Team India in 2023: ವಿಶ್ವಕಪ್, ಏಷ್ಯಾಕಪ್, ಡಬ್ಲ್ಯುಟಿಸಿ ಫೈನಲ್; 2023ರಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ ಹೀಗಿದೆ

Team India in 2023: ಈ ವರ್ಷ ಎರಡು ಐಸಿಸಿ ಈವೆಂಟ್​ಗಳಿದ್ದು, ಈ ವರ್ಷವಾದರೂ ಟೀಂ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅದರಂತೆ 2023 ರ ಟೀಮ್ ಇಂಡಿಯಾದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇಡೀ ವರ್ಷ ಟೀಂ ಇಂಡಿಯಾ ಫುಲ್ ಬ್ಯುಸಿಯಾಗಿರಲಿದೆ.

Team India in 2023: ವಿಶ್ವಕಪ್, ಏಷ್ಯಾಕಪ್, ಡಬ್ಲ್ಯುಟಿಸಿ ಫೈನಲ್; 2023ರಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ ಹೀಗಿದೆ
ರೋಹಿತ್ ಶರ್ಮಾ- ಹಾರ್ದಿಕ್ ಪಾಂಡ್ಯ
Follow us
TV9 Web
| Updated By: ಪೃಥ್ವಿಶಂಕರ

Updated on:Jan 01, 2023 | 11:51 AM

ಹಲವು ಏಳು- ಬೀಳುಗಳೊಂದಿಗೆ 2022ರ ವರ್ಷವನ್ನು ಮುಗಿಸಿರುವ ಟೀಂ ಇಂಡಿಯಾಕ್ಕೆ (Team India) ಇಡೀ ವರ್ಷ ಯಾವುದೇ ಐಸಿಸಿ ಈವೆಂಟ್​ಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಲಂಕಾ ವಿರುದ್ಧದ ತವರು ಸರಣಿಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲ್ಲಿರುವ ಟೀಂ ಇಂಡಿಯಾ (India vs Srilanka) 2023ರಲ್ಲಿ ಫುಲ್ ಬ್ಯುಸಿಯಾಗಿರಲಿದೆ. ಈಗಿನ ವೇಳಾಪಟ್ಟಿಯಂತೆ ಟೀಂ ಇಂಡಿಯಾ ಈ ವರ್ಷ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಅದೇ ಹೊತ್ತಿಗೆ ಐಪಿಎಲ್ (IPL) 16ನೇ ಸೀಸನ್​ನಲ್ಲಿ ಭಾರತದ ಆಟಗಾರರು ಸದ್ದು ಮಾಡಲಿದ್ದಾರೆ. ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲ್ಲಿರುವ ಟೀಂ ಇಂಡಿಯಾ ಅಲ್ಲಿಂದ ವಾಪಸ್ಸಾದ ನಂತರ ಭಾರತದಲ್ಲೇ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್ (World Cup) ನಲ್ಲಿ ಕಣಕ್ಕಿಳಿಯಲಿದೆ. ನಂತರ ಪಾಕಿಸ್ತಾನ ಆತಿಥ್ಯವಹಿಸಿರುವ ಏಷ್ಯಾಕಪ್ (Asia Cup) ಕೂಡ ಆಡಬೇಕಿದೆ. ಇವೆಲ್ಲ ಹೋರಾಟಗಳ ಬಳಿಕ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಇದರೊಂದಿಗೆ ಟೀಂ ಇಂಡಿಯಾ ವರ್ಷವನ್ನು ಅಂತ್ಯಗೊಳಿಸಲಿದೆ.

ಈ ವರ್ಷ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಬೇಕಾಗಿದ್ದು, ಟೀಮ್ ಇಂಡಿಯಾ ತವರಿನಲ್ಲಿ ಈ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಲಿದೆ. 2011 ರಲ್ಲಿ ಭಾರತ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ಆ ಬಳಿಕ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು ಬಿಟ್ಟರೆ, ಟೀಂ ಇಂಡಿಯಾದ ಖಾತೆಯಲ್ಲಿ ಯಾವುದೇ ಐಸಿಸಿ ಟ್ರೋಫಿಗಳು ಸೇರಿಲ್ಲ. ಹೀಗಾಗಿ ಈ ವರ್ಷ ಎರಡು ಐಸಿಸಿ ಈವೆಂಟ್​ಗಳಿದ್ದು, ಈ ವರ್ಷವಾದರೂ ಟೀಂ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅದರಂತೆ 2023 ರ ಟೀಮ್ ಇಂಡಿಯಾದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇಡೀ ವರ್ಷ ಟೀಂ ಇಂಡಿಯಾ ಫುಲ್ ಬ್ಯುಸಿಯಾಗಿರಲಿದೆ.

ಆಸೀಸ್​ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಔಟ್! ರಿಷಬ್ ಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ

ಶ್ರೀಲಂಕಾದ ಭಾರತ ಪ್ರವಾಸ

ಶ್ರೀಲಂಕಾದೊಂದಿಗಿನ ಸರಣಿ ಮೂಲಕ ಟೀಂ ಇಂಡಿಯಾ ವರ್ಷವನ್ನು ಆರಂಭಿಸಲಿದೆ. ಶ್ರೀಲಂಕಾದೊಂದಿಗೆ ಭಾರತವು ಮೂರು ಪಂದ್ಯಗಳ ಟಿ20 ಮತ್ತು ಅದೇ ಸಂಖ್ಯೆಯ ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

  1. ಮೊದನೇ ಟಿ20 – ಜನವರಿ 3, ವಾಂಖೆಡೆ ಸ್ಟೇಡಿಯಂ, ಮುಂಬೈ
  2. ಎರಡನೇ ಟಿ20 – ಜನವರಿ 5, ಎಂಸಿಎ ಸ್ಟೇಡಿಯಂ, ಮುಂಬೈ
  3. ಮೂರನೇ ಟಿ20 – ಜನವರಿ 7, ಎಸ್‌ಸಿಎ ಸ್ಟೇಡಿಯಂ, ರಾಜ್‌ಕೋಟ್
  4. ಮೊದನೇ ಏಕದಿನ ಪಂದ್ಯ – 10 ಜನವರಿ, ಬರ್ಸಾಪರಾ ಕ್ರೀಡಾಂಗಣ, ಗುವಾಹಟಿ
  5. ಎರಡನೇ ಏಕದಿನ ಪಂದ್ಯ – 12 ಜನವರಿ, ಈಡನ್ ಗಾರ್ಡನ್ಸ್ ಸ್ಟೇಡಿಯಂ, ಕೋಲ್ಕತ್ತಾ
  6. ಮೂರನೇ ಏಕದಿನ ಪಂದ್ಯ – 15 ಜನವರಿ, ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂ, ತಿರುವನಂತಪುರಂ

ನ್ಯೂಜಿಲೆಂಡ್, ಭಾರತ ಪ್ರವಾಸ

ಶ್ರೀಲಂಕಾ ವಿರುದ್ಧ ತವರು ಸರಣಿಯನ್ನು ಮುಗಿಸಿದ ಬಳಿಕ ಟೀಂ ಇಂಡಿಯಾ ಮತ್ತೊಮ್ಮೆ ತವರಿನಲ್ಲಿಯೇ ನ್ಯೂಜಿಲೆಂಡ್ ತಂಡವನ್ನು ಎದುರಿಸಬೇಕಾಗಿದೆ. ಈ ಎರಡೂ ತಂಡಗಳು ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯನ್ನೂ ಆಡಲಿವೆ.

  1. ಮೊದಲನೇ ಏಕದಿನ ಪಂದ್ಯ – ಜನವರಿ 18, ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ, ಹೈದರಾಬಾದ್
  2. ಎರಡನೇ ಏಕದಿನ ಪಂದ್ಯ – ಜನವರಿ 21, ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂ, ರಾಯ್ಪುರ
  3. ಮೂರನೇ ಏಕದಿನ ಪಂದ್ಯ – ಜನವರಿ 24, ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
  4. ಮೊದಲನೇ ಟಿ20 ಪಂದ್ಯ- 27 ಜನವರಿ, JSCA ಇಂಟರ್ನ್ಯಾಷನಲ್ ಸ್ಟೇಡಿಯಂ, ರಾಂಚಿ
  5. ಎರಡನೇ ಟಿ20 ಪಂದ್ಯ- 29 ಜನವರಿ, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
  6. ಮೂರನೇ ಟಿ20 ಪಂದ್ಯ- 1 ಫೆಬ್ರವರಿ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ

ನ್ಯೂಜಿಲೆಂಡ್ ನಂತರ ಭಾರತ ಆಸ್ಟ್ರೇಲಿಯ ತಂಡಕ್ಕೆ ಆತಿಥ್ಯ ವಹಿಸಲಿದೆ. ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಹೊರತಾಗಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

  1. ಮೊದಲನೇ ಟೆಸ್ಟ್- 9-13 ಫೆಬ್ರವರಿ, VCA ಸ್ಟೇಡಿಯಂ, ನಾಗ್ಪುರ
  2. ಎರಡನೇ ಟೆಸ್ಟ್- 17-21 ಫೆಬ್ರವರಿ, ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
  3. ಮೂರನೇ ಟೆಸ್ಟ್- 1-5 ಮಾರ್ಚ್, HPCA ಸ್ಟೇಡಿಯಂ, ಧರ್ಮಶಾಲಾ
  4. ಮೊದಲನೇ ಏಕದಿನ ಪಂದ್ಯ- ಮಾರ್ಚ್ 17 – ವಾಂಖೆಡೆ ಸ್ಟೇಡಿಯಂ, ಮುಂಬೈ
  5. ಎರಡನೇ ಏಕದಿನ ಪಂದ್ಯ- ಮಾರ್ಚ್ 19 – VDCA ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣಂ
  6. ಮೂರನೇ ಏಕದಿನ ಪಂದ್ಯ- ಮಾರ್ಚ್ 22 – MA ಚಿದಂಬರಂ ಸ್ಟೇಡಿಯಂ, ಚೆನ್ನೈ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಜೂನ್‌ನಲ್ಲಿ ನಡೆಯಲಿದೆ. ಇದರಲ್ಲಿ ಭಾರತ ತಂಡ ಫೈನಲ್ ತಲುಪುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಚಾಂಪಿಯನ್‌ಶಿಪ್ ನಡೆಯುವ ದಿನಾಂಕಗಳನ್ನು ಘೋಷಿಸಲಾಗಿಲ್ಲ. ಬಹುಶಃ ಜೂನ್ ಎರಡನೇ ವಾರದಲ್ಲಿ ಈ ಚಾಂಪಿಯನ್​ಶಿಪ್ ಪ್ರಾರಂಭವಾಗುವ ಸಾಧ್ಯತೆಗಳಿವೆ.

ವೆಸ್ಟ್ ಇಂಡೀಸ್​ಗೆ ಭಾರತದ ಪ್ರವಾಸ

ಜುಲೈ-ಆಗಸ್ಟ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ತಂಡವು ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಆದರೆ ಈ ಸರಣಿಯ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಆಸ್ಟ್ರೇಲಿಯಾದ ಭಾರತ ಪ್ರವಾಸ

ಮೊದಲು ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲ್ಲಿರುವ ಆಸ್ಟ್ರೇಲಿಯಾ ತಂಡ ನಂತರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ಕಾಲಿಡಲಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯ ಪಂದ್ಯಗಳ ದಿನಾಂಕಗಳು ಇನ್ನಷ್ಟೇ ಪ್ರಕಟವಾಗಬೇಕಿದೆ. ಇದಾದ ಬಳಿಕ ನವೆಂಬರ್‌ನಲ್ಲಿ ಮತ್ತೆ  ಭಾರತಕ್ಕೆ ಆಗಮಿಸಲಿರುವ ಆಸ್ಟ್ರೇಲಿಯಾ, ಇಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಏಷ್ಯಾಕಪ್-2023

ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಭಾಗವಹಿಸುವ ಬಗ್ಗೆ ಅನುಮಾನಗಳಿವೆ. ಒಂದು ವೇಳೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ, ಟೀಂ ಇಂಡಿಯಾ ಅಲ್ಲಿಗೆ ಹೋಗುವ ಸಾಧ್ಯತೆಗಳು ಕಡಿಮೆ ಇವೆ. ಆದ್ದರಿಂದ ಟೂರ್ನಿಯನ್ನೇ ಬೇರೆಡೆ ಆಡಿಸುವ ಸಾಧ್ಯತೆಗಳಿವೆ. ಆದರೆ ಈ ಟೂರ್ನಿಯ ವೇಳಾಪಟ್ಟಿಯನ್ನು ಸಹ ಇನ್ನೂ ಬಹಿರಂಗಪಡಿಸಲಾಗಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ವರ್ಷಾಂತ್ಯ

ವರ್ಷಾಂತ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಡಿಸೆಂಬರ್‌ನಿಂದ ಈ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಭಾರತ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Sun, 1 January 23

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ