತಂಡದ ಮೊದಲ ವಿಕೆಟ್ ಪತನವಾಯಿತು. ಆದಾಗ್ಯೂ, ನಾಯಕಿ ಚಾಮರಿ ಅಟಪಟ್ಟು ಅರ್ಧಶತಕ ಬಾರಿಸಿ ಕೊಂಚ ಹೋರಾಟ ನೀಡಿದರಾದರೂ, ಅವರಿಗೆ ಇತರ ಬ್ಯಾಟರ್​ಗಳಿಂದ ಬೆಂಬಲ ಸಿಗಲಿಲ್ಲ, ಇದರಿಂದಾಗಿ ಶ್ರೀಲಂಕಾ 48.2 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಅತ್ಯಂತ ಯಶಸ್ವಿ ಬೌಲರ್ ಸ್ನೇಹಾ ರಾಣಾ 9.2 ಓವರ್‌ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್ 3 ವಿಕೆಟ್‌ಗಳನ್ನು ಪಡೆದರು. ಶ್ರೀ ಚರಣಿ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Sun, 11 May 25