RR vs RCB: ರಾಯಲ್​ಗೆ ರಾಯಲ್ಸ್​ ಚಾಲೆಂಜ್​: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ ಗೊತ್ತಾ?

RR vs RCB Head to Head: ಉಭಯ ತಂಡಗಳ ಕದನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಯಾರು ಎಂದು ನೋಡುವುದಾದರೆ, ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿದ್ದಾರೆ.

RR vs RCB: ರಾಯಲ್​ಗೆ ರಾಯಲ್ಸ್​ ಚಾಲೆಂಜ್​: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ ಗೊತ್ತಾ?
RR vs RCB
TV9kannada Web Team

| Edited By: Zahir PY

Sep 29, 2021 | 6:42 PM

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RCB vs RR) ಮುಖಾಮುಖಿಯಾಗಲಿದೆ. ದುಬೈ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲಲು ಉಭಯ ತಂಡಗಳು ರಣತಂತ್ರ ರೂಪಿಸಿದೆ. ದುಬೈ ಪಿಚ್​ ಬ್ಯಾಟಿಂಗ್ ಹಾಗೂ ಮೇಡಿಯಂ ಪೇಸ್​ ಬೌಲಿಂಗ್​​ ಸಹಕಾರಿಯಾಗಿದ್ದು, ಹೀಗಾಗಿ ಎರಡೂ ತಂಡಗಳು ಆಲ್​ರೌಂಡರ್​ ಬಳಗದೊಂದಿಗೆ ಕಣಕ್ಕಿಳಿಯಲಿದೆ. ಈ ಮೈದಾನದಲ್ಲಿ ಇದುವರೆಗೆ 62 ಟಿ20 ಪಂದ್ಯಗಳನ್ನಾಡಲಾಗಿದ್ದು, ಅದರಲ್ಲಿ 34 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಹಾಗೆಯೇ 27 ಬಾರಿ ಚೇಸಿಂಗ್ ತಂಡ ಗೆಲುವು ಸಾಧಿಸಿದೆ. ಇದರಿಂದ ದುಬೈ ಮೈದಾನವು ಮೊದಲು ಬ್ಯಾಟಿಂಗ್ ಮತ್ತು ಚೇಸಿಂಗ್​ಗೂ ಸಹಕಾರಿ ಎಂಬುದು ಸ್ಪಷ್ಟ.

ಇನ್ನು ಆರ್​ಆರ್​ ಹಾಗೂ ಆರ್​ಸಿಬಿ ಇದುವರೆಗೆ 24 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 10 ಬಾರಿ ರಾಜಸ್ಥಾನ್ ಗೆಲುವು ದಾಖಲಿಸುವಲ್ಲಿ ಸಫಲವಾಗಿದೆ. ಇನ್ನು 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿಲ್ಲ. ಇನ್ನು ಕೊನೆಯ 5 ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್​ ಆರ್​ಸಿಬಿ ವಿರುದ್ದ 2 ಗೆಲುವು ಮಾತ್ರ ದಾಖಲಿಸಿದೆ. ಹಾಗೆಯೇ ದುಬೈನಲ್ಲಿ ನಡೆದ ಕಳೆದ ಸೀಸನ್​ ಐಪಿಎಲ್​​ನಲ್ಲೂ ರಾಜಸ್ಥಾನ್ ವಿರುದ್ದ ಆರ್​ಸಿಬಿ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ. ಈ ಬಾರಿಯ ಮೊದಲಾರ್ಧದ ಪಂದ್ಯದಲ್ಲೂ ಆರ್​ಸಿಬಿ ಆರ್​ಆರ್​ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿತ್ತು. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಎಲ್ಲಾ ರೀತಿಯಲ್ಲೂ ರಾಜಸ್ಥಾನ್ ತಂಡಕ್ಕಿಂತ ಆರ್​ಸಿಬಿ ಮೇಲುಗೈ ಹೊಂದಿದೆ.

ಇನ್ನು ಉಭಯ ತಂಡಗಳ ಕದನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಯಾರು ಎಂದು ನೋಡುವುದಾದರೆ, ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿದ್ದಾರೆ. ಎಬಿಡಿ ಇದುವರೆಗೆ ಆರ್​ಆರ್​ ವಿರುದ್ದ 648 ರನ್ ಬಾರಿಸಿದ್ದಾರೆ. ಹಾಗೆಯೇ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ರಾಜಸ್ಥಾನ್ ವಿರುದ್ದ 554 ರನ್ ಕಲೆಹಾಕಿದ್ದಾರೆ. ಬೌಲರುಗಳ ವಿಭಾಗದಲ್ಲೂ ಆರ್​ಸಿಬಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಅಗ್ರಸ್ಥಾನದಲ್ಲಿದ್ದಾರೆ. ಚಹಲ್ ರಾಜಸ್ಥಾನ್ ವಿರುದ್ದ ಇದುವರೆಗೆ 16 ವಿಕೆಟ್ ಪಡೆದಿದ್ದಾರೆ. ಆದರೆ ಆರ್​ಸಿಬಿ ವಿರುದ್ದ ಪ್ರಸ್ತುತ ರಾಜಸ್ಥಾನ್​ ತಂಡದಲ್ಲಿರುವ ಯಾವೊಬ್ಬ ಬೌಲರ್ ಕೂಡ 9 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿಲ್ಲ ಎಂಬುದು ವಿಶೇಷ. ಅಂದರೆ ಆಟಗಾರರ ವಿಷಯದಲ್ಲೂ ರಾಜಸ್ಥಾನ್​ ತಂಡಕ್ಕಿಂತ ಆರ್​ಸಿಬಿ ಸಂಪೂರ್ಣ ಬಲಿಷ್ಠವಾಗಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್​ ವಿರುದ್ದ ಆರ್​ಸಿಬಿ ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿದ್ದು, ಅದರಂತೆ ದುಬೈ ಅಂಗಳದಲ್ಲಿ ಆರ್​ಸಿಬಿ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(IPL 2021: RR vs RCB Head to Head record in IPL)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada