IND W vs AUS W: 15 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ! ಹಗಲು-ರಾತ್ರಿ ಟೆಸ್ಟ್​ಗೆ ಕ್ಷಣಗಣನೆ

IND W vs AUS W: ಭಾರತ ಮತ್ತು ಆಸ್ಟ್ರೇಲಿಯಾ ಕೊನೆಯದಾಗಿ 2006 ರಲ್ಲಿ ಟೆಸ್ಟ್ ಆಡಿದ್ದವು. ಆದರೆ ಭಾರತ ತಂಡದಲ್ಲಿ ಈಗ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಇಬ್ಬರೆ ಅಂದಿನ ಟೆಸ್ಟ್ ಪಂದ್ಯ ಆಡಿದ ಆಟಗಾರ್ತಿಯಾರಾಗಿದ್ದಾರೆ.

IND W vs AUS W: 15 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ! ಹಗಲು-ರಾತ್ರಿ ಟೆಸ್ಟ್​ಗೆ ಕ್ಷಣಗಣನೆ
ಭಾರತ-ಆಸ್ಟ್ರೇಲಿಯಾ ವನಿತೆಯರ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Sep 29, 2021 | 3:40 PM

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ಗೆದ್ದ ನಂತರ ಆತ್ಮವಿಶ್ವಾಸದಿಂದ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಗುರುವಾರ ಆರಂಭವಾಗಲಿರುವ ಆತಿಥೇಯರ ವಿರುದ್ಧದ ಹಗಲು ರಾತ್ರಿ ಟೆಸ್ಟ್​ಗೆ ತಯಾರಿ ನಡೆಸುತ್ತಿದೆ. ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ಮಿಥಾಲಿ ರಾಜ್ ತಂಡಕ್ಕೆ ಈ ಟೆಸ್ಟ್​ಗೆ ತಯಾರಾಗಲು ಕೇವಲ ಎರಡು ದಿನಗಳು ಸಿಕ್ಕವು. ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಜೊತೆಗೆ ಟೀಂ ಇಂಡಿಯಾ ಮೊಟ್ಟಮೊದಲ ಬಾರಿಗೆ ಗುಲಾಬಿ ಬಣ್ಣದ (ಪಿಂಕ್ ಬಾಲ್) ಚೆಂಡಿನ ಪಂದ್ಯವನ್ನು ಆಡುತ್ತಿದೆ. ನವೆಂಬರ್ 2017 ರಲ್ಲಿ ಆಸ್ಟ್ರೇಲಿಯಾ ಏಕೈಕ ಹಗಲು-ರಾತ್ರಿ ಟೆಸ್ಟ್ ಆಡಿದೆ. ಆದರೆ ಅವರೂ ಕೂಡ ಹೆಚ್ಚಿನ ಅಭ್ಯಾಸವನ್ನು ಪಡೆಯಲು ಸಾಧ್ಯವಾಗಲಿಲ್ಲ. ಭಾರತಕ್ಕೆ ಆಘಾತವೆಂಬಂತೆ ಹರ್ಮನ್‌ಪ್ರೀತ್ ಕೌರ್ ಈ ಟೆಸ್ಟ್‌ನಲ್ಲಿ ಭಾರತದ ಪರ ಆಡುವುದಿಲ್ಲ.

ಏಳು ವರ್ಷಗಳ ನಂತರ ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್ ಆಡಿದ ಭಾರತ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆದಾಗ್ಯೂ, ಆಟಗಾರರು ಮತ್ತು ತಜ್ಞರಿಗೆ ಪಿಂಕ್ ಬಾಲ್ ಟೆಸ್ಟ್​ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕೊನೆಯದಾಗಿ 2006 ರಲ್ಲಿ ಟೆಸ್ಟ್ ಆಡಿದ್ದವು. ಆದರೆ ಭಾರತ ತಂಡದಲ್ಲಿ ಈಗ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಇಬ್ಬರೆ ಟೆಸ್ಟ್ ಆಡಿದ ಆಟಗಾರ್ತಿಯಾರಾಗಿದ್ದಾರೆ. ಭಾರತದ ಮಾಜಿ ನಾಯಕಿ ಹಾಗೂ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ ಮಾತನಾಡಿ, ನಾನು ಇದನ್ನು ಭಾರತೀಯ ತಂಡದ ಲಿಟ್ಮಸ್ ಟೆಸ್ಟ್ ಎಂದು ಕರೆಯುತ್ತೇನೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಆಟಗಾರರು ಕೆಂಪು ಚೆಂಡನ್ನು ಕಡಿಮೆ ಆಡಿದ್ದಾರೆ. ಡೇ ನೈಟ್ ಟೆಸ್ಟ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಸವಾಲು ತುಂಬಾ ಕಠಿಣವಾಗಿದೆ. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದೆ ಆದರೆ ಅವರ ಆಟಗಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಆಸ್ಟ್ರೇಲಿಯಾವನ್ನು ಸೋಲಿಸಬಹುದೆಂದು ಭಾರತ ಏಕದಿನ ಸರಣಿಯಲ್ಲಿ ತೋರಿಸಿದೆ ಎಂದಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಔಟ್ ಈ ಟೆಸ್ಟ್​ಗೂ ಮುನ್ನ ಭಾರತಕ್ಕೆ ಹಿನ್ನಡೆಯಾಗಿದೆ. ತಂಡದ ಹಿರಿಯ ಬ್ಯಾಟರ್​ ಹರ್ಮನ್‌ಪ್ರೀತ್ ಕೌರ್‌ಗೆ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರು ನೆಟ್ ಅಭ್ಯಾಸದ ವೇಳೆ ಆದ ಹೆಬ್ಬೆರಳಿನ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಏಕದಿನ ಸರಣಿಯಲ್ಲಿ ಪರಿಣಾಮಕಾರಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಮೇಘನಾ ಸಿಂಗ್, ಬ್ಯಾಟರ್ ಯಾಸ್ತಿಕಾ ಭಾಟಿಯಾ ಟೆಸ್ಟ್​ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆಯಬಹುದು. ಅನುಭವಿ ಜೂಲನ್, ಮೇಘನಾ ಮತ್ತು ಪೂಜಾ ವಸ್ತ್ರಕರ್ ಅವರು ವೇಗದ ದಾಳಿಯನ್ನು ಮುನ್ನಡೆಸುತ್ತಾರೆ ಮತ್ತು ಸ್ನೇಹ್ ರಾಣಾ ಮತ್ತು ದೀಪ್ತಿ ಶರ್ಮಾ ಸ್ಪಿನ್ ಬೌಲಿಂಗ್‌ ನಿರ್ವಹಿಸಲಿದ್ದಾರೆ. ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಮರಳುವುದು ಖಚಿತವಾಗಿದ್ದು, ಏಕದಿನ ಸರಣಿಯಿಂದ ಹೊರಗುಳಿದಿದ್ದ ಪೂನಮ್ ರಾವುತ್ ಕೂಡ ಆಡಬಹುದು.

ಮತ್ತೊಂದೆಡೆ, ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ಹಿನ್ನಡೆ ಅನುಭವಿಸಿದೆ. ಅವರ ಉಪನಾಯಕಿ ರಾಚೆಲ್ ಹ್ಯಾನ್ಸ್ ಮಂಡಿ ನೋವಿನಿಂದಾಗಿ ಹೊರಗುಳಿದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನ್ನಾಬೆಲ್ ಸದರ್ ಲ್ಯಾಂಡ್ ಅವಕಾಶ ಪಡೆಯಬಹುದು.

ತಂಡಗಳು ಭಾರತ ಮಿಥಾಲಿ ರಾಜ್ (ಕ್ಯಾಪ್ಟನ್), ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ, ಶೆಫಾಲಿ ವರ್ಮಾ, ಪೂನಮ್ ರೌತ್, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಯಾಸ್ತಿಕಾ ಭಾಟಿಯಾ, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕ್ವಾಡ್ ರಿಚಾ ಘೋಷ್.

ಆಸ್ಟ್ರೇಲಿಯಾ ಮೆಗ್ ಲೆನ್ನಿಂಗ್ (ಕ್ಯಾಪ್ಟನ್), ಡಾರ್ಸಿ ಬ್ರೌನ್, ಮೆಟ್ಲಾನ್ ಬ್ರೌನ್, ಸ್ಟೆಲ್ಲಾ ಕ್ಯಾಂಪ್‌ಬೆಲ್, ನಿಕೋಲಾ ಕ್ಯಾರಿ, ಹನ್ನಾ ಡಾರ್ಲಿಂಗ್ಟನ್, ಆಶ್ಲೇ ಗಾರ್ಡ್ನರ್, ಅಲಿಸಾ ಹೀಲಿ, ತಹ್ಲಿಯಾ ಮೆಕ್‌ಗ್ರಾಥ್, ಸೋಫಿ ಮೊಲಿನೌ, ಬೆತ್ ಮೂನಿ, ಆಲಿಸ್ ಪೆರ್ರಿ, ಜಾರ್ಜಿಯಾ ರೆಡ್‌ಮೈನ್, ಅನೆಬೆಲಾನ್, ಬೆಲ್ಲಿ ಮೂನಿ , ಜಾರ್ಜಿಯಾ ವೇರ್ಹ್ಯಾಮ್

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ