Shreyas Iyer: ಅದ್ಭುತ ಆಟಕ್ಕೆ ಸಂದ ಗೌರವ; ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಶ್ರೇಯಸ್ ಅಯ್ಯರ್!
CC Player of the Month award: ಶ್ರೇಯಸ್ ಅಯ್ಯರ್ ಯುಎಇ ಬ್ಯಾಟ್ಸ್‌ಮನ್ ವೃತ್ಯ ಅರವಿಂದ್ ಮತ್ತು ನೇಪಾಳದ ಆಲ್‌ರೌಂಡರ್ ದೀಪೇಂದರ್ ಸಿಂಗ್ ಐರಿ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಅರ್ಧಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ ಕಳೆದ ತಿಂಗಳೂ ಅಮೋಘ ಇನ್ನಿಂಗ್ಸ್‌ಗಳನ್ನು ಆಡಿದ್ದರು.
ಕಳೆದ ಕೆಲವು ವಾರಗಳು ಭಾರತೀಯ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (Shreyas Iyer)ಗೆ ಅತ್ಯುತ್ತಮವಾಗಿವೆ ಎಂಬುದು ಸಾಬೀತಾಗಿದೆ. ಮೊದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಐಪಿಎಲ್ 2022 (IPL 2022) ರ ಹರಾಜಿನಲ್ಲಿ ಬೃಹತ್ ಮೊತ್ತಕ್ಕೆ ಖರೀದಿಸಿತು. ನಂತರ ಅವರನ್ನು ತಂಡದ ನಾಯಕನಾಗಿ ನೇಮಿಸಲಾಯಿತು. ಮಾತ್ರವಲ್ಲದೆ, ಅವರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಕಳೆದ ತಿಂಗಳು ನಡೆದ ಏಕದಿನ ಹಾಗೂ ಟಿ20 ಪಂದ್ಯಗಳಲ್ಲೂ ಅವರು ಅಮೋಘ ಪ್ರದರ್ಶನ ನೀಡಿದರು. ಇದಕ್ಕೆ ಸರಿಯಾದ ಬಹುಮಾನವನ್ನು ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ಫೆಬ್ರವರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ (ICC Player of the Month Award) ಆಯ್ಕೆಯಾಗಿದ್ದಾರೆ.
ಶ್ರೇಯಸ್ ಅಯ್ಯರ್ ಯುಎಇ ಬ್ಯಾಟ್ಸ್‌ಮನ್ ವೃತ್ಯ ಅರವಿಂದ್ ಮತ್ತು ನೇಪಾಳದ ಆಲ್‌ರೌಂಡರ್ ದೀಪೇಂದರ್ ಸಿಂಗ್ ಐರಿ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಅರ್ಧಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ ಕಳೆದ ತಿಂಗಳೂ ಅಮೋಘ ಇನ್ನಿಂಗ್ಸ್‌ಗಳನ್ನು ಆಡಿದ್ದರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಶ್ರೇಯಸ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲಾಯಿತು ಮತ್ತು ಈ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡವು ಅವರನ್ನು ಒಮ್ಮೆಯೂ ಔಟ್ ಮಾಡಲು ಸಾಧ್ಯವಾಗಲಿಲ್ಲ.
Unveiling the ICC Players of the Month for February 2022 ?
⬇️ ⬇️ ⬇️
— ICC (@ICC) March 14, 2022
ಶ್ರೀಲಂಕಾ ವಿರುದ್ಧ 204 ರನ್‌ಗಳ ದಾಖಲೆ ಶ್ರೀಲಂಕಾ ವಿರುದ್ಧದ ಸರಣಿ ಶ್ರೇಷ್ಠ ಆಟಗಾರನಾಗಿ ಆಯ್ಕೆಯಾದ ಶ್ರೇಯಸ್ ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ಮೂರು ಪಂದ್ಯಗಳಲ್ಲಿ, ಅಯ್ಯರ್ ಅವರ ಬ್ಯಾಟ್ 174 ಸ್ಟ್ರೈಕ್ ರೇಟ್‌ನಲ್ಲಿ 204 ರನ್ ಗಳಿಸಿತು. ಅದೇ ಸಮಯದಲ್ಲಿ, ಈ ಸರಣಿಯ ಮೊದಲು ವೆಸ್ಟ್ ಇಂಡೀಸ್ ವಿರುದ್ಧ ಶ್ರೇಯಸ್ ಎರಡು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದರು. ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ 80 ರನ್ ಗಳಿಸಿದ್ದರು, ಅದರ ಆಧಾರದ ಮೇಲೆ ಟೀಂ ಇಂಡಿಯಾ ಗೆದ್ದಿತ್ತು. ನಂತರ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 25 ರನ್ ಗಳಿಸಿದ್ದರು.
ನ್ಯೂಜಿಲೆಂಡ್ ಆಲ್ ರೌಂಡರ್ಗೂ ಪ್ರಶಸ್ತಿ ಮಹಿಳೆಯರ ವಿಭಾಗದಲ್ಲಿ ಫೆಬ್ರವರಿ ತಿಂಗಳಲ್ಲಿ ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ಎಮಿಲಿಯಾ ಕರ್ ಅವರಿಗೆ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ನೀಡಲಾಯಿತು. 21 ವರ್ಷ ವಯಸ್ಸಿನ ಯುವ ಸ್ಪಿನ್-ಆಲ್-ರೌಂಡರ್ ಭಾರತ ವಿರುದ್ಧದ ಏಕದಿನ ಮತ್ತು ಟಿ 20 ಸರಣಿಯಲ್ಲಿ ವಿಶ್ವ ಕಪ್‌ಗೆ ಸ್ವಲ್ಪ ಮೊದಲು ಅದ್ಭುತ ಪ್ರದರ್ಶನ ನೀಡಿದರು. ಕರ್ ಈ ಪ್ರಶಸ್ತಿಯ ರೇಸ್‌ನಲ್ಲಿ ಭಾರತದ ನಾಯಕಿ ಮಿಥಾಲಿ ರಾಜ್ ಮತ್ತು ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಹಿಂದಿಕ್ಕಿದರು. ಕಿವೀಸ್ ಆಲ್ ರೌಂಡರ್ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಮತ್ತು ಅರ್ಧಶತಕದ ನೆರವಿನಿಂದ ಅತ್ಯಧಿಕ 353 ರನ್ ಗಳಿಸಿದರು. ಇಷ್ಟೇ ಅಲ್ಲ, ಎಮಿಲಿಯಾ ತನ್ನ ಲೆಗ್ ಸ್ಪಿನ್‌ನಲ್ಲಿ ಭಾರತೀಯ ಬ್ಯಾಟರ್ಗಳನ್ನು ಬಲೆಗೆ ಬೀಳಿಸುವ ಮೂಲಕ ಸರಣಿಯಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಸರಣಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.
ಇದನ್ನೂ ಓದಿ:Womens World Cup 2022: ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಹ್ಯಾಟ್ರಿಕ್ ಸೋಲು! ದಕ್ಷಿಣ ಆಫ್ರಿಕಾಗೆ ಗೆಲುವು
Published On - 4:54 pm, Mon, 14 March 22