AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND-A-W vs AUS-A-W: ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಮೇಲುಗೈ ಸಾಧಿಸಿದ ಭಾರತ

IND-A-W vs AUS-A-W: ಭಾರತ ಮಹಿಳಾ ಎ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಏಕೈಕ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೇಲುಗೈ ಸಾಧಿಸಿದೆ. ರಾಘವಿ ಬಿಷ್ಣೋಯ್ (86 ರನ್) ಮತ್ತು ಶಫಾಲಿ ವರ್ಮಾ (52 ರನ್) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ದಿನದ ಅಂತ್ಯಕ್ಕೆ 260/8 ರನ್ ಗಳಿಸಿ 254 ರನ್‌ಗಳ ಮುನ್ನಡೆ ಸಾಧಿಸಿದೆ.

IND-A-W vs AUS-A-W: ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಮೇಲುಗೈ ಸಾಧಿಸಿದ ಭಾರತ
Raghvi Bist
ಪೃಥ್ವಿಶಂಕರ
|

Updated on: Aug 23, 2025 | 8:37 PM

Share

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ಎ ತಂಡ (India Women’s A Cricket Team), ಆತಿಥೇಯ ತಂಡದ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಉಭಯ ತಂಡಗಳ ನಡುವೆ ಈಗಾಗಲೇ ಟಿ20 ಹಾಗೂ ಏಕದಿನ ಸರಣಿ ನಡೆದಿದ್ದು, ಆಸ್ಟ್ರೇಲಿಯಾ ತಂಡ ಟಿ20 ಸರಣಿಯನ್ನು ತನ್ನದಾಗಿಸಿಕೊಂಡರೆ, ಭಾರತ ತಂಡ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದೀಗ ನಡೆಯುತ್ತಿರುವ ನಾಲ್ಕು ದಿನಗಳ ಏಕೈಕ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿರುವಂತೆ ಕಾಣುತ್ತಿದೆ.

ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ತಂಡ 299 ರನ್​ಗಳಿಗೆ ಆಲೌಟ್ ಆದರೆ, ಆತಿಥೇಯ ಆಸ್ಟ್ರೇಲಿಯಾ ತಂಡ 205 ರನ್​ ಕಲೆಹಾಕುವ ಮೂಲಕ 6 ರನ್​ಗಳ ಮುನ್ನಡೆ ಪಡೆದುಕೊಂಡಿತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಘ್ವಿ ಬಿಶ್ತ್ (86 ರನ್) ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (52 ರನ್) ಅವರ ಅರ್ಧಶತಕಗಳ ನೆರವಿನಿಂದ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯಾ ಎ ವಿರುದ್ಧ ಉತ್ತಮ ಹಿಡಿತ ಸಾಧಿಸಿದೆ. ಈ ಇಬ್ಬರ ಇನ್ನಿಂಗ್ಸ್‌ನಿಂದಾಗಿ ದಿನದ ಆಟದ ಅಂತ್ಯದ ವೇಳೆಗೆ ಎಂಟು ವಿಕೆಟ್‌ಗಳಿಗೆ 260 ರನ್ ಕಲೆಹಾಕಿದ್ದು, ಒಟ್ಟು ಮುನ್ನಡೆಯನ್ನು 254 ರನ್‌ಗಳಿಗೆ ಹೆಚ್ಚಿಸಿದೆ.

ಭಾರತದ ಎರಡನೇ ಇನ್ನಿಂಗ್ಸ್

ಆರಂಭಿಕ ಜೋಡಿ ಶಫಾಲಿ ವರ್ಮಾ ಮತ್ತು ನಂದಿನಿ ಕಶ್ಯಪ್ 42 ರನ್‌ಗಳ ಜೊತೆಯಾಟವನ್ನು ನೀಡಿದರು. ನಂತರ ನಂದಿನಿ 12 ರನ್‌ಗಳಿಗೆ ಔಟಾದರು. ಆದರೆ ಶಫಾಲಿ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾದರು. ಶಫಾಲಿ 58 ಎಸೆತಗಳಲ್ಲಿ 52 ರನ್​ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು.

ಉಳಿದಂತೆ ಧರಾ ಗುರ್ಜರ್ 20 ರನ್​ಗಳ ಕೊಡುಗೆ ನೀಡಿದರೆ, ತೇಜಲ್ ಹಸ್ಬಾನಿಸ್ 39 ರನ್ ಗಳಿಸಿದರು. ರಾಘವಿ ಬಿಶ್ತ್ ಅತ್ಯಧಿಕ ರನ್ ಕಲೆಹಾಕುವ ಮೂಲಕ ತಂಡವನ್ನು 250 ರನ್​ಗಳ ಗಡಿ ತಲುಪಲು ಸಹಾಯ ಮಾಡಿದರು. ಆದಾಗ್ಯೂ, ರಾಘ್ವಿ ಶತಕ ಗಳಿಸುವಲ್ಲಿ ವಿಫಲರಾದರು. ರಾಘವಿ 119 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 86 ರನ್ ಗಳಿಸಿ ಔಟಾದರು. ತನುಶ್ರೀ ಸರ್ಕಾರ್ ಕೂಡ 25 ರನ್​ಗಳ ಕಾಣಿಕೆ ನೀಡಿದರು. ದಿನದಾಟದಂತ್ಯಕ್ಕೆ ಜೋಶಿತಾ ವಿಜೆ ಮತ್ತು ಟೈಟಾಸ್ ಸಾಧು ಅಜೇಯರಾಗಿ ಉಳಿದ್ದು, ಜೋಶಿತಾ 9 ರನ್ ಮತ್ತು ಟೈಟಾಸ್ 2 ರನ್ ಬಾರಿಸಿದ್ದಾರೆ.

ರಾಘ್ವಿ ಬಿಶ್ತ್ ಅಮೋಘ ಇನ್ನಿಂಗ್ಸ್

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 140 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಇನ್ನಿಂಗ್ಸ್ ನಿಭಾವಯಿಸಿದ ರಾಘ್ವಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆಸ್ಟ್ರೇಲಿಯಾ ಪರ, ಆಮಿ ಲೂಯಿಸ್ ಎಡ್ಗರ್ 4 ವಿಕೆಟ್ ಪಡೆದರೆ, ಜಾರ್ಜಿಯಾ ಪ್ರೆಸ್ಟ್‌ವಿಚ್ ಕೂಡ ಇಬ್ಬರನ್ನೂ ಔಟ್ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ