AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸೀಸ್​ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಔಟ್! ರಿಷಬ್ ಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ

IND vs AUS: ಪ್ರಸ್ತುತ ಪಂತ್ ಬದಲಿ ಆಟಗಾರನಾಗಿ ರೇಸ್​ನಲ್ಲಿರುವ ಆಟಗಾರರ ಪೈಕಿ ಕೋನಾ ಭರತ್ ಮೊದಲಿಗರಾಗಿದ್ದಾರೆ. ಅವರ ನಂತರ ಭಾರತ ಎ ತಂಡದಲ್ಲಿ ಆಡುತ್ತಿರುವ ಉಪೇಂದ್ರ ಯಾದವ್ ಕೂಡ ರೇಸ್​ನಲ್ಲಿದ್ದಾರೆ. ಹಾಗೆಯೇ ವೈಟ್-ಬಾಲ್ ಸ್ಪೆಷಲಿಸ್ಟ್ ಇಶಾನ್ ಕಿಶನ್ ಕೂಡ ಈ ಸ್ಥಾನಕ್ಕೆ ಸೂಕ್ತ ಎಂತಲೇ ಹೇಳಲಾಗುತ್ತಿದೆ

ಆಸೀಸ್​ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಔಟ್! ರಿಷಬ್ ಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ
ರಿಷಬ್ ಪಂತ್
TV9 Web
| Edited By: |

Updated on:Jan 01, 2023 | 11:16 AM

Share

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್​ಕೀಯಲ್ಲಿರುವ ತನ್ನ ಮನೆಗೆ ರಿಷಭ್ ಪಂತ್ ತನ್ನ ಬೆನ್ಝ್​ ಕಾರ್​​ನಲ್ಲಿ ಬರ್ತಿದ್ರು. ಈ ವೇಳೆ ಪಂತ್​ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ದೆಹಲಿ-ಡೆಹ್ರಾಡೂನ್ ಹೈವೇನಲ್ಲಿ ರಭಸವಾಗಿ ಬಂದ ಕಾರು ಡಿವೈಡರ್​ಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದ್ದಲ್ಲದೆ, ಕಾರಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಅಷ್ಟರಲ್ಲಾಗಲೇ ಕಾರಿನಿಂದ ಹೊರಬಂದಿದೆ ಪಂತ್, ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಈ ಯುವ ಕ್ರಿಕೆಟರ್​ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸುದ್ದಿಯಾಗಿದೆ. ಆದರೆ ಅಪಘಾತಕ್ಕೀಡಾಗಿರುವ ಪಂತ್ ಕೆಲವು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯುವುದು ಅನಿವಾರ್ಯವಾಗಿದೆ. ಆದರೆ ಪಂತ್ ಎಷ್ಟು ದಿನ ಕ್ರಿಕೆಟ್​ನಿಂದ ದೂರವಿರಲಿದ್ದಾರೆ? ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.

ಪಂತ್ ಅವರ ಅತ್ಯಂತ ಗಂಭೀರವಾದ ಗಾಯವೆಂದರೆ ಅವರ ‘ಲಿಗಮೆಂಟ್ ಟಿಯರ್’. ಆದ್ದರಿಂದ ಬಿಸಿಸಿಐ ತನ್ನ ವೈದ್ಯರಿಂದಲೇ ಪಂತ್​ಗೆ ಚಿಕಿತ್ಸೆ ನೀಡುವುದಾಗಿ ಮ್ಯಾಕ್ಸ್ ಆಸ್ಪತ್ರೆ ವೈದ್ಯರ ಬಳಿ ಹೇಳಿಕೊಂಡಿದೆ. ಹೀಗಾಗಿ ಪಂತ್ ಮೈದಾನಕ್ಕೆ ಮರಳುವ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಆದರೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮೂಲಗಳ ಪ್ರಕಾರ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಪಂತ್ ಕಣಕ್ಕಿಳಿಯುವುದು ಅಸಾಧ್ಯವಾಗಿದೆ.

Finn Allen: 37 ಎಸೆತಗಳಲ್ಲಿ 78 ರನ್; ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ ಆರ್​ಸಿಬಿ ಆಟಗಾರ!

ಪಂತ್ ಬದಲಿ ಆಟಗಾರನ ಹುಡುಕಾಟದಲ್ಲಿ ಬಿಸಿಸಿಐ ನಿರತ

ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಸರಣಿಯನ್ನು ಗೆದ್ದರಷ್ಟೇ ಟೀಂ ಇಂಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಬಾಗಿಲು ತೆರೆಯಲಿದೆ. ಹೀಗಾಗಿ ಟೆಸ್ಟ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದ ಪಂತ್ ಬದಲಿ ಆಟಗಾರನ ಹುಡುಕಾಟದಲ್ಲಿ ಬಿಸಿಸಿಐ ನಿರತವಾಗಿದೆ. ಮೂಲಗಳ ಪ್ರಕಾರ ಪಂತ್​ ಸ್ಥಾನಕ್ಕೆ ಮೂವರು ಆಟಗಾರರ ನಡುವೆ  ಪೈಪೋಟಿ ಏರ್ಪಟ್ಟಿದೆ ಎಂಬುದು ತಿಳಿದು ಬಂದಿದೆ. ಪ್ರಸ್ತುತ ಪಂತ್ ಬದಲಿ ಆಟಗಾರನಾಗಿ ರೇಸ್​ನಲ್ಲಿರುವ ಆಟಗಾರರ ಪೈಕಿ ಕೋನಾ ಭರತ್ ಮೊದಲಿಗರಾಗಿದ್ದಾರೆ. ಅವರ ನಂತರ ಭಾರತ ಎ ತಂಡದಲ್ಲಿ ಆಡುತ್ತಿರುವ ಉಪೇಂದ್ರ ಯಾದವ್ ಕೂಡ ರೇಸ್​ನಲ್ಲಿದ್ದಾರೆ. ಹಾಗೆಯೇ ವೈಟ್-ಬಾಲ್ ಸ್ಪೆಷಲಿಸ್ಟ್ ಇಶಾನ್ ಕಿಶನ್ ಕೂಡ ಈ ಸ್ಥಾನಕ್ಕೆ ಸೂಕ್ತ ಎಂತಲೇ ಹೇಳಲಾಗುತ್ತಿದೆ.

ಈ ಮೂವರ ಹೊರತಾಗಿ ಸಂಜು ಸ್ಯಾಮ್ಸನ್ ಕೂಡ ಆಯ್ಕೆಗೆ

ಈಗ ಈ ತಿಂಗಳಲ್ಲೇ ಹೊಸದಾಗಿ ಆಯ್ಕೆಯಾಗುವ ಆಯ್ಕೆ ಸಮಿತಿಯ ಮುಂದೆ ಈ ಮೂರು ಆಯ್ಕೆಗಳಿವೆ. ಈ ಮೂವರಲ್ಲಿ ಇಬ್ಬರು ಇಂಡಿಯಾ ಎ ಕೀಪರ್‌ಗಳಾದ ಭರತ್ ಮತ್ತು ಉಪೇಂದ್ರ ಅವರು ಮುಖ್ಯ ತಂಡಕ್ಕೆ ನೇರವಾಗಿ ಆಯ್ಕೆಯಾಗುತ್ತಾರಾ ಅಥವಾ ಇಶಾನ್ ಕಿಶನ್ ಅವರಂತಹ ಎಡಗೈ ಆಟಗಾರನ ಮೇಲೆ ಆಯ್ಕೆ ಮಂಡಳಿ ನಂಬಿಕೆ ಇರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈ ಮೂವರ ಹೊರತಾಗಿ ಸಂಜು ಸ್ಯಾಮ್ಸನ್ ಕೂಡ ಆಯ್ಕೆಗೆ ಲಭ್ಯರಿದ್ದಾರೆ.

ತಾಂತ್ರಿಕವಾಗಿ, ಭರತ್ ಟೆಸ್ಟ್ ತಂಡದ ಎರಡನೇ ಕೀಪರ್ ಆಗಿರುವುದರಿಂದ ನಾಗ್ಪುರದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಉಪೇಂದ್ರ ಯಾದವ್​ ಕೂಡ ಉತ್ತಮ ಕೀಪರ್ ಮತ್ತು ಕ್ಲೀನ್ ಹಿಟ್ಟರ್ ಆಗಿದ್ದು, ಇದುವರೆಗೆ ಅವರ ಬ್ಯಾಟಿಂಗ್ ಸರಾಸರಿ 45 ಪ್ಲಸ್ ಇದೆ. ಹಾಗಾಗಿ ಅವರಿಗೂ ಆಯ್ಕೆ ಮಂಡಳಿ ಮಣೆ ಹಾಕುವ ಸಾಧ್ಯತೆಗಳಿವೆ. ಆದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಅನುಭವ ಹೊಂಡಿರುವ ಇಶಾನ್ ಅಥವಾ ಸಂಜು ಸ್ಯಾಮ್ಸನ್​ ಕೂಡ ಉತ್ತಮ ಆಯ್ಕೆಯಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sun, 1 January 23

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!