ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್​ಗೇರುವುದು ಕಷ್ಟಕರ; ರಾಹುಲ್ ದ್ರಾವಿಡ್

India's WTC Final Dream: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಟೀಂ ಇಂಡಿಯಾಗೆ ಕಠಿಣ ಸವಾಲಿದೆ. ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ. ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪ್ರಕಾರ, ನ್ಯೂಜಿಲೆಂಡ್ ಪ್ರವಾಸ ಯುವ ಆಟಗಾರರಿಗೆ ದೊಡ್ಡ ಪರೀಕ್ಷೆ. ಅನುಭವಿ ಆಟಗಾರರ ಅನುಪಸ್ಥಿತಿ ತಂಡಕ್ಕೆ ಮತ್ತಷ್ಟು ಸವಾಲೊಡ್ಡಲಿದೆ. ಫೈನಲ್ ತಲುಪಲು ಸಾಂಘಿಕ ಹೋರಾಟ ಅನಿವಾರ್ಯ.

ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್​ಗೇರುವುದು ಕಷ್ಟಕರ; ರಾಹುಲ್ ದ್ರಾವಿಡ್
Team India

Updated on: Aug 25, 2026 | 4:13 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ (World Test Championship) ಮೊದಲೆರಡು ಆವೃತ್ತಿಗಳಲ್ಲಿ ಫೈನಲ್​ಗೇರಿದ್ದ ಟೀಂ ಇಂಡಿಯಾ (Team India) ಎರಡೂ ಆವೃತ್ತಿಗಳ ಫೈನಲ್​ನಲ್ಲಿ ಮುಗ್ಗರಿಸಿ ಪ್ರಶಸ್ತಿಯಿಂದ ವಂಚಿತವಾಯಿತು. ಪ್ರಸ್ತುತ ನಡೆಯುತ್ತಿರುವ 4ನೇ ಆವೃತ್ತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಟೀಂ ಇಂಡಿಯಾಕ್ಕೆ ಅವಕಾಶವಿದೆಯಾದರೂ ಅದರ ಹಾದಿ ಅಷ್ಟು ಸುಲಭವಾಗಿಲ್ಲ. ಟೀಂ ಇಂಡಿಯಾ ಫೈನಲ್​ಗೇರಬೇಕೆಂದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಆದರೆ ಈ ಗೆಲುವಿಗೆ ಅಡ್ಡಿಯಾಗಿರುವುದು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳು. ಈ ತಂಡಗಳನ್ನು ಅವರ ನೆಲದಲ್ಲಿ ಮಣಿಸುವುದು ಇನ್ನು ಕಷ್ಟಕರ. ಹೀಗಾಗಿ ಟೀಂ ಇಂಡಿಯಾ ಫೈನಲ್​ಗೇರಬೇಕೆಂದರೆ ಸಾಂಘಿಕ ಹೋರಾಟದ ಅವಶ್ಯಕತೆ ಇದೆ. ಇದರ ನಡುವೆ ಟೀಂ ಇಂಡಿಯಾದ ಡಬ್ಲ್ಯೂಟಿಸಿ ಫೈನಲ್​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಟೀಂ ಇಂಡಿಯಾದ ಹಾದಿ ಸವಾಲಿನದ್ದಾಗಿದೆ ಎಂದಿದ್ದಾರೆ.

ರೇಸ್​ನಲ್ಲಿ ಸ್ವಲ್ಪ ಹಿಂದುಳಿದಿದೆ

ಈ ಬಗ್ಗೆ ಮಾತನಾಡಿರುವ ದ್ರಾವಿಡ್, ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದರ ಹೊರತಾಗಿಯೂ ಭಾರತ ಫೈನಲ್ ತಲುಪುವಲ್ಲಿ ಯಶಸ್ವಿಯಾಗಲಿದೆ ಎಂಬುದು ನನ್ನ ಅಭಿಪ್ರಾಯ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ತಂಡವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಟೀಂ ಇಂಡಿಯಾ ಈ ರೇಸ್​ನಲ್ಲಿ ಸ್ವಲ್ಪ ಹಿಂದುಳಿದಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಭಾರತ ತಂಡವು ತುಂಬಾ ಉತ್ತಮವಾಗಿದೆ. ಹೀಗಾಗಿ ಯಾವುದೇ ಮಟ್ಟದಲ್ಲಿ ಅದನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಪ್ರಾರಂಭಿಸಿರುವ ಟೀಂ ಇಂಡಿಯಾದ ಮೊದಲ ಹೆಜ್ಜೆ ತುಂಬಾ ಉತ್ತಮವಾಗಿದೆ.

IND vs SL: ಟೆಸ್ಟ್​ನಲ್ಲಿ ಈ ಸಾಧನೆ ಮಾಡಿದ 4ನೇ ಭಾರತೀಯ ಶುಭ್​ಮನ್ ಗಿಲ್

ಇದು ದೊಡ್ಡ ಸವಾಲಾಗಿರುತ್ತದೆ

ಆದರೆ ಭಾರತ ತಂಡ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಅವರ ತವರು ಪರಿಸ್ಥಿತಿಯಲ್ಲಿ ಆಡುವುದು ಯಾವಾಗಲೂ ಸವಾಲಿನದ್ದಾಗಿರುತ್ತದೆ. ಈ ಪ್ರವಾಸವು ಟೀಂ ಇಂಡಿಯಾಕ್ಕೆ ಕಠಿಣ ಪರೀಕ್ಷೆಯಾಗಬಹುದು, ವಿಶೇಷವಾಗಿ ಭಾರತೀಯ ತಂಡದ ಯುವ ಆಟಗಾರರಿಗೆ. ನ್ಯೂಜಿಲೆಂಡ್ ತಂಡ ಕಠಿಣ ಸವಾಲು ಒಡ್ಡುತ್ತದೆ. ಭಾರತದ ಅನೇಕ ಯುವ ಆಟಗಾರರು ನ್ಯೂಜಿಲೆಂಡ್‌ನಂತಹ ಪರಿಸ್ಥಿತಿಗಳಲ್ಲಿ ಆಡಿಲ್ಲ, ಆದ್ದರಿಂದ ಇದು ದೊಡ್ಡ ಸವಾಲಾಗಿರುತ್ತದೆ. ಈ ಪ್ರವಾಸಕ್ಕೆ ಭಾರತೀಯ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ, ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಂತಹ ಅನುಭವಿ ಆಟಗಾರರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಈ ಆಟಗಾರರು ಕಳೆದ ಬಾರಿ ಭಾರತ ನ್ಯೂಜಿಲೆಂಡ್ ಪ್ರವಾಸ ಮಾಡಿದಾಗ ತಂಡದಲ್ಲಿದ್ದರು. ಆದ್ದರಿಂದ, ಈ ಸರಣಿ ಆಸಕ್ತಿದಾಯಕವಾಗಿರುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Tue, 25 August 26

Loading...
Unable to load recommendations.
Follow Us