India vs Sri Lanka: ಭಾರತಕ್ಕೆ ಬಂದ ಶ್ರೀಲಂಕಾ ಕ್ರಿಕೆಟ್ ತಂಡ: ಇಂಡೋ-ಲಂಕಾ ಮೊದಲ ಪಂದ್ಯ ಯಾವಾಗ?
Sri Lanka Tour of India: ದಸುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡ ಶನಿವಾರ ಕೊಲಂಬೊದಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿತು. ಭಾರತ ಪ್ರವಾಸ ಬೆಳೆಸುವ ಮುನ್ನ ತಂಡದ ಸದಸ್ಯರು ಕೊಲಂಬೊದ ಶ್ರೀಲಂಕಾ ಕ್ರಿಕೆಟ್‌ನ ಪ್ರಧಾನ ಕಚೇರಿಯಲ್ಲಿ ನೆರೆದಿದ್ದರು.
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬಾಂಗ್ಲಾದೇಶ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದ ಭಾರತ ಕ್ರಿಕೆಟ್ ತಂಡ ಇದೀಗ ಹೊಸ ವರ್ಷದ ಮೊದಲ ಸರಣಿಗೆ ಸಜ್ಜಾಗುತ್ತಿದೆ. ತವರಿನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ (India vs Sri Lanka) ವಿರುದ್ಧ ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ. ಇದೀಗ ಸಿಂಹಳೀಯರು ಈ ಸರಣಿಗಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ದಸುನ್ ಶನಕಾ (Dasun Shanaka) ನೇತೃತ್ವದ ಶ್ರೀಲಂಕಾ ತಂಡ ಶನಿವಾರ ಕೊಲಂಬೊದಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿತು. ಭಾರತ ಪ್ರವಾಸ ಬೆಳೆಸುವ ಮುನ್ನ ತಂಡದ ಸದಸ್ಯರು ಕೊಲಂಬೊದ ಶ್ರೀಲಂಕಾ ಕ್ರಿಕೆಟ್‌ನ ಪ್ರಧಾನ ಕಚೇರಿಯಲ್ಲಿ ನೆರೆದಿದ್ದರು. ಲಂಕಾ ತನ್ನ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ ಇದರ ಫೋಟೋವನ್ನು ಹಂಚಿಕೊಂಡಿದೆ.
ಕಳೆದ ವರ್ಷ ಏಷ್ಯಾಕಪ್ ಗೆದ್ದು ಬೀಗಿದ್ದ ಶ್ರೀಲಂಕಾ ತಂಡ ಈಗ ಬಲಿಷ್ಠವಾಗಿದೆ. ಅಲ್ಲದೆ ಭಾರತದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ರಂತಹ ಸ್ಟಾರ್ ಆಟಗಾರರು ಇಲ್ಲದಿರುವುದು ಲಂಕಾಕ್ಕೆ ಪ್ಲಸ್ ಪಾಯಿಂಟ್ ಎನ್ನಬಹುದು. ಯುವ ಆಟಗರರಿಂದಲೇ ಕೂಡಿರುವ ಟೀಮ್ ಇಂಡಿಯಾಕ್ಕೆ ಇದೊಂದು ಅಗ್ನಿಪರೀಕ್ಷೆ. ಅನುಭವಿ ಲೆಗ್ ಸ್ಪಿನ್ನರ್ ವಾನಿಂದು ಹಸರಂಗ ಇದೇ ಮೊದಲ ಬಾರಿ ಶ್ರೀಲಂಕಾ ಟಿ20 ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಭಾನುಕ ರಾಜಪಕ್ಷ ಟಿ20 ಸರಣಿಗಷ್ಟೇ ಆಯ್ಕೆಯಾಗಿದ್ದಾರೆ. ನುವಾನ್ ತುಶಾರ ಅವರನ್ನು ಕೂಡ ಟಿ20 ಕ್ರಿಕೆಟ್‌ಗೆ ಅಷ್ಟೇ ತೆಗೆದುಕೊಳ್ಳಲಾಗಿದೆ.
Cristiano Ronaldo: ದಿನಕ್ಕೆ 4.8 ಕೋಟಿ ರೂ: 5ನೇ ಕ್ಲಬ್ ಪರ ಕಣಕ್ಕಿಳಿಯಲಿರುವ ಕ್ರಿಸ್ಟಿಯಾನೊ ರೊನಾಲ್ಡೊ
Sri Lanka limited over squad led by Dasun Shanaka left the SLC HQ premises short while ago to embark on their tour to India.? #INDvSL pic.twitter.com/qqzbE2d2kA
— Sri Lanka Cricket ?? (@OfficialSLC) December 31, 2022
ಇತ್ತ ಭಾರತ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇದೇ ಮೊದಲ ಬಾರಿ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ಉಪನಾಯಕನಾಗಿ ಆಯ್ಕೆ ಆಗಿದ್ದಾರೆ. ಋತುರಾಜ್ ಗಾಯಕ್ವಾಡ್ ಕಮ್‌ಬ್ಯಾಕ್ ಮಾಡಿದ್ದಾರೆ. ರಾಹುಲ್ ತ್ರಿಪಾಠಿ, ದೀಪಕ್ ಹೂಡ ಮತ್ತು ಸಂಜು ಸ್ಯಾಮ್ಸನ್ ಕೂಡ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಅಚ್ಚರಿಯ ಆಯ್ಕೆ ಎಂಬಂತೆ ಯುವ ಬೌಲರ್‌ಗಳಾದ ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ ಇದೇ ಮೊದಲ ಬಾರಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಸರಣಿಗೆ ಭಾರತ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಒಡಿಐ ಸರಣಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ.
ಭಾರತ- ಲಂಕಾ ನಡುವೆ ಆರಂಭದಲ್ಲಿ 3 ಪಂದ್ಯಗಳ ಟಿ20 ಸರಣಿ, ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜನವರಿ 3, 5 ಮತ್ತು 7ರಂದು ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಮುಂಬೈ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ಆಯೋಜನೆ ಆಗಲಿವೆ. ಏಕದಿನ ಸರಣಿ ಜ. 10, 12 ಮತ್ತು 15 ರಂದು ಕ್ರಮವಾಗಿ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಆಯೋಜಿಸಲಾಗಿದೆ.
ಭಾರತದ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ, ಮುಖೇಶ್ ಕುಮಾರ್.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪತುಮ್ ಸಿಸಂಕ, ಅವಿಷ್ಕಾ ಫರ್ನಾಂಡೊ, ಸಾದೀರಾ ಸಮರವಿಕ್ರಮ, ಕುಶಲ್ ಮೆಂಡಿಸ್ (ಉಪನಾಯಕ/ ಏಕದಿನ ಸರಣಿಗೆ), ಭಾನುಕ ರಾಜಪಕ್ಷ (ಟಿ20 ಸರಣಿಗೆ ಮಾತ್ರ), ಚರಿತ್ ಅಸಲಂಕ, ಧನಂಜಯ ಡಿ’ಸಿಲ್ವಾ, ವಾನಿಂದು ಹಸರಂಗ (ಉಪನಾಯಕ/ ಟಿ20 ಸರಣಿಗೆ ಮಾತ್ರ), ಅಶೇನ್ ಬಂಡಾರ, ಮಹೀಶ ತೀಕ್ಷಣ, ಜೆಫ್ರಿ ವಾಂಡೆರ್ಸೆ (ಒಡಿಐ ಸರಣಿಗೆ ಮಾತ್ರ), ಚಮಿಕಾ ಕರುಣಾರತ್ನೆ, ದಿಲ್ಷಾನ್ ಮಧುಶಂಕ, ಕಸುನ್ ರಜಿತ, ನುವಾನಿಂದು ಫರ್ನಾಂಡೊ (ಒಡಿಐ ಸರಣಿಗೆ ಮಾತ್ರ), ದುನಿತ್ ವೆಲ್ಲಾಲ್ಗೆ, ಪ್ರಮೋದ್ ಮದುಶಾನ್, ಲಾಹಿರು ಕುಮಾರ, ನುವಾನ್ ತುಶಾರ (ಟಿ20 ಸರಣಿಗೆ ಮಾತ್ರ).
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:14 am, Sun, 1 January 23